ರಾಷ್ಟ್ರಮಟ್ಟದ ಬೆಲ್ಟ್ ಕುಸ್ತಿ ಪಂದ್ಯವಳಿ ಸಮಾರೋಪ

ಲೋಕದರ್ಶನ ವರದಿ

ಬೆಳಗಾವಿ, 10: ಕೆಎಲ್ಇ ಸಂಸ್ಥೆಯ ಲಿಂಗರಾಜ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪ್ರಥಮಬಾರಿಗೆ ಆಯೋಜಿಸಲಾಗಿದ್ದ 2018-19ನೇ ಸಾಲಿನ 64ನೇ ರಾಷ್ಟ್ರಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾವಳಿಯು 8.1.2019 ರಂದು ಮುಕ್ತಾಯಗೊಂಡವು. 

ವೇದಿಕೆಯ ಮೇಲೆ ಆಲ್ ಇಂಡಿಯಾ ಸಂಪ್ರದಾಯಿಕ ಕುಸ್ತಿ ಫೌಂಡೇಶನ್ ಅಧ್ಯಕ್ಷರಾದ ಸಿ.ಎ.ತಾಂಬೋಲಿ, ಬೆಳಗಾವಿ ಡಿಡಿಪಿಯು ಜಿ.ಎಂ.ಗಣಾಚಾರಿ ಮುಖ್ಯಅತಿಥಿಗಳಾಗಿ ಆಗಮಿಸಿದ್ದರು. ಲಿಂಗರಾಜ ಮಹಾವಿದ್ಯಾಲಯದ ಪದವಿ ಪ್ರಾಚಾರ್ಯರಾದ ಡಾ.ಆರ್.ಎಂ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬೆಲ್ಟ್ ಕುಸ್ತಿ ಎಸ್ಜಿಎಫ್ಐನ ಕನ್ಹಯ್ಯಾ ಗುಜ್ಜರ, ಬೆಳಗಾವಿಯ ಉಪನಿದರ್ೇಶಕರಾದ ಜಿ.ಎಂ.ಗಣಾಚಾರಿ,  ಜಿ.ಎನ್.ಪಾಟೀಲ, ಸಂತೋಷ, ದೈಹಿಕ ನಿದರ್ೇಶಕ ಸಿ.ರಾಮರಾವ್, ಅಲ್ತಾಫ್ ಮುಲ್ಲಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು. 

ಎರಡು ದಿನಗಳವರೆಗೆ ಜರುಗಿದ ಬೆಲ್ಟ್ ಕುಸ್ತಿ ಪಂದ್ಯಾವಳಿಯಲ್ಲಿ 10 ರಾಜ್ಯಗಳಿಂದ 143 ಸ್ಪಧರ್ಾಳುಗಳು ಆಗಮಿಸಿದ್ದರು. ಕನರ್ಾಟಕದ ಬಾಲಕರ ವಿಭಾಗವು 22 ಅಂಕ ಪಡೆದು ಬಾಲಕರ ವೀರಾಗ್ರಣಿ ಪ್ರಶಸ್ತಿ ಹಾಗೂ ಬಾಲಕಿಯರ ವಿಭಾಗವು 14 ಅಂಕ ಪಡೆದು ಬಾಲಕಿಯರ ವೀರಾಗ್ರಣಿ ಪ್ರಶಸ್ತಿ ಹಾಗೂ ಕುಮಾರಿ ಕಾವ್ಯ ಎ ಅತ್ಯುತ್ತಮ ಬೆಲ್ಟ್ ರೆಸಲರ್ ಆಗಿ ಹೊರಹೊಮ್ಮುವ ಮೂಲಕ ಕನರ್ಾಟಕ ತಂಡ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ನಾಗಾಲ್ಯಾಂಡಿನ ಕುಮಾರ ಬೊಂಗತಂಗ್ ಪೋಮ್ ಬೆಲ್ಟ್ ರೆಸ್ಲರ್ ಪ್ರಶಸ್ತಿಗೆ ಪುರಸ್ಕೃತರಾದರು. ಪಂದ್ಯಾವಳಿಯ ಪ್ರಾಯೋಜಕರು ಹಾಗೂ ಗಣ್ಯಮಾನ್ಯರು ಬಾಲಕರ 08 ಪ್ರತ್ಯೇಕ ತೂಕ ವಿಭಾಗಗಳಲ್ಲಿ ಹಾಗೂ ಬಾಲಕಿಯರ 06 ಪ್ರತ್ಯೇಕ ತೂಕ ವಿಭಾಗಗಳಲ್ಲಿ ವಿಜೇತರಾದವರಿಗೆ ಪ್ರತಿ ವಿಭಾಗಕ್ಕೂ 01 ಚಿನ್ನ, 01 ಬೆಳ್ಳಿ ಹಾಗೂ 02 ಕಂಚಿನ ಪದಕಗಳನ್ನು ನೀಡಿ ಅಭಿನಂದಿಸಿದರು.  

ಕನ್ಹಯ್ಯಾ ಗುಜ್ಜರ, ಉಪಕಾರ್ಯದಶರ್ಿಗಳು, ಎಸ್.ಜಿ.ಎಪ್.ಐ ಇವರು ಪಂದ್ಯಾವಳಿಯನ್ನು ಅತ್ಯುತ್ತಮ ರೀತಿಯಲ್ಲಿ ಆಯೋಜಿಸಿದ ಕೆ.ಎಲ್.ಇ. ಸಂಸ್ಥೆಯ ಲಿಂಗರಾಜ ಪ-ಪೂ ಮಹಾವಿದ್ಯಾಲಯಕ್ಕೆ ಹೃದಯಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಿದರು. ಪದವಿಪೂರ್ವ ಪ್ರಾಚಾರ್ಯರಾದ ಶ್ರೀಮತಿ.ಸುಮಿತ್ರಾ ಚೋಬಾರಿ ಸ್ವಾಗತಿಸಿದರು. ಉಪಪ್ರಾಚಾರ್ಯರಾದ ಶ್ರೀಮತಿ.ಗಿರಿಜಾ ಹಿರೇಮಠ ವಂದಿಸಿದರು.  ಪ್ರಾಧ್ಯಾಪಕರಾದ ಶ್ರದ್ಧಾ ಪಾಟೀಲ ಹಾಗೂ ನಮ್ರತಾ ಪಾಟೀಲ ನಿರೂಪಿಸಿದರು.