ನೆರೆ: ಮನೆ ಹಾನಿ ವರದಿ ಶೀಘ್ರ ಪೂರ್ಣಗೊಳಿಸಿ

ಗದಗ 18: ಮಲಪ್ರಭಾ ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳ ಸಮೀಕ್ಷೆ  ಕಾರ್ಯ ಹಾಗೂ ತಹಶೀಲ್ದಾರರ ಅನುಮೋದನೆ ಕಾರ್ಯದ ಕುರಿತು ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ತಹಶೀಲ್ದಾರ ಕಛೇರಿಗಳಿಗೆ ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬೇಟಿ ನೀಡಿದರು. ನೆರೆ ಸಂದರ್ಭದಲ್ಲಿ ಹಾನಿಗೊಳಗಾದ  ಮನೆ  ಸಮೀಕ್ಷೆ ಹಾಗೂ  ಅನುಮೋದನೆ ಕಾರ್ಯವನ್ನು ಜವಾಬ್ದಾರಿ ಹಾಗೂ ದಕ್ಷತೆಯಿಂದ ಶೀಘ್ರವಾಗಿ ಪೂರ್ಣಗೊಳಿಸಲು  ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು   ನಿದರ್ೇಶನ ನೀಡಿದರು. 

     ಇದೇ ಸಂದರ್ಭದಲ್ಲಿ ನರಗುಂದ ತಹಶೀಲ್ದಾರ ಕೋರಿಶೆಟ್ಟರ್, ರೋಣ ತಹಶೀಲ್ದಾರ ಶರಣಮ್ಮ ಕಾರಿ   ತಾಲೂಕಿನ ಉಪ ತಹಶೀಲ್ದಾರರು ಹಾಗೂ ಕಂದಾಯ  ಇಲಾಖೆಯ ಅಧಿಕಾರಿಗಳು ಹಾಜರಿದ್ದರು.