ಸಹಕಾರಿ ಕಾರ್ಖಾನೆ ಅಭಿವೃದ್ದಿಗೆ ರೈತರು ಹೆಚ್ಚು ಕಬ್ಬು ಪೂರೈಕೆ ಮಾಡಬೇಕು: ಕೋರೆ

ಚಿಕ್ಕೋಡಿ 21:  ಗಡಿ ಭಾಗದ ರೈತರ ಕಾಮದೇನುವಾದ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯು ಆರ್ಥಿಕವಾಗಿ ಗಟ್ಟಿ ಇದೆ. ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಸಾಧಿಸುತ್ತಿದೆ .ಸಹಕಾರಿ ಸಕ್ಕರೆ ಕಾರ್ಖಾನೆಗಳು ಉಳಿಯಬೇಕಾದರೆ ರೈತರು ಹೆಚ್ಚು ಹೆಚ್ಚು ಕಬ್ಬು ಕಳಿಸಬೇಕು ಎಂದು ರಾಜ್ಯಸಭೆ ಮಾಜಿ ಸದಸ್ಯರು ಮತ್ತು ಕಾರ್ಖಾನೆ ರೂವಾರಿ  ಡಾ.ಪ್ರಭಾಕರ ಕೋರೆ ಹೇಳಿದರು.ಇಲ್ಲಿನ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ 56 ನೆಯ ವಾರ್ಷಿಕ ಸರ್ವಸಾಧರಣ ಸಭೆಯಲ್ಲಿ ಅವರು ಮಾತನಾಡಿದರು.ಕಾರ್ಖಾನೆ ವತಿಯಿಂದ ಆರಂಭ ಮಾಡಿರುವ ಕಿಸಾನ್ ಬಜಾರದಲ್ಲಿ ಸುಟ್ಟ ಪಂಪಸೆಟ್ ದುರಸ್ಥೆ ಮಾಡುವ ವಿಚಾರ ಇದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.ಆಧುನಿಕ ಕೃಷಿ ಪರಂಪರೆ ಅಳವಡಿಸಿಕೊಂಡರೆ ರೈತರು ಆರ್ಥಿಕ ಪ್ರಗತಿ ಸಾಧಿಸಲು ಅನುಕೂಲವಾಗುತ್ತದೆ. ಯುವಕರು ಹೆಚ್ಚು ಕೃಷಿಯತ್ ಗಮನ ಹರಿಸಬೇಕು ಎಂದರು. ರಾಷ್ಟ್ರೀಯ ಸಹಕಾರ ಸಕ್ಕರೆ ಮಹಾಮಂಡಳದ ನಿರ್ದೇಶಕ ಅಮಿತ ಕೋರೆ ಮಾತನಾಡಿ ಸಹಕಾರಿ ಸಕ್ಕರೆ ಕಾರ್ಖಾನೆಯು 121 ದಿನ ಕಬ್ಬು ನುರಿಸಲಾಗಿದೆ.  

60 ಲಕ್ಷ ಡಿಸ್ಲರಿ ಉತ್ಪಾದನೆ ಮಾಡಿ ಮಾರಾಟ ಮಾಡಲಾಗಿದೆ. ಕಬ್ಬು ಪೂರೈಕೆ ಮಾಡುವ ರೈತರಿಗೆ ಸಾಕಷ್ಟು ಸೌಲಭ್ಯ ಒದಗಿಸಲಾಗುತ್ತದೆ. 500 ಕಿ.ವ್ಯಾ.ಸೋಲಾರ ಅಳವಡಿಸಲಾಗಿದೆ. ಪ್ರತಿ ವರ್ಷ ಯುವಕರಿಗೆ ಕಾರ್ಯಾಗಾರ ನಡೆಸಿ ಅವರಿಗೆ ನೌಕರಿ ಮಾಡಲು ಪ್ರೋತ್ಸಾಹ ನೀಡಲಾಗುತ್ತದೆ. ಕಿಸಾನ ಬಜಾರ ಮೂಲಕ ರೈತರಿಗೆ ಕೃಷಿ ಉಪಕರಣ ಪೂರೈಕೆ ಮಾಡಲಾಗುತ್ತದೆ. ಪ್ರಸಕ್ತ ವರ್ಷದಲ್ಲಿ 8.50 ಕೋಟಿ ರೂ ವ್ಯವಹಾರ ಮಾಡಲಾಗಿದೆ.18 ಸಾವಿರ ಸದಸ್ಯರು ವ್ಗಿಕೇರ ಉಪಯೋಗ ಪಡೆದುಕೊಂಡಿದ್ದಾರೆ. 900 ಜನ ಸಿಬ್ಬಂದಿಗಳಿಗೆ ಅನುಕೂಲವಾಗಿದೆ. ಕಾರ್ಖಾನೆಗೆ ಕಬ್ಬು ಕಳಿಸಿದ ರೈತರಿಗೆ ಏಳು ದಿನಗಳ ಒಳಗಾಗಿ ಬಿಲ್ ಜಮೆ ಮಾಡಲಾಗಿದೆ ಎಂದರು.ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೋರೆ ಮಾತನಾಡಿ ಕಾರ್ಖಾನೆಯ ಮಾರ್ಗದರ್ಶಕರು, ಕೆ.ಎಲ್‌.ಇ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾಽಽ ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ಮತ್ತು ಅಮಿತ ಕೋರೆಯವರ ಮುಂದಾಳತ್ವದಲ್ಲಿ ಹಾಗೂ ಆಡಳಿತ ಮಂಡಳಿಯ ಸೂಕ್ತ ನಿರ್ಣಯದಿಂದ ಕಾರ್ಖಾನೆಯು ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ. ರೈತರ ಸಹಕಾರದಿಂದ ಕಾರ್ಖಾನೆಯು ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ರೈತರು ಸಿಡಿಒ ಕಡೆಯಿಂದ ಪತ್ರ ತಂದರೆ ಮುಂಗಡವಾಗಿ ಬಿಲ್ ಕೊಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ಮಾದರಿಯಾಗಿ ಸಕ್ಕರೆ ಕಾರ್ಖಾನೆ ಬೆಳೆದಿದೆ.  

ರೈತರ ಪರವಾದ ಈ ಕಾರ್ಖಾನೆ ಅಭಿವೃದ್ಧಿ ಹೊಂದಿದೆ. ಕೇಂದ್ರ ಸರಕಾರ ಇಥಿನಾಲ್ ಉತ್ಪಾದನೆಗೆ ಅವಕಾಶ ನೀಡಿದ್ದರಿಂದ ಕಾರ್ಖಾನೆಯು 2 ಲಕ್ಷ ಲೀಟರ ಇಥಿನಾಲ್ ಘಟಕ ಪ್ರಾರಂಭವಾಗಿದೆ. ಪ್ರತಿದಿನ 10 ಸಾವಿರ ಟನ್ ಕಬ್ಬು ನುರಿಸುವ ಕಾರ್ಖಾನೆಯು ಹೊಸ ತಂತ್ರಜ್ಣಾನ ಅಳವಡಿಸಿ ರೈತಪರವಾಗಿ ಕೆಲಸ ಮಾಡುತ್ತಿದೆ. ರೈತರು ಸ್ವಾವಲಂಭಿಯಾಗಿ ಬದಕಲು ಹೊಸ ಆವಿಷ್ಕಾರ ಅಳವಡಿಸಿಕೊಳ್ಳಬೇಕಿದೆ ಎಂದರು. 

ಮೃತರಾದ ಖಾರ್ಖಾನೆಯ ಸದಸ್ಯರಿಗೆ ವ್ಯಕ್ತಿಗತ ಜೀವವಿಮೆ ಯೋಜನೆಯಡಿ ಪರಿಹಾದ ಚೆಕ್ ವಿತರಿಸಿದರು.ಈ ಸಮಯದಲ್ಲಿ ಉಪಾಧ್ಯಕ್ಷರಾದ ತಾತ್ಯಾಸಾಹೇಬ ಕಾಟೆ, ಸಂಚಾಲಕರುಗಳಾದ ಅಜೀತ ದೇಸಾಯಿ, ಭರತೇಶ ಬನವನೆ, ಸಂದೀಪ ಪಾಟೀಲ, ಮಹಾವೀರ ಮಿರ್ಜಿ,  ಮಲ್ಲಪ್ಪಾ ಮೈಶಾಳೆ, ಚೇತನ ಪಾಟೀಲ, ಅಣ್ಣಾಸಾಬ ಇಂಗಳೆ, ಭೀಮಗೌಡಾ ಪಾಟೀಲ, ಮಹಾವೀರ ಕಾತ್ರಾಳೆ ಉಪಸ್ಥಿತರಿದ್ದರು.ಪರಸಗೌಡ ಪಾಟೀಲ ಸ್ವಾಗತಿಸಿದರು.  ವ್ಯವಸ್ಥಾಪಕ ನಿರ್ದೇಶಕ ಐ.ಎನ್‌.ಗೊಲಭಾವಿ ವಾರ್ಷಿಕ ವರದಿ ಮಂಡಿಸಿದರು.