ಸಂಶೋಧನೆ ಹಾಗೂ ಪರಿಣಾಮಗಳನ್ನು ಅನುಷ್ಠಾನಕ್ಕೆ ತರಲು ಕಾರ್ಯನಿರತವಾಗಿರಬೇಕು : ನಿತಿನ ಗಂಗಾಣೆ

ಬೆಳಗಾವಿ 21: ಖಾಸಗಿ ವೈದ್ಯಕೀಯ ಸಂಸ್ಥೆಗಳು ಸರಕಾರದೊಂದಿಗೆ ಜೊತೆಗೂಡಿ, ಸಮಾಜವನ್ನು ಆರೋಗ್ಯವಾಗಿಡಲು ಸಂಶೋಧನೆ ಹಾಗೂ ಪರಿಣಾಮಗಳನ್ನು ಅನುಷ್ಠಾನಕ್ಕೆ ತರಲು ಸದಾಕಾರ್ಯನಿರತವಾಗಿರಬೇಕೆಂದು ಕಾಹೆರ  ಕೆಎಲ್‌ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ್ ಆಂಡ ರಿಸರ್ಚನ  ಉಪಕುಲಪತಿ ಡಾ. ನಿತಿನ ಗಂಗಾಣೆ ಅವರಿಂದಿಲ್ಲಿ ಹೇಳಿದರು.  

ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರವೈದ್ಯರಾದ ಡಾ. ಸ್ಮಿತಾ ಪ್ರಭು ಅವರು ಅಭಿವೃದ್ದಿಡಿಸಿದ "ಋಚಿಟಿಚಿ" ಮೊಬೈಲ್ ಅಪ್ಲಿಕೇಶನ್‌ಅನ್ನು 21ನೇಸೆಪ್ಟೆಂಬರ್ 2024 ರಂದು ಬಿಡುಗಡೆ ಗೊಳಿಸಿ ಮಾತನಾಡಿ, ನರಸಮಸ್ಯೆಯಿಂದ ಬಳಲುತ್ತಿರುವ ಚಿಕ್ಕಮಕ್ಕಳು ನೇತ್ರದೋಷ ಹೊಂದಿರುತ್ತಾರೆ. ಅವರು  ಸಾಮಾಜಿಕ ಭವಿಷ್ಯಕ್ಕಾಗಿ ಸಂಶೋಧನೆಗಳ ಅಗತ್ಯ ಸಾಕಷ್ಟಿದೆ.  

ಆದರೆ ಅವುಗಳ ಕಾರ್ಯರೂಪಕ್ಕೆ ತರುವಲ್ಲಿ ಹಿಂದೆ ಬೀಳುತ್ತಾರೆ. ಅಲ್ಲದೇ ವೈದ್ಯಕೀಯ ದಾಖಲೆಗಳನ್ನು ಸರಿಯಾಗಿ ದಾಖಲಿಸುವುದಿಲ್ಲ. ಇದರಿಂದ ಚಿಕಿತ್ಸೆಯಲ್ಲಿ ತೊಂದರೆ ಅನುಭವಿಸ ಬೇಕಾಗುತ್ತದೆ. ಆದ್ದರಿಂದ ವೈದ್ಯಕೀಯ ದಾಖಲೆಗಳನ್ನು ಸರಿಯಾಗಿ ದಾಖಲಿಸಿ ಸುರಕ್ಷಿತವಾಗಿಡಿ ಎಂದು ತಿಳಿಸಿದರು.  

ಈ ಮೊದಲು ಎಲ್ಲ ವೈದ್ಯಕೀಯ ಉಪಕರಣಗಳನ್ನು ವಿದೇಶದಿಂದ ತರಲಾಗುತ್ತಿತ್ತು. ಇವುಗಳ ಬೆಲೆ ಸಾಮನ್ಯವಾಗಿ ಹೆಚ್ಚು.ಇಂದು ನಮ್ಮಲ್ಲಿಯೇ ಅನೇಕ ವೈದ್ಯರು ಇಂಜಿನಿಯರಗಳಾಗಿದ್ದಾರೆ. ಅದರಂತೆ ಅವುಗಳು ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಿದರೆ ದೇಶಾದ್ಯಂತ ಪ್ರಾಚಾರ ಮಾಡಿ ಸಾಮಾಜಕ್ಕೆ ನೆರವಾಗುವ ಕಾರ್ಯ ಮಾಡಬೇಕೆಂದು ಕರೆ ನೀಡಿದರು.  

ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎನ್ ಎಸ್ ಮಹಾಂತಶೆಟ್ಟಿ ಅವರು ಮಾತನಾಡಿ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡುವವರೆ ಹೆಚ್ಚಿದ್ದಾರೆ.ಆದರೆ ನರಸಮಸ್ಯೆಯಿಂದ ಬಳಲುತ್ತಿರುವ ಚಿಕ್ಕಮಕ್ಕಳ ಕಾಳಜಿವಹಿಸಿ ಅವರ ದೃಷ್ಠಿಯನ್ನು ಮರಳಿ ತರಲು ಪ್ರಯತ್ನಿಸಬೇಕಾಗಿದೆ. ಹೆಚ್ಚಿನ ಅಪಾಯದ ಶಿಶುಗಳನ್ನು ಗುರುತಿಸಲು ಈ ಮೊಬೈಲ್ ಆಪ್ ಸಹಾಯ ಮಾಡಲಿದೆ. ಸ್ಕಾಟಿಕಲ್ದೃಷ್ಟಿ ಹೀನತೆಯ ಆರಂಭಿಕ ಪತ್ತೆ ಮತ್ತು ಆರಂಭಿಕ ಚಿಕಿತ್ಸೆಯು ಮಕ್ಕಳಿಗೆ ಪ್ರಯೋಜನವಾಗಲಿದೆ. ಮಕ್ಕಳು ಇದರ ಪ್ರಯೋಜನ ಪಡೆಯುತ್ತಾರೆ. ದೃಷ್ಟಿದೋಷವು ಮಕ್ಕಳ ಬೆಳವಣಿಗೆಗೆ ಮತ್ತಷ್ಟು ಅಡ್ಡಿಪಡಿಸುತ್ತದೆ. ಆದ್ದರಿಂದ, ಇಂತ ಸಂಶೋಧನೆಗಳು ಹಾಗೂ ವೈದ್ಯಕೀಯ ಉಪಕರಣಗಳು ಅತ್ಯವಶ ಎಂದು ಹೇಳಿದರು.  

ಹುಬ್ಬಳ್ಳಿಯ ಎಂ ಎಂ ಜೋಷಿ ಕಣ್ಣಿನ ಸಂಸ್ಥೆಯ ಡಾ.ಕೃಷ್ಣಪ್ರಸಾದ ಆರ್‌.ಅವರು ಮಾತನಾಡಿ, ಬದಲಾವಣೆ ಯಾವಾಗಲೂ ಹೊರಗಿನಿಂದ ಬರಬೇಕೆಂದು ನಾವು ಬಯಸುತ್ತೇವೆ. ಇದು ಬಹುಶಿಸ್ತಿನ ವಿಷಯವಾಗಿದ್ದು, ನಮ್ಮಲ್ಲಿಂದಲೇ ಬದಲಾವಣೆಯಾಗಬೇಕು. ಶಸ್ತ್ರಚಿಕಿತ್ಸಾವಿಭಾಗ, ಫಿಸಿಯೋಥೆರಪಿ ಮಕ್ಕಳ ಮನಶ್ಶಾಸ್ತ್ರಜ್ಞ, ಮನೋವೈದ್ಯಕೀಯ ಸೇರಿದಂತೆ ಒಬ್ಬ ಮನುಷ್ಯನನ್ನು ಆರೋಗ್ಯವಾಗಿಡಲು ಅವಶ್ಯವಿರುವ ಎಲ್ಲ ವಿಭಾಗಗಳು ಇವೆ. ಅವರೆಲ್ಲರೂ ಉತ್ತಮ ಪ್ರದರ್ಶನವನ್ನು ನೀಡಲು ಒಟ್ಟಾಗಿಬರುವ ಪರಿಪೂರ್ಣ ತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.  

ಹಿರಿಯ ತಜ್ಞವೈದ್ಯರಾದ ಡಾ. ವಿ ಡಿ ಪಾಟೀಲ,  ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು ಮಾತನಾಡಿದರು.ಈ ಸಂದರ್ಭದಲ್ಲಿಕುಲಸಚಿವ ಡಾ.ಎಂ ಎಸ್ ಗಣಾಚಾರಿ, ಉಪಪ್ರಾಚಾರ್ಯ ಡಾ.ರಾಜೇಶ ಪವಾರ, ಡಾ. ಆರಿಫ್ ಮಾಲ್ದಾರ, ತಜ್ಞಡಾ. ಅರವಿಂದ ತೆನಗಿ ಹಾಗೂ ಡಾ.ಎಸ್‌.ಬಿ.ಪಾಟೀಲ್, ಡಾ.ಭಾಗ್ಯಜ್ಯೋತಿ, ಡಾ.ಚೇತನಾ, ಮಕ್ಕಳ ನರ ರೋಗ ತಜ್ಞವೈದ್ಯರಾದ ಡಾ.ಮಹೇಶಕಮತೆ, ಮಕ್ಕಳ ಮನೋವೈದ್ಯ ಡಾ.ವಿನಾಯಕ ಕೋಪರ್ಡೆ, ನವಜಾತ ಶಿಶುಗಳ ತಜ್ಞವೈದ್ಯರಾದ ಡಾ.ರಾಮಚಂದ್ರಭಟ್, ಡಾಮೀನಾ, ಡಾನೇಹಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಡಾ.ಶಿವಾನಂದಬೂಬನಾಳೆ ಸ್ವಾಗತಿಸಿದರು. ಡಾ.ಸ್ಮಿತಾ ಪ್ರಭು ವಂದಿಸಿದರು.