ಪೋಷನ ಅಭಿಯಾನ ಸಭೆ

Nutrition campaign meeting

ಪೋಷನ ಅಭಿಯಾನ ಸಭೆ

ಆಲಮಟ್ಟಿ 18: ಬೆಂಗಳೂರಿನಲ್ಲಿ ಸೋಮವಾರ ಐಎಎಸ್ ಅಧಿಕಾರಿ ಗೌರವ ಗುಪ್ತ ಎಸಿಎಸ್ ರವರ ನೇತೃತ್ವದಲ್ಲಿ ನಡೆದ ಮಧ್ಯಾಹ್ನದ ಉಪಹಾರ ಯೋಜನಾ ಸಮಿತಿ ಸಭೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಭಾಗ ವಹಿಸಿ ಬಿಸಿಯೂಟ ಯೋಜನೆಯ ಹಲವಾರು ಪ್ರಮುಖ ವಿಷಯ ಕುರಿತು ಚರ್ಚಿಸಿದರು.  

      ಪಿಎಂ ಪೋಷನ್ ಅಭಿಯಾನ ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ ನಾಗೇಶ, ರಾಜ್ಯಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸೇರಿದಂತೆ ಸಂಘದ ಪ್ರಮುಖರು ಪಾಲ್ಗೊಂಡಿದ್ದರು.   

     ಸಭೆಯಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಯಲ್ಲಿನ ಒತ್ತಡಗಳ ಬಗ್ಗೆ ಸುದೀರ್ಘ ಚರ್ಚಿಸಲಾಯಿತು. ಮೊಟ್ಟೆ ದರ ಹೆಚ್ಚಿಸುವ ಬಗ್ಗೆ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಬಿಸಿಯೂಟ ಯೋಜನೆ ವಿಸ್ತರಿಸುವ ಕುರಿತು ಸಮಾಲೋಚನೆ ನಡೆಯಿತು. ಬೇಸಿಗೆ ರಜೆಯಲ್ಲಿ ಬಿಸಿಯೂಟ ಕೆಲಸ ನಿರ್ವಹಿಸುವ ಶಿಕ್ಷಕರಿಗೆ ಗಳಿಕೆ ರಜೆ ನೀಡಬೇಕೆಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿಕೊಂಡರು.  

     ಅಡುಗೆ ವೆಚ್ಚ ಬದಲಾವಣೆಯಾದ ಕುರಿತು ಹಾಗೂ ಇನ್ನಿತರ ಮಧ್ಯಾಹ್ನ ಉಪಹಾರ ಯೋಜನೆಯ ಚಟುವಟಿಕೆಗಳ ಬಗ್ಗೆ ಮೇಲಾಧಿಕಾರಿಗಳ ಗಮನ ಸೆಳೆಯಲಾಯಿತು. 60 ವರ್ಷ ವಯೋಮಿತಿ ತುಂಬಿದ ಮೇಲೆ ಅಡುಗೆ ಸಿಬ್ಬಂದಿಗಳಿಗೆ ಹಾಗೂ 15 ವರ್ಷ ಕೆಲಸ ಮಾಡಿದರೆ 30,000 ರೂ, ಮತ್ತು 15 ವರ್ಷಕ್ಕಿಂತ ಹೆಚ್ಚು ಅವಧಿಗಳ ಕಾಲದವರೆಗೆ ಕೆಲಸ ಮಾಡಿದ ಸಿಬ್ಬಂದಿಯವರಿಗೆ 40,000 ರೂ, ನೀಡುವ ಕುರಿತು ಚರ್ಚಿಸಲಾಯಿತು.  

    ಸಭೆಯಲ್ಲಿ ಎಸಿಎಸ್ ಅಧಿಕಾರಿ ಗೌರವ ಗುಪ್ತ ಐಎಎಸ್ ರವರು, ಐಎಎಸ್ ಅಧಿಕಾರಿಗಳಾದ ರಶ್ಮಿ ಮೇಡಂ, ಡಾ, ತ್ರೀಲೋಕ ಚಂದ್ರ, ಕುರ್ಮಾರಾವ್ ಸೇರಿದಂತೆ ವಿವಿಧ ಅಧಿಕಾರಿಗಳು ಎನ್‌.ಜಿ.ಓ ಸಂಘಟನೆಯ ತೇಜಸ್ವಿನಿ ಅನಂತಕುಮಾರ, ಹುಕ್ಕೇರಿ ಸ್ವಾಮೀಜಿಯವರು, ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಪೋಟೋ : ಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನ ಉಪಹಾರ ಯೋಜನಾ ಸಮಿತಿ ಸಭೆ ಜರುಗಿತು.ಸಭೆಯಲ್ಲಿ ಕನಾ9ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ ನಾಗೇಶ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸೇರಿದಂತೆ ವಿವಿಧ ಸಂಘಟನೆಯ ಪ್ರಮುಖರು ಭಾಗವಹಿಸಿದರು.