ತಹಶೀಲ್ದಾರ್ ಕಚೇರಿಗೆ ನೂತನ ಎಸಿ ವಸ್ತ್ರದ ಭೇಟಿ
ದೇವರಹಿಪ್ಪರಗಿ, 04 : ಪಟ್ಟಣದ ತಹಶೀಲ್ದಾರ್ ಕಚೇರಿಗೆ ಇಂಡಿ ನೂತನ ಉಪವಿಭಾಗಾಧಿಕಾರಿ ಆಗಿ ಅಧಿಕಾರ ವಹಿಸಿಕೊಂಡ ಅನುರಾಧಾ ವಸ್ತ್ರದ ಅವರು ಇದೇ ಮೊದಲ ಬಾರಿಗೆ ದೇವರಹಿಪ್ಪರಗಿ ತಾಲೂಕು ಕಚೇರಿಗೆ ಭೇಟಿ ನೀಡಿದವರು.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಶುಕ್ರವಾರದಂದು ಭೇಟಿ ನೀಡಿದ ಇಂಡಿ ನೂತನ ಎಸಿ ವಸ್ತ್ರದ ಅವರಿಗೆ ತಹಶೀಲ್ದಾರ್ ಪ್ರಕಾಶ ಸಿಂದಗಿ ಹಾಗೂ ಸಿಬ್ಬಂದಿ ವರ್ಗ ಪುಸ್ತಕದ ಜೊತೆಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ನಂತರ ಕಚೇರಿಯಲ್ಲಿನ ಸಮಸ್ಯೆಗಳ ಕುರಿತು ಸಿಬ್ಬಂದಿಗಳ ಜೊತೆ ಮಾತನಾಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಹಾಗೂ ಬರುವ ಬೇಸಿಗಿಯ ಸಮಯದಲ್ಲಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದ ಹಾಗೆ ಕರ್ತವ್ಯ ನಿರ್ವಹಿಸಿ ಎಂದು ಸಿಬ್ಬಂದಿಗಳಿಗೆ ಸೂಚಿಸಿದರು.
ಪಟ್ಟಣಕ್ಕೆ ಆಗಮಿಸಿದ ನೂತನ ಎಸಿ ಅವರಿಗೆ ರೈತ ಸಂಘದ ಜಿಲ್ಲಾಧ್ಯಕ್ಷರಾದ ಶಂಕರಗೌಡ ಹಿರೇಗೌಡ ಅವರ ನೇತೃತ್ವದ ಜಿಲ್ಲಾ ಹಾಗೂ ತಾಲೂಕು ಸಂಘ ಪದಾಧಿಕಾರಿಗಳು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಗ್ರೇಡ್ -2 ಶಾಮು ರಾಠೋಡ,ಕಂದಾಯ ಶಿರಸ್ತೇದಾರ ಗಳಾದ ಸುರೇಶ ಮ್ಯಾಗೇರಿ, ಡಿ.ಬಿ. ಬೋವಿ, ಉಪತಹಸೀಲ್ದಾರ್ ಗಿರಿಜಾದೇವಿ ಸಜ್ಜನ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಮುಖಂಡರು ಉಪಸ್ಥಿತರಿದ್ದರು.