ಮಂಡ್ಯ 11: ರೈತರ ಋಣ ತೀರಿಸಲು ನಾನು ಸದಾ ಬದ್ದನಾಗಿದ್ದೇನೆ, ಗೌರಿ ಗಣೇಶ ಹಬ್ಬದೊಳಗಾಗಿ ನಾಡಿನ ಆರೂವರೆ ಕೋಟಿ ಜನರಿಗೂ ಸಿಹಿ ಸುದ್ದಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ. ಮಂಡ್ಯದ ಸೀತಾಪುರದಲ್ಲಿ ಭತ್ತ ನಾಟಿ ಮಾಡಿ ಮಾತನಾಡಿದ ಸಿಎಂ, ನಾನು ರೈತ ಕುಟುಂಬದಲ್ಲಿ ಹುಟ್ಟಿದವನೇ, ನಾಟಿ ಮಾಡುವುದು ನನಗೆ ಹೊಸತಲ್ಲ, ಇದನ್ನು ರಾಜಕೀಯವಾಗಿ ತೆಗೆದುಕೊಂಡರೇ ನಾನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರೈತರನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯ, ರೈತರ ಸಮಸ್ಯೆಗೆ ವಿಧಾನಸೌಧದ ಬಾಗಿಲು ಸದಾ ತೆರೆದಿರುತ್ತದೆ, ನಾನು ನಿಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತೇನೆ, ನನಗೆ ಉತ್ತರ ಕನರ್ಾಟಕ ಬೇರೆ ಅಲ್ಲ, ದಕ್ಷಿಣ ಕನರ್ಾಟಕ ಬೇರೆ ಅಲ್ಲ, ಎರಡು ಒಂದೇ , ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ, ನನ್ನ ಮೇಲೆ ನಂಬಿಕೆಯಿಡಿ ಸಂಶಯ ಪಡಬೇಡಿ ಎಂದು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆ ರೈತರ ಋಣ ನನ್ನ ಮೇಲೆ ಅಪಾರವಾಗಿದೆ, ಜಿಲ್ಲೆಯ 7 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಿಸಿದ್ದೀರಿ, ಏಳೇಳು ಜನ್ಮಕ್ಕೂ ಮಂಡ್ಯದ ಜನರ ಋಣ ತೀರಿಸಲಾಗದು, ಮಂಡ್ಯದ ಅಭಿವೃದ್ಧಿಯಾಗಬೇಕು ಎಂಬುದು ನನ್ನ ಬಯಕೆ, ರಾಜ್ಯದ 30 ಜಿಲ್ಲೆಗಳನ್ನು ದತ್ತು ತೆಗೆದುಕೊಂಡು ನಾನು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ,
ಮಂಡ್ಯ ಸಕ್ಕರೆ ಕಾಖರ್ಾನೆಯನ್ನು ಮತ್ತೆ ಪುನರುಜ್ಜೀವನಗೊಳಿಸುವುದಾಗಿ ಹೇಳಿದ್ದಾರೆ. ಇನ್ನೂ ಕುಮಾರ ಸ್ವಾಮಿ ಅವರಿಗೆ ಅಪ್ಪಟ ಮಂಡ್ಯ ಶೈಲಿಯಲ್ಲಿ ಊಟದ ಏಪರ್ಾಡು ಮಾಡಲಾಗಿತ್ತು.
ರೈತರೊಂದಿಗೆ ಭೋಜನ
ರಾಗಿಮುದ್ದೆ, ಹೆಸರು ಬೇಳೆ ಪಾಯಸ, ಅವರೆ ಕಾಳು ಕೂಟು ಸೇರಿದಂತೆ ವಿಶೇಷವಾದ ಸ್ಥಳೀಯ ಖಾದ್ಯಗಳನ್ನು ಸಿದ್ದಪಡಿಸಲಾಗಿತ್ತು. ಸಿಎಂ ಗದ್ದೆ ಬದಿಯಲ್ಲೇ ರೈತರೊಂದಿಗೆ ಊಟ ಮಾಡಿದರು.