ಬೆಳಗಾವಿ : ಮೂರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ವರದಿಯಾಗಿದೆ.
ಈ ಘಟನೆಯಲ್ಲಿ ಶಾರದಾ ಢಾಲೆ (38), ಅನುಶಾ ಢಾಲೆ-(10), ಅಮೃತಾ ಢಾಲೆ-(14 ) ಆದರ್ಶ ಢಾಲೆ -(8) ಮೃತಪಟ್ಟ ದುರ್ಧೈವಿಗಳಾಗಿದ್ದಾರೆ.
ಗಂಡ ಅಶೋಕ ಡಾಲೆ(45) ಕಿರುಕುಳ ತಾಳಲಾರದೇ ಆತ್ಮಹತ್ಯೆ.? ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಗಂಡ ಅಶೋಕ ಎನ್ನಲಾಗಿದೆ. ಇದರಿಂದ ಮನನೊಂದು ಮೂರು ಮಕ್ಕಳ ಜೊತೆಗೆ ಇಂದು ಶಾರದಾ ನದಿಗೆ ಹಾರಿದ್ದಾಳೆ.
ಗಂಡ ಅಶೋಕ ಡಾಲೆ ಈತನನ್ನು ಕುಡಚಿ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.