ಬತ್ತಲಾಗದ ಸಾಗರ ಒಂದು ಸಾಹಿತ್ಯ ನಮಗೆ ಬೇರೊಂದು ಸಿಗೋದಿಲ್ಲ : ಬಾಳಣ್ಣ ಶೀಗಿಹಳ್ಳಿ

ಧಾರವಾಡ 21: ವಚನ ಸಾಹಿತ್ಯ ಒಂದು ಮಹಾಸಾಗರ ಅಕ್ಷಯ ಪಾತ್ರೆ ಕನ್ನಡಿಗರಿಗೆ ಮತ್ತು ಜಗತ್ತಿಗೆ ಬತ್ತಲಾಗದ ಸಾಗರ ಇಂತಹ ಒಂದು ಸಾಹಿತ್ಯ ನಮಗೆ ಬೇರೊಂದು ಸಿಗೋದಿಲ್ಲ ಎಂದು ಡಾ. ಬಾಳಣ್ಣ ಶೀಗಿಹಳ್ಳಿ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು ಗುರ​‍್ಪ ಹಾಗೂ ಗೌರಮ್ಮ ಬೆಲ್ಲದದತ್ತಿ ಅಂಗವಾಗಿ ಆಯೋಜಿಸಿದ್ದ  ಉಪನ್ಯಾಸ ಕಾರ್ಯಕ್ರಮದಲ್ಲಿ ‘ಶರಣರ ವಚನಗಳಲ್ಲಿ ಮನುಷ್ಯ ಪರಿಕಲ್ಪನೆ’ ವಿಷಯಕುರಿತು ಮಾತನಾಡುತ್ತಿದ್ದರು.  

ಮುಂದುವರೆದು ಮಾತನಾಡುತ್ತಾ ಶರಣರು ಯಾವ ವಿಶ್ವ ವಿದ್ಯಾಲಯಕ್ಕೂ ಹೋದವರಲ್ಲ ಸುಮಾರು 300 ಜನ ವಚನಕಾರರು ಏಕಕಾಲಕ್ಕೆ ಮನುಷ್ಯ ಬದುಕಿನ ಸಂವೇದನೆಗಳನ್ನು ಸಮಕಾಲೀನ ಜನಕ್ಕೆ ತಲುಪಿಸುವ ಕಾರ್ಯ ಮಾಡುತ್ತಾ ಒಳ್ಳೆಯ ಭಾಷೆ ಬಳಸಿಕೊಂಡರು. ಜಗತ್ತಿನ ಸಾಹಿತ್ಯದಲ್ಲಿ ಜನ ಸಾಮಾನ್ಯರಿಗಾಗಿ ಬರೆದಂತಹ ಅಚ್ಚ ಕನ್ನಡದ ಸಾಹಿತ್ಯ ವಚನ ಸಾಹಿತ್ಯ ಜನ ಸಾಮಾನ್ಯರಿಗೂ ಅರ್ಥವಾಗುವಂತೆ ಬರೆದರು. ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ತಮ್ಮ ಬದುಕನ್ನು ಹಸನ ಮಾಡಿಕೊಂಡವರು ಶರಣರು. 

ಅಲ್ಲಮಪ್ರಭು, ಬಸವಣ್ಣ, ಚನ್ನಬಸವಣ್ಣ, ಅಕ್ಕಮಹಾದೇವಿ, ಅನೇಕ 300 ಕ್ಕೂ ಹೆಚ್ಚು ಶರಣರು ಅತ್ಯಂತ ಅರ್ಥಪೂರ್ಣವಾದ ರೀತಿಯಲ್ಲಿ ಮನುಷ್ಯರು ಮನುಷ್ಯರಾಗಿ ಉಳಿಯಬೇಕಾದ ಮಾರ್ಗವನ್ನು, ಮಾನವ ದೇವಮಾನವನಾಗಿ ಬದುಕಬೇಕಾದ ಮಾರ್ಗವನ್ನು, ನಡೆಯಲ್ಲಿ ನುಡಿಯಲ್ಲಿ ಒಂದಾಗಿ ಸಮಾಜಕ್ಕಾಗಿ ನುಡಿದಂತೆ ನಡೆದು ತೋರಿಸಿಕೊಟ್ಟವರು. ಅನೇಕ ವಚನಗಳಲ್ಲಿ ಮನುಷ್ಯನ ಬದುಕಿನ ರೀತಿಯನ್ನು ತಿಳಿಸಿಕೊಟ್ಟವರು ವಚನಕಾರರು. ಅನೇಕ ವಚನಗಳ ಉದಾಹರಣೆಯನ್ನು ತೆಗೆದುಕೊಂಡು ವಿವರಿಸಿದರು. ಇಂದು ಸಮಾಜದಲ್ಲಿ ಮನುಷ್ಯನ ವರ್ತನೆ ಭಾವನೆ ಬದುಕುವ ರೀತಿ ಎಲ್ಲವೂ ಸುಧಾರಿಸಬೇಕಾದರೆ ವಚನ ಸಾಹಿತ್ಯವನ್ನು ಓದಬೇಕು, ಅರ್ಥಮಾಡಿಕೊಳ್ಳಬೇಕು. 12ನೇ ಶತಮಾನದಲ್ಲಿ ಪಂಡಿತರಲ್ಲದ ಅತಿ ವಿದ್ಯಾಭ್ಯಾಸವನ್ನು ಮಾಡಲಾರದ ದಿನನಿತ್ಯದ ಬದುಕಿನಲ್ಲಿ ಬರುವ ಅನುಭವಗಳಲ್ಲಿ ಸರಳವಾಗಿ ಸುಂದರವಾಗಿ ಅಭಿವ್ಯಕ್ತಿಗೊಳಿಸಿ ಬದುಕಿದ ಶರಣರನ್ನು ಇಂದು ಸ್ಮರಿಸಬೇಕಿದೆ ಎಂದರು. 

ಅಧ್ಯಕ್ಷತೆ ವಹಿಸಿ ಧಾರವಾಡ ಮುರುಘಾ ಮಠದ ಆಡಳಿತ ಮಂಡಳಿ ಉಪಾಧ್ಯಕ್ಷ ನಾಗರಾಜ ಪಟ್ಟಣಶೆಟ್ಟಿ ಮಾತನಾಡಿ, ಬೆಲ್ಲದ ಮನೆತನ ಮೊದಲಿಂದಲೂ ಒಳ್ಳೆಯ ಸಂಸ್ಕಾರ ಹೊಂದಿದ್ದು ಹಾಗು ರಾಜಕೀಯ, ವ್ಯಾವಹಾರಿಕ ಕ್ಷೇತ್ರದಲ್ಲಿ ಹೆಸರು ಮಾಡಿದ್ದು ಸಮಾಜ ಮುಖಿಯಾಗಿ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. 

ಗುರ​‍್ಪ ಬೆಲ್ಲದಅವರ ಮೊಮ್ಮಗಳಾದ ಡಾ.ಗೌರಿ ಬೆಲ್ಲದಅವರು ಮಾತನಾಡಿ, ತಮ್ಮಎಲ್ಲ ಬೆಳವಣಿಗೆಯ ಶಿಕ್ಷಣದ ಸಂಸ್ಕಾರದ ಹಿಂದೆ ನಮ್ಮಅಜ್ಜನವರಾದಗುರ​‍್ಪ ಬೆಲ್ಲದವರ ಪ್ರೋತ್ಸಾಹ ಹಾಗೂ ಕಾರ್ಯ ಬಹಳಷ್ಟು ಇದೆ.ಅವರು ಶರಣರಂತೆ ಬದುಕಿ ಬಾಳಿದರು, ನಮಗೂ ಸಂಸ್ಕಾರಕೊಟ್ಟರುಎಂದು ಸ್ಮರಿಸಿದರು. 

ವೇದಿಕೆ ಮೇಲೆ ದತ್ತಿ ದಾನಿಗಳಾದ ಮಹೇಶ ಬೆಲ್ಲದ, ಪ್ರಶಾಂತಅವರು ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಚಂದ್ರಕಾಂತ ಬೆಲ್ಲದ ಉಪಸ್ಥಿತರಿದ್ದರು. 

ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು.ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ವೀರಣ್ಣಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. 

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಡಾ.ಶ್ರೀಶೈಲ ಹುದ್ದಾರ, ಡಾ.ಅರವಿಂದ ಯಾಳಗಿ, ಡಾ ಪಾರ್ವತಿ ಹಾಲಭಾವಿ, ಸುರೇಶ ಹಾಲಭಾವಿ, ರಾಜೇಂದ್ರ ಸಾವಳಗಿ, ಎಸ್‌.ಜಿ. ಪಾಟೀಲ,  ಚಂದ್ರಶೇಖರ ರೊಟ್ಟಿಗವಾಡ. ಶಾರದಾ ಬೆಲ್ಲದ, ಡಾ.ಮಾರ್ಕಂಡೇಯ ದೊಡಮನಿ, ಕೆ.ಎಂ.ಅಂಗಡಿ, ಪ್ರಕಾಶ ಧರಣೆಪ್ಪ ಗೌಡರ,ಎಸ್‌.ಕೆ.ಕುಂದರಗಿ, ಕೋರಿಶೆಟ್ಟರ ಮುಂತಾದವರು ಇದ್ದರು.