ಶಿಕ್ಷಣ ಇಲಾಖೆಯಿಂದ ಶಾಲಾ‌ ಕಟ್ಟಡ ದುರಸ್ತಿಗೆ ಹೊಸ ಆ್ಯಪ್

ಬೆಂಗಳೂರು, ಮಾ‌ 23, ಸಾರ್ವಜನಿಕರು ಸಂಘ ಸಂಸ್ಥೆಗಳು ಶಾಲಾ ಕಟ್ಟಡಗಳ ನಿರ್ವಹಣೆಗೆ ಮುಂದೆ ಬಂದಿದ್ದು, ಅವರಿಗೆ ಅನುಕೂಲವಾಗುವಂತೆ ಶಿಕ್ಷಣ ಇಲಾಖೆಯಿಂದ ಹೊಸ ಆ್ಯಪ್ ಪರಿಚಯಿಸಲಾಗಿದ್ದು ಏಪ್ರಿಲ್ ಎರಡನೇ ವಾರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಶ್ರೀಕಂಠೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲವರು ಗ್ರಂಥಾಲಯ  ಕಟ್ಟಡ  ದುರಸ್ತಿಗೆ ಸಹಕಾರಕ್ಕೆ ಮುಂದೆ ಬಂದಿದ್ದಾರೆ. ಸಹಕರಿಸಲು ಬಂದವರಿಗೆ ಇಲಾಖೆ ವತಿಯಿಂದ ಆ್ಯಪ್ ಪರಿಚಯಿಸಲಾಗುತ್ತಿದೆ. ರಾಜ್ಯದ ಅನೇಕ ಕಡೆ ಸ್ವಯಂಪ್ರೇರಿತರಾಗಿ ದಾನಿಗಳು ಮತ್ತು ಸಂಘಸಂಸ್ಥೆಗಳು ಶಾಲಾ ಕೊಠಡಿ ನಿರ್ಮಾಣ, ದುರಸ್ತಿಗೆ ಮುಂದೆ ಬಂದಿದ್ದಾರೆ‌. ಅದರಲ್ಲಿ ವನಯಾತ್ರೆ ಸಂಘಸಂಸ್ಥೆಯು ಶಾಲಾ ಕೊಠಡಿಗಳನ್ನು ನಿರ್ಮಿಸಲು ಮುಂದೆ ಬಂದಿದೆ. ಹೀಗೆ ಅನೇಕ ಸಂಘಸಂಸ್ಥೆಗಳು ಸಾರ್ವಜನಿಕರು ಶೌಚಾಲಯ ಕಟ್ಟಡ ಮರುನಿರ್ಮಾಣ ಕಾಂಪೌಂಡ್ ನಿರ್ಮಾಣಕ್ಕೆ ಸರ್ಕಾರದ ವಿನ್ಯಾಸಕ್ಕೆ ತಕ್ಕಂತೆ ನಿರ್ಮಾಣ ಮಾಡಲು ಸೂಚಿಸಿರುವುದಾಗಿ ಹೇಳಿದರು.

ರಾಜ್ಯದಲ್ಲಿ 43,282, ಸರ್ಕಾರಿ ಪ್ರಾಥಮಿಕ 4724 ಪ್ರೌಢ ಶಾಲೆಗಳು ಸೇರಿದಂತೆ 50ಸಾವಿರ ಶಾಲೆಗಳು ಇದ್ದು, ಕಳೆದ ವರ್ಷದ ಪ್ರವಾಹದಿಂದಾಗಿ 6196 ಶಾಲೆಯ 13260 ಕೊಠಡಿಗಳು ಹಾಳಾಗಿವೆ. ದುರಸ್ತಿಗಾಗಿ 199ಕೋಟಿ ರೂ ಹಣ ಬಿಡಗಡೆ ಮಾಡಲಾಗಿದೆ ಎಂದರು. ಆರ್‌ಐ‌ಡಿ ಎಫ್ ನಿಧಿಯಿಂದ 713 ಪ್ರೌಢ ಶಾಲೆಗಳ ಕೊಠಡಿ ದುರಸ್ತಿಗೆ 69ಕೋಟಿ ಹಾಗೂ ಶಾಲೆಗಳಲ್ಲಿ ದುರಸ್ತಿ ಸೇರಿದಂತೆ ಮತ್ತಿತರ ಕೆಲಸ ಆರಂಭಿಸಲು 788 ಕೋ ರೂ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಸರ್ಕಾರದ ವತಿಯಿಂದ ಮಾತ್ರವೇ ಶಾಲೆ ನಿರ್ಮಾಣ ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ದಾನಿಗಳು ಸಂಘಸಂಸ್ಥೆಗಳು ಸೇರಿದಂತೆ ಮತ್ತಿತರರಿಗೆ ಮನವಿ ಮಾಡಿಕೊಂಡಿದ್ದು ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಮುಂದಿನ ಶೈಕ್ಷಣಿಕ ಅವಧಿ ಆರಂಭದ ಹೊತ್ತಿಗೆ ನಮಗೆ ಹೆಚ್ಚಿನ ಕೊಠಡಿ ಲಭ್ಯವಾಗಲಿವೆ ಎಂದು ಸಚಿವರು ಮಾಹಿತಿ ನೀಡಿದರು. ಸ್ಥಳೀಯ ಸಂಘ ಸಂಸ್ಥೆಗಳು ನಿರ್ವಹಣೆ ಮಾಡುತ್ತಿರುವ ಸರ್ಕಾರಿ ಶಾಲೆಗಳಲ್ಲಿನ ಕೊಠಡಿ ದುರಸ್ತಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಸಂಬಂಧ ಸ್ಥಳಿಯ ಆಯುಕ್ತ ಸಭೆ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.