ಲೋಕದರ್ಶನ ವರದಿ
ಮುಧೋಳ 22: ಹದಿಗೆಟ್ಟ ರಸ್ತೆಗಳು,ತಿಂಗಳಿಗ ಎರಡು ಬಾರಿ ಮಾತ್ರ ಕುಡಿಯುವ ನೀರಿನ ಸರಬರಾಜು,ಪೂರ್ಣಗೊಳ್ಳದ ಒಳಚರಂಡಿ ಯೋಜನೆ ಸೇರಿದಂತೆ ನಗರದ ನಾಗರಿಕರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಕ್ಕೆ ಬೇಸತ್ತು ಈಗಾಗಲೇ ಡಿ.17ರಂದು ರವಿ ವಾರ ಪ್ರತಿಭಟನೆಯ ಮೂಲಕ ನಗರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿ ಮತ್ತು ಪೌರಾಯುಕ್ತರಿಗೆ ಮನವಿ ಸಲ್ಲಿಸಿ, ಡಿ.25ರವರೆಗೆ ಗಡವು ನೀಡಿಲಾಗಿತ್ತು. ಈ ದಿನಾಂಕದೊ ಳಗೆ ಕಾಮಗಾರಿ ಆರಂಭವಾಗದ್ದರೆ ಡಿ 27ರಂದು ಮುಧೋಳ ಸಂಪೂರ್ಣ ಬಂದ್ ಮಾಡಲಾಗುವದು ಎಂದು ನಗರ ಹಿತರಕ್ಷಣಾ
ಸಮೀತಿ ಮುಖಂಡ ಡಾ.ಮೋಹನ್ ಬಿರಾದಾರ ಹೇಳಿದರು.
ಅವರು ಶನಿವಾರ ನಗರದ ಕಾನಿಪ ಸಂಘದ ಕಾಯರ್ಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಸುಮಾರು ಹತ್ತು ವರ್ಷಗಳಿಂದ ನೆನಗುದಿಗೆ ಬಿದ್ದ ಜೀರಗಾಳ ಮಾಲಾಪೂರ ಬೈಪಾಸ್ ರಸ್ತೆ ಇಲ್ಲಿಯವರೆಗೆ ಕಾಯರ್ಾರಂಭ ಮಾಡದೆ ಇರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಒಳಚರಂಡಿ ಯೋಜನೆ ವಿಫಲವಾಗಿದ್ದು ಇಡೀ ನಗರದ ಜನತೆ ಧೂಳಿನಿಂದ ಅಲಜರ್ಿ,ಕ್ಯಾನ್ಸರ್ ಸೇರಿದಂತ ಇತರ ರೋಗಗಳಿಂದ ಬಳಲುವಂತಾಗಿದೆ.ಕಳೆದ ಹತ್ತು ವರ್ಷಗಳಿಂದ ಈ ರೋಗಿಗಳ ಸಂಖ್ಯೆ ಇಮ್ಮಡಿಯಾಗುತ್ತಾ ಸಾಗಿದ್ದು ಇದು ತಾಲ್ಲೂಕಿನ ಎಲ್ಲ ಜನತೆಯ ಮೇಲೆ ಪರಿಣಾಮ ಬೀರಿದ್ದು, ಇದನ್ನು ನಿಯಂತ್ರಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವೂದೇ ಮುತುವಜರ್ಿ ವಹಿಸಿಲ್ಲವೆಂದು ಅವರು ಕಳವಳ ವ್ಯಕ್ತಪಡಿಸಿದರು.
ಈಗಾಗಲೇ ವಿಜಯಪೂರ-ಬೆಳಗಾವಿ ರಾಜ್ಯ ಹೆದ್ದಾರಿ ಪಕ್ಕಕ್ಕೆ ಇರುವ ಫಲಾನುಭವಿಗಳು ಸಕರ್ಾರದಿಂದ ಪರಿಹಾರ ಹಣ ಪಡೆದಿದ್ದು, ಅಂತಹ ಫಲಾನುಭವಿಗಳು ತಮ್ಮ ಅತಿಕ್ರಮಣಗೊಂಡ ಅಂಗಡಿ-ಮುಗ್ಗಟ್ಟುಗಳನ್ನು ತೆರವುಗೊಳಿಸದ ಕಾರಣ ರಸ್ತೆ ಇಕ್ಕಟ್ಟಾಗಿದ್ದು ಈ ಕೂಡಲೇ ಎಲ್ಲ ಫಲಾನುಭವಿಗಳು 30 ಮೀಟರ್ ವರೆಗೆ ತೆರವುಗೊಳಿಸಿ ನಗರದ ಸೌಂದರ್ಯ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಆಗುವ ಅನಾಹುತಗಳನ್ನು ತಪ್ಪಿಸಲು ಕೈಜೋಡಿಸಬೇಕು ಎಂದು ಹೇಳಿದರು.
ನಗರದಲ್ಲಿನ ಎಲ್ಲ ರಸ್ತೆಗಳು ದುರಸ್ತಿ ಯಾಗಬೇಕು. ಮಾಸ್ಟರ್ ಪ್ಲಾನ್ದಂತೆ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಸಬೇಕು. ನಿಯಮ ಮೀರಿ ಕಟ್ಟಿದ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಬೇಕು. ಕುಡಿಯುವ ನೀರು ಈ ಹಿಂದ ಒಂದು ದಿನಕ್ಕೆ ಎರಡು ಬಾರಿ
ಬರುತ್ತಿದ್ದು, ಈಗ ತಿಂಗಳಿಗೊಮ್ಮೆ ಬರುತ್ತಿದೆ. ಇದರಿಂದಾಗಿ ನಗರದಲ್ಲಿ ಕುಡಿಯುವ ನೀರಿಗಾಗಿ ಆಹಾಕಾರವೆದ್ದಿದೆ.
ಕಿಶೋರ ಮಸೂರಕರ ಮಾತನಾಡಿ, ನಮ್ಮ ಮೂಲಭೂತ ಹಕ್ಕುಗಳನ್ನು ಈಗ ಬೇಡುವ ಸ್ಥಿತಿ ನಿಮರ್ಾಣವಾಗಿದ್ದು, ಮೂಲಭೂತ ಸೌಲಭ್ಯಗಳನ್ನು ಕೂಡಲೇ ಈಡೇರಿಸದಿದ್ದರೆ, ಇದೇ ಡಿ 27ರಂದು ಸಂಪೂರ್ಣ ಬಂದ್ ಮಾಡಲಾಗುವದು. ಈ ಕಾರಣಕ್ಕಾಗಿ ತಾಲ್ಲೂಕಿನ ಎಲ್ಲ ರೈತರು, ರೈತರ ಹಿತರಕ್ಷಣೆಯಾಗಿ ಡಿ.26,27ರಂದು ಕಬ್ಬು ತುಂಬಿದ ಟ್ರ್ಯಾಕ್ಟರ್ಗಳನ್ನು ಕಳಿಸದಂತೆ ನೋಡಿಕೊಂಡು ಸವರ್ಾಂಗೀಣ ಅಭಿವೃದ್ಧಿಗಾಗಿ ನಡೆಯುವ ಮುಧೋಳ ಬಂದ್ಗೆ ಬೆಂಬಲಿಸಬೇಕು ಎಂದು ಹೇಳಿದರು.
25ರ ಗಡುವಿನೊಳಗೆ ರಸ್ತೆ ಅಗಲೀಕರಣಕ್ಕೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ದಿ.27ರಂದು ಮುಧೋಳ ನಗರದ ಎಲ್ಲ ಸಂಘ ಸಂಸ್ಥೆಗಳು ಹಾಗೂ ಸಂಘಟನೆಗಳ ಸಹಕಾರದೊಂದಿಗೆ ಮುಧೋಳ ನಗರ ಸಂಪೂರ್ಣ ಬಂದ್ ಮಾಡಿ,ರಸ್ತೆ ತಡೆ ಮತ್ತು ಬಸವೇಶ್ವರ ವೃತ್ತದಲ್ಲಿ ಬೇಡಿಕೆ ಈಡೇರುವವರೆಗೆ ಪ್ರತಿಭಟನೆಯನ್ನು ಅನಿಧರ್ೀಷ್ಟವಧಿಯ ವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದರು. ದಿ.27ರಂದು ಹಮ್ಮಿಕೊಂಡಿರುವ ಮುಧೋಳ ಬಂದ್ಗೆ ತಾಲೂಕಿನ ಗ್ರಾಮೀಣ ಭಾಗದ ಸಮಸ್ತ ನಾಗರಿಕರು,ಸಕ್ಕರೆ ಕಾಖರ್ಾನೆಗಳಿಗೆ ಕಬ್ಬು ಪೂರೈಸುವ ಎಲ್ಲ ರೈತರು,ಟ್ರ್ಯಾಕ್ಟರ್ ಮಾಲೀಕರು,ನಗರದ ಎಲ್ಲ ಶಿಕ್ಷ ವೃಂದ ಹಾಗೂ ವಿದ್ಯಾಥರ್ಿ/ನಿಯರು,ಮಹಿಳೆಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಸಮೀತಿಯವರು ವಿನಂತಿಸಿಕೊಂಡಿದ್ದಾರೆ.
ಮುಧೋಳ ನಗರ ಹಿತರಕ್ಷಣಾ ಸಮೀತಿ ಅಧ್ಯಕ್ಷ ಡಾ.ಸಂಜಯ ಘಾರಗೆ,ನಗರಸಭೆ ಸದಸ್ಯ ಡಾ.ಸತೀಶ ಮಲಘಾಣ, ಸತೀಶ ಬಂಡಿವ ಡ್ಡರ, ಭೀಮ ಕುಮಕಾಲೆ, ಸಿದ್ದು ಚಿಕದಾನಿ,ವಕೀಲರ ಸಂಘದ ಅಧ್ಯಕ್ಷ ಸುರೇಶ ಮಾಸರಡ್ಡಿ,ಉಮೇಶ ಬಾಡಗಿ,ಅನೀಲ ಚವ್ಹಾಣ,ಅಜೀತ
ಹೊನವಾಡ ಸೇರಿದಂತೆ ಅನೇಕ ಪ್ರತಿಭಟನಾಕಾರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು