ಸಿನಿಮೀಯ ರೀತಿ ವ್ಯಕ್ತಿಯ ಹತ್ಯೆ : 4 ಗಂಟೆಯಲ್ಲಿ ಆರೋಪಿತರು ವಶಕ್ಕೆ : ಹತ್ಯೆ ಆಗಬೇಕಿದ್ದವ ಬಚಾವ್, ಬೇರೆ ವ್ಯಕ್ತಿಯ ಹತ್ಯೆ

ಬೆಳಗಾವಿ 21: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊರ್ವನ ಬೈಕ್ ಬೆನ್ನು ಹತ್ತಿ ಸಿನಿಮೀಯ ರೀತಿ ಕಾರು ಹಾಯಿಸಿ ಹತ್ಯೆ ಮಾಡಲಾಗಿದ್ದು, ಆದರೆ ಆರೋಪಿತರು ಹತ್ಯೆಗೆ ಸಂಚು ಮಾಡಿದ್ದ ವ್ಯಕ್ತಿ ಬಚಾವ್ ಆಗಿದ್ದು ಬೇರೆಯೋರ್ವ ವ್ಯಕ್ತಿ ಹತ್ಯೆಯಾಗಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೊಸೂರ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದ ವಿಠ್ಠಲ ಜೋತ್ಯಪ್ಪ ರಾಮಗೊನಟ್ಟಿ (60) ಕೊಲೆಯಾದ ದುರ್ಧೈವಿಯಾಗಿದ್ದಾನೆ. 

ಹತ್ಯೆಯ ಸಂಚು ಭೀಮಪ್ಪನದ್ದು, ಆದರೆ ಹತ್ಯೆ ಆಗಿದ್ದು ವಿಠಲ : 

ಹೊಸೂರು ಗ್ರಾಮದಲ್ಲಿ ಜಮೀನು ವಿವಾದ ಒಂದರಲ್ಲಿ ಭೀಮಪ್ಪ ಡಬ್ಬಗೋಳ ಎನ್ನುವ ವ್ಯಕ್ತಿ ಹಾಗೂ ಆರೋಪಿತರ ಕುಟುಂಬಗಳ ನಡುವೆ ಆಸ್ತಿ ಕುರಿತು ವಿವಾದ ಇತ್ತು, ಆದರೆ ಈ ವಿವಾದದ ಹಿನ್ನೆಲೆಯಲ್ಲಿ ಗ್ರಾಮದ ದೇವಸ್ಥಾನ ಒಂದರಲ್ಲಿ ಶುಕ್ರವಾರ ತಡರಾತ್ರಿ ಸಭೆ ಮಾಡಿದ ಬಳಿಕ ಸಿದ್ದಪ್ಪ ಹಾಗೂ ಮೃತ ವಿಠಲ ಸೇರಿ ಕೆಲವರು ಬೈಕ್ ಮೇಲೆ ತಮ್ಮ ಮನೆಗೆ ಹೊರಟಿದ್ದರು. 

ಈ ಸಮಯ ನೋಡಿಕೊಂಡ ಆರೋಪಿತರು ಬೈಕ್ ಮೇಲೆ ಹೊರಟವರನ್ನು ಕಾರ ಮೂಲಕ ಬೆನ್ನಟ್ಟಿ ಬೈಕ್ ಮೇಲೆ ಕಾರು ಹಾಯಿಸಿ ಸಿದ್ದಪ್ಪನ‌ ಹತ್ಯೆಗೆ ಯತ್ನ ಮಾಡಿದ್ದಾರೆ. ಆದರೆ ಹತ್ಯೆಯಾಗಬೇಕಿದ್ದ ಸಿದ್ದಪ್ಪ ಬಚಾವ್ ಆಗಿದ್ದು ಇದೇ ಬೈಕ್ ಮೇಲೆ ಹೊರಟಿದ್ದ ವಿಠಲ ಈತನನನ್ನು ಹತ್ಯೆ ಮಾಡಲಾಗಿದೆ.  ಬಳಿಕ ಹತ್ಯೆಯಾಗಬೇಕಿದ್ದ ಸಿದ್ದಪ್ಪ ಬಚಾವ್ ಆಗಿ‌ ಮನೆ ಸೇರಿದ್ದು, ಯಾವದೇ ತಪ್ಪು ಮಾಡದ ವಿಠಲ ಈತ ಹಾದಿ ಹೆಣವಾಗಿದ್ದಾನೆ. 

ಜಮೀನು ವಿವಾದದ ಹಿನ್ನೆಲೆಯಲ್ಲಿ ಕಾರ್ ಹರಿಸಿ ಸಿನಿಮೀಯ ರೀತಿಯಲ್ಲಿ ವಿಠ್ಠಲ ರಾಮಗೊನಟ್ಟಿ ಈತನನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನೆ‌‌ ಮಾಡಲಾಗಿದೆ.

ಈ ಕುರಿತು ಯಮಕನಮರಡಿ ಪೊಲೀಸ್‌ರಿಂದ ತನಿಖೆ ನಡೆಯುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು.

ಯಮಕನಮರಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೇವಲ 4 ಗಂಟೆಗಳಲ್ಲಿ ಆರೋಪಿತರು ವಶಕ್ಕೆ ; sp ಗುಳೇದ

 ವಿಠಲ ಹತ್ಯೆಯಾದ 4 ಗಂಟೆಗಳಲ್ಲಿ ಇಬ್ಬರು ಆರೋಪಿತರನ್ನು ಯಮಕನಮರಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಭೀಮಾ