ಪಾದರಾಯನಪುರ ಘಟನೆ; ಮುಲಾಜಿಲ್ಲದೆ ಬಂಧಿಸಿ ಕಠಿಣ‌‌ ಕ್ರಮ ಜರುಗಿಸುವಂತೆ ಸಿ.ಟಿ.ರವಿ ಒತ್ತಾಯ

ಬೆಂಗಳೂರು, ಏ.20,ಪಾದರಾಯನಪುರದಲ್ಲಿ  ವೈದ್ಯಕೀಯ ಹಾಗೂ ಪೊಲೀಸ್ ಸಿಬ್ಬಂದಿ ವಿರುದ್ಧ ದೌರ್ಜನ್ಯ ನಡೆಸುವ ಪ್ರಯತ್ನ  ಮಾಡಿದವರನ್ನು ಮುಲಾಜಿಲ್ಲದೆ ಬಂಧಿಸಿ ಕಠಿಣ‌‌ ಕ್ರಮ ಜರುಗಿಸಬೇಕು ಎಂದು ಪ್ರವಾಸೋದ್ಯಮ  ಸಚಿವ ಸಿ.ಟಿ.ರವಿ ಆಗ್ರಹಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ  ಪುಂಡರನ್ನು ನಿಯಂತ್ರಿಸದಿದ್ದರೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು  ಬರುತ್ತದೆ.‌ ಹೀಗಾಗಿ ಈ ರೀತಿ ಪುಂಡಾಟ ಮಾಡಿದವರನ್ನು ಕೂಡಲೇ  ಬಂಧಿಸಿ ಕಠಿಣ ಕ್ರಮ  ಜರುಗಿಸಬೇಕು. ಗೃಹ ಸಚಿವರು ಇಂತಹವರನ್ನು ಮಟ್ಟ ಹಾಕಬೇಕು ಎಂದು ಒತ್ತಾಯ ಮಾಡಿದ್ದೇನೆ.  ಇಂತಹ ಜನರಿಗೆ ಸಂಯಮದ ಪಾಠ ಅಗತ್ಯವಿಲ್ಲ. ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಉತ್ತರ  ನೀಡಬೇಕು ಎಂದು ಕಿಡಿಕಾರಿದರು.