ಬಿ-ಖಾತಾ ಅಭಿಯಾನದ ಸದುಪಯೋಗ ಪಡೆದುಕೊಳ್ಳಿ: ಸುರೇಖಾ ಬಾಗಲಕೋಟ
ದೇವರಹಿಪ್ಪರಗಿ 06: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳೊಂದಿಗೆ ತೆರಿಗೆ ಪಾವತಿಸಿ ಗಣಕೀಕೃತ ನಮೂನೆ 3ಎ ಮತ್ತು ಬಿ-ಖಾತಾ ಪಡೆದುಕೊಳ್ಳಬೇಕೆಂದು ಪ.ಪಂ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ತಿಳಿಸಿದ್ದಾರೆ. ಪಟ್ಟಣದ ಪ.ಪಂ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ.ಪಂ ಅಧ್ಯಕ್ಷೆ, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಪಟ್ಟಣದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಪುರಸಭೆಗಳ ಅಧಿನಿಯಮ-1964 ಪ್ರಕರ್ಣ-106ಕ್ಕೆ ಮಾನ್ಯ ಸರ್ಕಾರದ ಆಧೀನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಬೆಂಗಳೂರ ಅವರ ಅಂತಿಮ ಅಧಿಸೂಚನೆಯಡಿ ತಿದ್ದುಪಡಿ ತರಲಾಗಿದ್ದು ಸದರಿ ತಿದ್ದುಪಡಿಯ ಪೂರ್ವದಲ್ಲಿ ಸೃಜಿಸಲಾದ ಅಧಿಕೃತ ಸ್ವತ್ತುಗಳಿಗೆ ರಜಿಸ್ಟರ್ ಎ ನಲ್ಲಿ(ನಮೂನೆ 3) ಮತ್ತು ಅನಧಿಕೃತ ಆಸ್ತಿಗಳಿಗೆ ರಜಿಸ್ಟರ್ ಬಿ ರಲ್ಲಿ (ನಮೂನೆ 3ಎ) ನಿರ್ವಹಣೆ ಮಾಡಬೇಕಾಗಿರುವದರಿಂದ ಕಟ್ಟಡಗಳು/ನಿವೇಶನಗಳು ಹೊಂದಿರುವ ಆಸ್ತಿ ಮಾಲಿಕರಿಗೆ ಅನುಭೋಗದಾರರು ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಾಗೆ/ಅರೆ ಸರ್ಕಾರಿ/ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಸ್ವತ್ತುಗಳನ್ನು ಹೊರತುಪಡಿಸಿ’ ಇನ್ನೂಳಿದ ಕಟ್ಟಡಗಳ ಮತ್ತು ನಿವೇಶನಗಳ ಆಸ್ತಿಗಳಿಗೆ ಸಂಬಂದಿಸಿದ ದಾಖಲೆಗಳನ್ನು ಸಲ್ಲಿಸಿ ಎ ಮತ್ತು ಬಿ ಖಾತಾ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ. ಎ ಖಾತೆ ದಾಖಲಿಸಲು ಆಸ್ತಿಗೆ ಸಂಬಂದಿಸಿದ ಸ್ವತ್ತಿನ ಮಾಲೀಕತ್ವ ಸಾಭಿತುಪಡಿಸುವ ನೊಂದಾಯಿತ ಮಾರಾಟ ಪತ್ರಗಳು/ದಾನಪತ್ರಗಳು, ವಿಭಾಗ ಪತ್ರ, ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು, ಮಂಜೂರಾತಿ ಪತ್ರಗಳು, ಕಂದಾಯ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕುಪತ್ರ, ಸಕ್ಷಮ ಪ್ರಾಧಿಕಾರದಿಂದ ಅನುಮೋ ದನೆಯಾದ ದೃಢೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ, ಪ್ರಸಕ್ತ ಸಾಲಿನವರೆಗೆ ಋಣಬಾರ ಪತ್ರ, ಚಾಲ್ತಿ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿ ರಸೀದಿ, ಸ್ವತ್ತಿನ ಭಾವಚಿತ್ರ, ಮಾಲಿಕರ ಪೋಟೋ, ಮಾಲಿಕನ ಗುರುತಿನ ದಾಖಲೆ, ಕಟ್ಟಡ ಪರವಾನಿಗೆ ಪತ್ರ, ಕಟ್ಟಡ ಪೂರ್ಣಗೊಂಡ ಪತ್ರ ಲಗತಿಸಬೇಕು. ಮತ್ತು ಬಿ ಖಾತೆಗೆ ಆಸ್ತಿಗೆ ಸಂಬಂದಿಸಿದ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿ.10-09-2024ರ ಪೂರ್ವದಲ್ಲಿ ನೊಂದಾಯಿತ ಮಾರಾಟ ಪತ್ರಗಳು, ದಾನಪತ್ರ, ವಿಭಾಗ ಪತ್ರ, ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನ ವರೆಗೆ ಋಣಬಾರ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಸ್ವತ್ತಿನ ಭಾವಚಿತ್ರ, ಮಾಲಿಕರ ಪೋಟೋ, ಮಾಲಿಕರ ಗುರುತಿನ ದಾಖಲೆ, ಲಗತಿಸಿ ಮೇ 10 ರೊಳಗೆ ಅರ್ಜಿ ಸಲ್ಲಿಸಿ ರಜಿಸ್ಟರ್ ಬಿ ರಲ್ಲಿ ನಮೂನೆ 3ಎ ಇ-ಖಾತೆಯನ್ನು ಪಡೆಯಬಹುದಾಗಿದೆ ಎಂದು ಪ.ಪಂ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಅವರು ತಿಳಿಸಿದ್ದಾರೆ. ಸಾರ್ವಜನಿಕರು ಎಲ್ಲಾ ದಾಖಲಾತಿಯೊಂದಿಗೆ ಸ್ವತಃ ಕಚೇರಿಗೆ ಬಂದು ಇ-ಖಾತಾ ಅಭಿಯಾನದ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ದಲ್ಲಾಳಿಗಳಿಂದ ಮೋಸ ಹೋದರೆ ಅದಕ್ಕೆ ಪ.ಪಂ ಹೊಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.