ವಿಜಯಪುರ, ಆಗಸ್ಟ್ 11 ಕೊಲ್ಹಾರ ಪಟ್ಟಣದ ವ್ಯಾಪಾರಸ್ಥರು, ಸಂಘಸಂಸ್ಥೆಗಳು ಹಾಗೂ ನಾಗರಿಕರು ಸ್ವಯಂಪ್ರೇರಿತವಾಗಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ರವಾನಿಸಿದ್ದಾರೆ. ವಿಜಯಪುರ ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದಲ್ಲಿ ಸದ್ಯ ಎರಡು ಲಾರಿಯಷ್ಟು ಆಹಾರ ಸಾಮಗ್ರಿ ಹಾಗೂ ಬಟ್ಟೆ ಹೊದಿಕೆಗಳ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಸುಮಾರು 50 ಕ್ವಿಂಟಾಲ್ ಅಕ್ಕಿ, 25 ಸಾವಿರ ರೊಟ್ಟಿ, 5 ಕ್ವಿಂಟಾಲ್ ರವೆ, 15 ಕ್ವಿಂಟಾಲ್ ಮಾದಲಿ ಜೊತೆಗೆ ಸೀರೆ ಹಾಗೂ ಬಟ್ಟೆಗಳು, ಟವೆಲ್, ಬನಿಯನ್,ರಗ್ಗುಗಳ ಸಂಗ್ರಹಿಸಲಾಗಿದ್ದು, ನೇರವಾಗಿ ಪುನರ್ವಸತಿ ಕೆಂದ್ರಗಳಿಗೆ ಗ್ರಾಮಸ್ಥರು ರವಾನಿಸುತ್ತಿದ್ದಾರೆ.