ಮಾಂಜರಿ 29: ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವತಿಯಿಂದ ಡಿ.5 ಹಾಗೂ 6 ರಂದು ನಡೆದ ಬೆಂಗಳೂರಿನ ರಾಜೀವ್ ಗಾಂಧಿ ಯೂನಿವರ್ಸಿಟಿ ವಿಭಾಗಿಯ ಮಹಿಳೆಯರ ಟೆನಿಕ್ವಾಯಿಟ್ (Tennikoit Tournament) ಸ್ಪರ್ಧೆಯಲ್ಲಿ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಡಾ.ಎನ್. ಎ. ಮಗದುಮ್ ಆಯುರ್ವೇದ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರಾದ ಅಂತಿಮ ವರ್ಷದ ಕು. ಶಿವಾನಿ ವಾಲಿಕಾರ ಹಾಗೂ ಪ್ರಥಮ ವರ್ಷದ ಕು. ಮೃನಾಲ್ ಶಿಂಧೆ ವಿದ್ಯಾರ್ಥಿನಿಯರು ಭಾಗವಹಿಸಿ, ಪ್ರಥಮ ಸ್ಥಾನವನ್ನು ಪಡೆದು ಮಹಾ ವಿದ್ಯಾಲಯದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ.
ಇದಕ್ಕೂ ಮೊದಲು ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ದಾವಣಗೆರೆಯಲ್ಲಿ, ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ, ಅಲ್ಲಿಯೂ ಸಹ ಪ್ರಥಮ ಸ್ಥಾನ ಪಡೆದಿದ್ದರು.
ಈ ಕೀರ್ತಿಗೆ ಭಾಜನರಾದ ವಿದ್ಯಾರ್ಥಿಗಳಿಗೆ, ಡಾ. ಎನ್. ಎ. ಮಗದುಮ್ , ನಿರ್ದೇಶಕರು, ಪ್ರಾಚಾರ್ಯರು, ಸಹ ಪಾಠಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.