ಬಸವನಬಾಗೇವಾಡಿ: ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್(ಎಬಿವಿಪಿ)ರಾಷ್ಟ್ರದ ನಂಬರ 1 ಸಂಘಟನೆಯಾಗಿ, ರಾಷ್ಟ್ರದ ಅಭಿವೃದ್ಧಿ ಕಾಳಜಿ ವಹಿಸುವುದರೊಂದಿಗೆ ವಿದ್ಯಾಥರ್ಿ ಸಮೂಹವನ್ನು ಸನ್ಮಾರ್ಗದಲ್ಲಿ ಮುನ್ನೆಡಿಸುವ ಕಾರ್ಯ, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗೆ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಮಲ್ಲಿಕಾಜರ್ುನ ದೇವರಮನಿ ಹೇಳಿದರು.
ಪಟ್ಟಣದ ಅಕ್ಕನಾಗಮ್ಮ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಎಬಿವಿಪಿ ಸಂಸ್ಥಾಪನದ ದಿನದ ಅಂಗವಾಗಿ ನಗರ ಶಾಖೆ ಹಮ್ಮಿಕೊಂಡ ರಾಷ್ಟ್ರೀಯ ವಿದ್ಯಾಥರ್ಿ ದಿನ ಹಾಗೂ ಎಬಿವಿಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವ್ಯಕ್ತಿ ನಿಮರ್ಾಣದಿಂದ ರಾಷ್ಟ್ರ ಪುನರ್ನಿಮರ್ಾಣದ ಕಲ್ಪನೆಯೊಂದಿಗೆ ಇಡೀ ರಾಷ್ಟ್ರಾದ್ಯಂತ ವಿದ್ಯಾಥರ್ಿಗಳಲ್ಲಿ ದೇಶಭಕ್ತಿಯ ಜಾಗೃತಿ ಮೂಡಿಸುವ ಕೆಲಸವನ್ನು ಕಳೆದ 68 ವರ್ಷಗಳಿಂದ ಮುನ್ನೆಡೆಸಿಕೊಂಡು ಹೋಗುತ್ತದೆ ಎಂದು ಹೇಳಿದರು.
ವಿಭಾಗ ಸಂಚಾಲಕ ಸಚಿನ ಕುಳಗೇರಿ ಮಾತನಾಡಿ ಎಬಿವಿಪಿ ಸಂಘಟನೆ ರಾಷ್ಟ್ರದ ಭದ್ರತೆ ಕುರಿತು ವಿಷಯ ಬಂದಾಗ ಕಾಶ್ಮೀರದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಸಾರಿ, ಕಾಶ್ಮೀರ ಪಂಡಿತರಲ್ಲಿ ಧೈರ್ಯ ತುಂಬುವುದರ ಜೊತೆಗೆ ಯುವ ಜನಾಂಗದಲ್ಲಿ ರಾಷ್ಟ್ರಭಕ್ತಿಯ ದೀಕ್ಷೆ ನೀಡುತ್ತಿದೆ ಎಂದು ಹೇಳಿದರು.
ದೇಶಾದ್ಯಂತ ತನ್ನ ಜಾಲದ ಜೊತೆಗೆ ವಿಶ್ವ ವಿದ್ಯಾಥರ್ಿ ಸಂಘಟನೆ ಹೆಸರಲ್ಲಿ (ಡಬ್ಲ್ಯೂಎಸ್ವೈ) ಅಮೇರಿಕ, ಶ್ರೀಲಂಕಾ, ಬಾಂಗ್ಲಾ ಸೇರಿದಂತೆ 40ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವಿದ್ಯಾಥರ್ಿ ಸಂಘಟನೆ ಸಂಘಟಿಸಿ ಅಲ್ಲಿನ ಶೈಕ್ಷಣೆಕ ಕ್ಷೇತ್ರದ ಸುಧಾರಣೆ, ಭಾರತೀಯ ಸಂಸ್ಕೃತಿ ತಿಳಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜ ಉಪನ್ಯಾಸಕ ಡಿ.ಆರ್.ಹಾದಿಮನಿ ಅಧ್ಯಕ್ಷತೆವಹಿಸಿದರು, ನಗರ ಕಾರ್ಯದಶರ್ಿ ಸುರೇಶ ಜಂಗೋಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ತಾಲೂಕಾ ಸಂಚಾಲಕ ಶಿವಾನಂದ ಬಂಡಿವಡ್ಡರ ಸ್ವಾಗತಿಸಿದರು, ತಾರಾ ರಜಪೂತ ನಿರೂಪಿಸಿದರು, ಮಲ್ಲಪ್ಪ ರತ್ತಾಳ, ಕಾಯರ್ಾಲಯ ಕಾರ್ಯದಶರ್ಿ ಬಾಲು ಹಪ್ತಾಗಿರಿ ವಂದಿಸಿದರು. ಈ ಸಂದರ್ಭದಲ್ಲಿ 2018-19ನೇ ಸಾಲಿನ ಶೈಕ್ಷಣಿಕ ವರ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ನೀಡಿದರು.