ಕಳ್ಳ ಮತ್ತು ಪೋಲಿಸ್ ಸೇರಿ ಲಕ್ಷಾಂತರ ಹಣ ಬಂಗಾರ ದರೋಡೆ

ಬಳ್ಳಾರಿ 21: ಕಳ್ಳರು ಸೇರಿಕೊಂಡು  ಕಳ್ಳತನ ಮಾಡೋದು ಸಾಮಾನ್ಯ. ಆದರೆ ಕಳ್ಳರ ಜೊತೆಗೆ ಪೊಲೀಸ್  ಸೇರಿಕೊಂಡು ಬಳ್ಳಾರಿಯಲ್ಲಿ ಡಾಕಾಯಿತಿ ಮಾಡಿದ್ದು.  ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆಯಾಗಿದೆ. ಪ್ರಜರಣದ ಸಂಬಂಧ ಪೊಲೀಸ್ ಸೇರಿ ಆರು ಜನರನ್ನು ಬಂಧಿಸಲಾಗಿದೆ.    ಈ ಕುರಿತು ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ  ಮಾಹಿತಿ ನೀಡಿದ ಎಸ್ಪಿ. ಡಾ.  ಶೋಭಾರಾಣಿ. ರಘು ಎನ್ನುವ ನಗರದ ಉದ್ಯಮಿ ಸೆ12 ರಂದು ಬೆಳಿಗಿನ ಜಾವ ಬೈಕ್ ಮೇಲೆ  22 ಲಕ್ಷ 99 ಸಾವಿರ ನಗದು ಮತ್ತು 318 ಗ್ರಾಂ ಬಂಗಾರ ತೆಗೆದುಕೊಂಡು ಇಲ್ಲಿನ ರಾಯದುರ್ಗಾ ಬಸ್ ನಿಲ್ದಾಣದ ಕಡೆ ಹೋಗ್ತಿರುವಾಗ ಅವರಿಗೆ ಕಣ್ಣಿಗೆ ಕಾರದ ಪುಡಿ ಎರಚಿ ಹಣ ಒಡೆವೆ ದರೋಡೆ ಮಾಡಲಾಗಿತ್ತು. 

ಪ್ರಮುಖ ಆರೋಪಿ ತೌಸೀಫ್ಜಾ ಲಾಲು,  ಜಾವಿದ್,  ಪೀರಾ , ದಾದಾ ಖಲಂದರ್, ಮುಸ್ತಕಾ ಅಲಿ ರೆಹಮಾನ್ ರಿಹಾನ್ ಇಷ್ಟು ಜನ  ದರೋಡೆ ಮಾಡಿದ್ದರು. ದರೋಡೆಯ ವಿಶೇಷ: ಈ ದರೋಡೆಯ ವಿಶೇಷವೆಂದರೆ  ಬ್ರೂಸ್ ಪೇಟ್ ಠಾಣೆಯ ಹೆಡ್ ಕಾನ್ಸಟೇಬಲ್ ಸಾಥ್ ನೀಡಿರುವುದು. ಹೆಡ್ ಕಾನ್ಸಟೇಬಲ್ ಮಹಬೂಬ್ ಪಾಷ ಮತ್ತು ಪ್ರಮುಖ ಆರೋಪಿ ಅಸೀಫ್ ಆತ್ಮೀಯ ಗೆಳೆಯರಾಗಿದ್ದರು.  

ಆ ಸಲುಗೆಯಿಂದಲೇ ದರೋಡೆ ಮಾಡುವ ಪ್ಲಾನ್ ಮಾಡಿದ್ದರಂತೆ. ದರೋಡೆ ನಂತರ ರಘು ಬ್ರೂಸ್ ಪೇಟೆ ಠಾಣೆಗೆ ದೂರು ನೀಡಿದ್ದರು. ತನಿಖೆ ಮಾಡಿದಾಗ  ಐವರು ಸಿಕ್ಕಿಬಿದ್ದಿದಾರೆ. ಅವರನ್ನು ಬಂಧಿಸಿ ವಿಚಾರಣೆ ಮಾಡಿದಾಗ. ಆರೋಪಿಗಳು ಹೆಡ್ ಕಾನ್ಸಟೇಬಲ್ ಪಾತ್ರ ಇರುವ ಬಗ್ಗೆ ತಿಳಿಸಿದ್ದಾರೆ. ಪೊಲೀಸರನ್ನು ಇದನ್ನು ನಂಬಿಲ್ಲ.ದರೋಡೆ ಹಣದಲ್ಲಿ ಹೆಡ್ ಕಾನ್ಸಟೇಬಲ್ ಮೆಹಬೂಬ್ ಪಾಷಾ  ಒಂಭತ್ತು ಲಕ್ಷ ಹಣವನ್ನು ಪಡೆದಿದ್ದ. ಪಾಷಾನ ಮನೆ ಸರ್ಚ್‌ ಮಾಡಿದಾಗದರೋಡೆಯಿಂದ ಪಡೆದ  9 ಲಕ್ಷ ರೂ ಹಣ  ದೊರೆತಿದೆಯಂತೆ. 

ಸದ್ಯ15 ಲಕ್ಷ  91ಸಾವಿರ ನಗದು 116 ಗ್ರಾಂ ಚಿನ್ನಾಭರಣ  ರಿಕವರಿ ಮಾಡಲಾಗಿದೆ. ಅರೀಪ್ ಈ ಮೊದಲು ಹೋಮ್ ಗಾರ್ಡ್‌ ಕೆಲಸ ಮಾಡುತ್ತಿದ್ದ. ಪಾಷಾನ ಜೊತೆ ಗೆಳೆತನ ಬೆಳೆದಿತ್ತು. ಅಮಾನತು: ಹೆಡ್ ಕಾನ್ಸಟೇಬಲ್ ಮೆಹಬೂಬ್ ಪಾಷ ನನ್ನು  ಅಮಾನತ್ತು ಮಾಡಿದ್ದಷ್ಟೇ ಅಲ್ಲದೇ ಬಂಧಿಸಲಾಗಿದೆಂದು ಎಸ್ಪಿ ತಿಳಿಸಿದ್ದಾರೆ. ಈ ರೀತಿ ಮಾಡಿರುವುದು ಇದೇ ಮೊದಲ, ಈ ಹಿಂದೆ ಮಾಡಿದ್ದಾರಾ ಎಂಬ ವಿಚಾರಣೆ ನಡೆದಿದೆಯಂತೆ.  ಉತ್ತಮವಾದ ಸಂಬಳ ನೀಡಿದರೂ, ದರೋಡೆ ಮಾಡುವಮನತ ಪೊಲೀಸರು ಇರುವುದು ವಿಪರ್ಯಾಸವೇ ಸರಿ.  ಮನುಷ್ಯನ ದುರಾಸೆಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಎಂದರು.