ಹೂವಿನಹಡಗಲಿ 06: ಕಾಲುವೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳಿಗೆ ಭೂ ಪರಿಹಾರ ನೀಡಬೇಕು ಎಂದು ಮುಂಡರಗಿ ತಾಲ್ಲೂಕು ಮುಂಡವಾಡ ಗ್ರಾಮದ ರೈತರು ಇಲ್ಲಿನ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಬುಧವಾರ ಮತ್ತೊಮ್ಮೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಅಂದು ಫೆ.28ರೊಳಗೆ ಪರಿಹಾರ ನೀಡುವ ಭರವಸೆಯನ್ನು ಭೂಸ್ವಾಧೀನಾಧಿಕಾರಿ ಚಿದಾನಂದ ಗುರುಸ್ವಾಮಿ ನೀಡಿದ್ದರು.ಆದರೆ ಇಲ್ಲಿವರೆಗೂ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು. ಹೂವಿನಹಡಗಲಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಮುಂದೆ ಮುಂಡರಗಿ ತಾಲ್ಲೂಕು ಮುಂಡವಾಡ ಗ್ರಾಮದ ರೈತರು ಭೂ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.ನೀಡುವವರೆಗೆ ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳದಲ್ಲೇ ಊಟ ತಯಾರಿಸಿ ಸೇವಿಸಿದರು.ರೈತ ವಿರೂಪಾಕ್ಷಪ್ಪ ಅಲ್ಲಿಪುರ ಮಾತನಾಡಿ, ಸಿಂಗಟಾಲೂರು ಯೋಜನೆ ಕಾಲುವೆಗೆ 13 ವರ್ಷಗಳ ಹಿಂದೆ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಫೆಬ್ರವರಿ ಅಂತ್ಯಕ್ಕೆ ಪರಿಹಾರ ನೀಡುವ ಭರವಸೆ ನೀಡಿದ್ದ ಅಧಿಕಾರಿ ಮಾತು ತಪ್ಪಿದ್ದಾರೆ. ಕಚೇರಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಪರಿಹಾರ ವಿಳಂಬವಾಗಿದೆ. ರೈತರನ್ನು ಶೋಷಣೆಮಾಡಲಾಗುತ್ತಿದೆ’ ಎಂದು ಕಿಡಿಕಾರಿದರು.
ರೈತ ಸಂಗನಗೌಡ ಮಾತನಾಡಿ,, ಕಾಲುವೆಯ ಗುತ್ತಿಗೆದಾರರಿಗೆ ಎಲ್ಲ ಬಿಲ್ ಕೊಡ್ತೀರಿ, ಆದರೆ, ಭೂಮಿ ಕಳೆದುಕೊಂಡ ರೈತರನ್ನು 13 ವರ್ಷಗಳಿಂದ ಸತಾಯಿಸ್ತೀರಿ, ನಾವು ಸತ್ತ ಮೇಲೆ ಪರಿಹಾರ ಕೊಡ್ತಿರೇನು’ ಎಂದು ತರಾಟೆಗೆ ತೆಗೆದುಕೊಂಡರು.’ಉಳುಮೆಗೆ ಭೂಮಿಯೂ ಇಲ್ಲ, ಪರಿಹಾರವೂ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಸ್ಥಳಕ್ಕೆ ಭೇಟಿ ನೀಡಿದ ಭೂಸ್ವಾಧೀನಾಧಿಕಾರಿ ಚಿದಾನಂದ ಗುರುಸ್ವಾಮಿ ಮಾರ್ಚ್ ನಲ್ಲಿ ಪರಿಹಾರ ಕೊಡುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕ್ಯೆ ಬಿಟ್ಟರು.ತಹಶಿಲ್ದಾರರ ಸಂತೋಷ ಕುಮಾರ.ಸಿಪಿಐ ದೀಪಕ್ ಭೂಸರೆಡ್ಡಿ.ಪಿಎಸ್‌ಐ ವಿಜಯ ಕ್ರಷ್ಣ.ರಾಜೇಂದ್ರ ನಾಯ್ಕ.ವಾಸು ಇದ್ದರು.