ಕೆಎಂಎಫ್ ಮಳಿಗೆಗಳ ಮೂಲಕ ಹಣ್ಣು-ತರಕಾರಿ ಮಾರಾಟ ಮಾಡಲು ಅವಕಾಶ

ತುಮಕೂರು, ಏ.28ಕೋವಿಡ್-19೯ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೈತರು ಬೆಳೆದಿರುವ ಹಣ್ಣು-ತರಕಾರಿಗಳನ್ನು ಕೆಎಂಎಫ್ ಸಹಯೋಗದಲ್ಲಿ ನಂದಿನಿ ಪಾರ್ಲರ್, ಫ್ರಾಂಚೈಸಿಗಳಲ್ಲಿ ನೇರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ರಘು.ಬಿ  ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಲಾಕ್‌ಡೌನ್ ಘೋಷಿಸಲಾಗಿರುವುದರಿಂದ ಹಾಳಾಗುವಂತಹ ಹಣ್ಣು, ತರಕಾರಿ ಮತ್ತು ಹೂವು ಬೆಳೆಗಳನ್ನು ಬೆಳೆಯುತ್ತಿರುವ ರೈತರು ಸೂಕ್ತ ಮಾರುಕಟ್ಟೆ ಇಲ್ಲದೆ ಹಾಗೂ ದರ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಾರರ ಉತ್ಪನ್ನಗಳನ್ನು ಮಾರಾಟ ಮಾಡಲು ಹಾಗೂ ಉತ್ತಮ ಬೆಲೆಯನ್ನು ದೊರಕಿಸುವ ಸಲುವಾಗಿ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿನ ಎಲ್ಲ ನಂದಿನಿ ಪಾರ್ಲರ್‌ಗಳ ಮುಂದೆ ನೇರವಾಗಿ ಹೂವು, ಹಣ್ಣು, ತರಕಾರಿಗಳನ್ನು ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ.
ಮಳಿಗೆಗಳ ಮುಂದೆ ಮಾರಾಟ ಮಾಡುವ ರೈತರು ಸ್ವಚ್ಛತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ತೋಟಗಾರಿಕೆ ಉತ್ಪನ್ನಗಳನ್ನು ಬೆಳಿಗ್ಗೆ 6  ರಿಂದ ರಾತ್ರಿ 8 ಗಂಟೆಯವರೆಗೆ ಮಾರಾಟ ಮಾಡಲು ಸಮಯವನ್ನು ನಿಗಧಿಪಡಿಸಿದ್ದು, ಮಾರಾಟ ಮಾಡಲು ಅವಶ್ಯವಿರುವ ತೂಕದ ಯಂತ್ರ ಮತ್ತು ಇತರ ಸಾಮಾಗ್ರಿಗಳನ್ನು ರೈತರು ತಂದು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಉಳಿದ ಹಣ್ಣು-ತರಕಾರಿಗಳನ್ನು ಆಯಾ ದಿನವೇ ವಾಪಸ್ಸು ತೆಗೆದುಕೊಂಡು ಹೋಗುವುದು. ಜಿಲ್ಲೆಯ ರೈತರು ಇಚ್ಛಿಸಿದ್ದಲ್ಲಿ ಬೆಂಗಳೂರು ಪಶ್ಚಿಮ, ನೆಲಮಂಗಲ ಮತ್ತು ತುಮಕೂರಿನಲ್ಲಿರುವ ಒಟ್ಟು ೩೫ ನಂದಿನಿ ಶಾಪ್/ಪಾರ್ಲರ್/ಫ್ರಾಂಚೈಸಿಗಳ ಮುಂದೆ ಮಾರಾಟ ಮಾಡಲು ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕುಗಳ ಹಿರಿಯ ಸಹಾಯಕ ನಿರ್ದೇಶಕರ ದೂರವಾಣಿ ಸಂಖ್ಯೆ ಇಂತಿದೆ:  ಉಪನಿರ್ದೇಶಕರು, ತುಮಕೂರು ೦೮೧೬-೨೨೭೫೧೮೯/೨೯೭೦೩೧೦; ಮಾರುಕಟ್ಟೆ ಉಪ ವ್ಯವಸ್ಥಾಪಕರಾದ ವಿದ್ಯಾನಂದ ದೂ.ಸಂ; ೭೭೬೦೯೬೫೨೯೯; ಹಿರಿಯ ಸಹಾಯಕ ನಿರ್ದೇಶಕರು ತುಮಕೂರು-೯೯೪೫೭೯೨೭೨೫; ಗುಬ್ಬಿ-೯೬೮೬೦೫೬೭೦೫; ಚಿಕ್ಕನಾಯಕನಹಳ್ಳಿ-೯೫೩೮೨೭೨೯೬೪; ಕುಣಿಗಲ್-೯೪೪೮೬೬೦೭೬೬; ತಿಪಟೂರು-೯೮೮೬೮೯೬೮೧೬; ತುರುವೇಕೆರೆ-೯೮೮೦೦೪೯೭೫೫; ಕೊರಟಗೆರೆ-೯೫೩೫೭೮೧೯೬೩; ಮಧುಗಿರಿ-೯೪೪೮೪೪೮೯೭೦; ಶಿರಾ-೯೯೪೫೭೩೫೨೯೭; ಪಾವಗಡ-೯೮೪೪೦೪೨೩೫೬ಗೆ ಸಂಪರ್ಕಿಸಿ ರೈತರು ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.