ಲೋಕದರ್ಶನ ವರದಿ
ಮಸ್ಕಿ 28: ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಹಮ್ಮಿಕೊಂಡಿದ ಪೌರತ್ವ ತಿದ್ದುಪಡಿ ವಿರೋಧಿಸಿ ದಲಿತ ಪರ ಸಂಘಟನೆ ಹಿಂದುಳಿದ ಅಲ್ಪಸಂಖ್ಯಾತರ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವೇದಿಕೆಯನ್ನು ಉದ್ಧೇಶಿ ಮಾತನಾಡಿದ ಮನುಜ ಮತದ ಸಮಾಜದ ಅಧ್ಯಕ್ಷ ಪತ್ರಕರ್ತ ಡಿ.ಎಚ್.ಕಂಬಳಿ ಜಾತಿಯ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಅಮೀದ್ ಶಾಹ ಅವರು ಮಾಡುತ್ತಿದ್ದಾರೆ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.
ಇದನ್ನು ವಿರೋಧಿಸಿ ಇಂದು ಮಸ್ಕಿ, ಮಾನ್ವಿ, ದೇವದುರ್ಗ, ಸಿಂಧನೂರು, ರಾಯಚುರು ನಲ್ಲಿ 30 ರಂದು ಬೃಹತ್ ಪ್ರಿಭಟನೆ ಹಮ್ಮಿಕೊಳ್ಳಲಾಗಿದ್ದು ಮುಸ್ಲಿಂ ಅಲ್ಪಸಂಖ್ಯಾತರ ದಲಿತ ಎಂಬ ಜಾತಿಗಳನ್ನು ಇಟ್ಟುಕೊಂಡು ಜಗಳ ಹಚ್ಚುವ ಕೆಲಸ ಸಿ.ಟಿ.ರವಿ ಅಂತಹ ಸಚಿವರು ಮಾಡುತ್ತಿದ್ದಾರೆ. ಕುಲಿ-ಕಾರ್ಮಿಕರು ಸಾರ್ವಜನಿಕರು ಉತ್ತರ ಕನ್ನಡ ಪ್ರದೇಶದ ಜನರು ದುಡಿಯಲು ಬೆಂಗಳೂರು, ಮಗಳೂರು, ಗೋವಾ ಅಂತಹ ಹೋಗಿರುತ್ತಾರೆ ಅಂತಹವರು ಎನ್.ಆರ್.ಸಿ.ಆಧಾರ್ ಕಾರ್ಡ, ಐಡಿ ಕಾರ್ಡ, ಬಿ.ಪಿ.ಎಲ್.ರೇಷನ್ ಕಾರ್ಡ ಇವುಗಳು ಯಾವು ಬೇಡ ಎಲ್.ಐ.ಸಿ.ವಿಸಾ ಪಾಸಪೋರ್ಟ ಕೇಳುತ್ತಿದ್ದಾರೆ.
ನಮ್ಮ ದೇಶದಲ್ಲಿ ಯಾರು ಹೋರದೇಶದಿಂದ ಬಂದು ನೆಲೆಸಿಲ್ಲ ಸರ್ಕಾರ ಪೌರತ್ವ ಕಾಯ್ದೆಯನ್ನು ಹಿಂಪಡೆದುಕೊಳ್ಳಬೇಕೆಂದು ಹೇಳಿದರು. ದಲಿತ ಮುಖಂಡರು ಕ್ರಾಂತಿ ಗೀತೆ ಹಾಡುವ ಮೂಲಕ ಸಾರ್ವಜನಿಕರನ್ನು ಆಕರ್ಷಸಿದರು.
ಈ ಸಂದಂರ್ಭದಲ್ಲಿ ಪಾಮಯ್ಯ ಮುರಾರಿ,ಅಬ್ದುಲ್ ಗನಿ, ಚಂದ್ರಶೇಖರ ಗೋರೆಬಾಳ, ದೋಡಪ್ಪ ಮುರಾರಿ, ನೀಲಕಂಠಪ್ಪ ಭಂಜೆತ್ರಿ ಪೌರತ್ವ ಕಾಯ್ದೆಯ ಬಗ್ಗೆ ವಿರೋಧಿಸಿ ಮಾತನಾಡಿದರು. ದಲಿತ ಮುಖಂಡ ಮಲ್ಲಯ್ಯ ಬಳ್ಳ, ನಾಗಪ್ಪ ತಂತಿ, ಹನುಮಂತಪ್ಪ ವೆಂಕಟಾಪೂರು, ಸುರೇಶ ಅಂತರಗಂಗಿ,ಮಸೂದ್ ಪಾಶ, ಅಶೋಕ ಮುರಾರಿ, ಯಮನೂರು ಒಡೆಯರು, ಬಸವರಾಜ ಉದ್ಬಾಳ ಸೇರಿದಂತೆ ಮಸ್ಕಿ ತಾಲೂಕಿನ ದಲಿತ ಪರ ಸಂಘಟನೆ ಮುಖಂಡರು ಹಾಗೂ ಮುಸ್ಲಿಂ ಅಲ್ಪಸಂಖ್ಯಾತರ ಸಂಘಟನೆಯ ಮುಖಂಡರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಮಸ್ಕಿ ಪೋಲಿಸ್ ಸಿ.ಪಿ.ಐ ಮತ್ತು ಪಿ.ಎಸ್.ಐ ಸಣ್ಣ ವಿರೇಶರವರು ಅವರು ಲಿಂಗಸೂಗೂರು ಪಿ.ಎಸ್.ಐ ಸೇರಿದಂತೆ ಅನೇಕ ಪೋಲಿಸ ಸಿಬ್ಬಂದಿ ಸೇರಿಂದತೆ ಬೀಗಿ ಬಂದೋಬಸ್ತ ಮಾಡಲಾಯಿತು. ಯಾವುದೇ ಗಲಾಟೆ ಇಲ್ಲದೇ ಕಾರ್ಯಕ್ರಮ ಯಶ್ವಸಿಯಾಗಿ ಜರಗಿತು.