ನೇಸರಗಿ 05: ಸಮೀಪದ ಮತ್ತಿಕೊಪ್ಪದ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶ್ರೀ ಸಿದ್ಧಗಿರಿ ನೈಸರ್ಗಿಕ ಮತ್ತು ಸಾವಯವ ಕೃಷಿಕರ ಬಳಗ, ಬೆಳಗಾವಿ, ಗ್ರಾಮ ವಿಕಾಸ ಸೊಸೈಟಿ, ಧಾರವಾಡ ಹಾಗೂ ಯುನಿವರ್ಸಲ್ ನಾಲೇಜ್ ಟ್ರಸ್ಟ್, ಮಂಗಳೂರು ಇವರ ಸಹಯೋಗದಲ್ಲಿ ದಿನಾಂಕ 5 ರಂದು ಅಗ್ನಿ ಹೋತ್ರ ಕಾರ್ಯಕ್ರಮವನ್ನು ಏರಿ್ಡಸಲಾಗಿತ್ತು.
ಕೇಂದ್ರದ ಕಾರ್ಯಾಧ್ಯಕ್ಷರಾದ ಬಿ. ಆರ್. ಪಾಟೀಲ ಮಾತನಾಡಿ, ಅಗ್ನಿ ಹೋತ್ರ ಕೇವಲ ಧಾರ್ಮಿಕ ದೃಷ್ಟಿಯಲ್ಲಿ ಮಾತ್ರವಲ್ಲ ವೈಜ್ಞಾನಿಕ ದೃಷ್ಟಿಕೋನದಿಂದಲೂ ಸಾಕಷ್ಟು ಮಹತ್ವವನ್ನು ಪಡೆದಿದೆ ಎಂದರು. ಈ ಹೋಮವನ್ನು ಮನೆಯಲ್ಲಿ ಯಾರೂ ಬೇಕಾದರೂ ಮಾಡಬಹುದು. ವಯಸ್ಸಿನ ಬೇಧ-ಭಾವವಿಲ್ಲದೇ ಎಲ್ಲರೂ ಈ ಹೋಮವನ್ನು ಮಾಡಬಹುದು. ಇದರಿಂದ ಮನಸ್ಸು ಶಾಂತವಾಗುತ್ತದೆ. ಒತ್ತಡ ನಿವಾರಣೆಯಾಗುವಲ್ಲಿ ಸಹಾಯ ಮಾಡುತ್ತದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ಅಗ್ನಿ ಹೋತ್ರದಿಂದ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಶುದ್ಧಗೊಳಿಸುವ ಒಂದು ಅಸ್ತ್ರವಾಗಿದ್ದು ಇದರ ಉಪಯೋಗವನ್ನು ಪಡೆಯಲು ಕೇಳಿಕೊಂಡರು. ಅಗ್ನಿ ಹೋತ್ರದಿಂದ ಕೃಷಿಯಲ್ಲಿ ಆಗುವ ಬದಲಾವಣೆಯನ್ನು ವೈಜ್ಞಾನಿಕವಾಗಿ ಗಮನಿಸಿ ಸಂಶೋಧಿಸಲು ಸಲಹೆ ನೀಡಿದರು. ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಕೃಷಿ ವಿಜ್ಞಾನ ಕೇಂದ್ರದಿಂದ ನಡೆಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಸನಾತನಕಾಲದಿಂದಲೂ ರೂಢಿಸಕೊಂಡು ಬಂದ ಹೋಮಗಳಲ್ಲಿ ಅಗ್ನಿ ಹೋತ್ರ ಹೋಮವು ಕೂಡ ಒಂದು ಸರ್ವರೋಗಗಳಿಗೆ ಮದ್ದು ಎನ್ನುತ್ತಾರೆ ವಿಜ್ಞಾನಿಗಳು. ಹೋಮ ಯಾಗಗಳೆಂದರೆ ಕೇವಲ ನಮ್ಮ ಬಯಕೆ ಆಕಾಂಕ್ಷೆಗಳು ನೆರವೇರಿಸು ಎಂದು ಬೇಡಿಕೊಳ್ಳುವುದಲ್ಲ, ಬದಲಾಗಿ ಜೀವನದಲ್ಲಿ ನೀಡಿದ ಪ್ರತಿಯೊಂದು ವಸ್ತುಗಳು ನನ್ನದಲ್ಲ ಎಲ್ಲವೂ ನಿನ್ನದೇ ಹಾಗಾಗಿ ಎಲ್ಲವನ್ನು ನಿನಗೆ ಅರ್ಿಸುತ್ತೇನೆ ಎಂದು ಹೇಳಿ ತ್ಯಾಗ ಮಾಡುವ ಮನೋಭಾವದಿಂದ ಮಾಡಬೇಕೆಂದರು. ಕೃಷಿಯಲ್ಲಿಯೂ ಸಹ ಅನೇಕ ಬೆಳೆಗಳಲ್ಲಿ ರೋಗ ಮತ್ತು ಕೀಟ ಬಾಧೆ ಕಡಿಮೆಯಾಗಿ ಹೆಚ್ಚಿನ ಇಳುವರಿ ಪಡೆದಿರುವ ಬಗ್ಗೆ ವಿಜ್ಞಾನಿಗಳು ದಾಖಲಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬೆಳಗಾವಿಯ ಜಂಟಿ ಕೃಷಿ ನಿರ್ದೇಶಕ ಶ್ರೀ ಶಿವನಗೌಡ ಎಸ್. ಪಾಟೀಲ ಹಾಗೂ ಉಪ ಜಂಟಿ ಕೃಷಿ ನಿರ್ದೇಶಕ ಎಸ್. ಬಿ. ಕೊಂಗವಾಡ ಪಾಲ್ಗೊಂಡು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಿಕೆಯೊಂದರ ಸಂಪಾದಕರಾದ ಮಹೇಶ ಬಿಜಾಪುರ ಇವರು ಅಗ್ನಿ ಹೋತ್ರವು ಒಂದು ಬಹಳ ಪುರಾತನವಾದ ಹೋಮ ಇವುಗಳಲ್ಲಿ ಒಂದಾಗಿದ್ದು, ಸರಳ ಮತ್ತು ಸಹಜವಾಗಿ ಎಲ್ಲ ಧರ್ಮದವರೂ ಮಾಡುವಂತಹ ಹೋಮವಾಗಿದ್ದು, ಇಂದಿನ ದಿನಮಾನಗಳಲ್ಲಿ ಇಂತಹ ಒಂದು ಕಾರ್ಯಕ್ರಮವು ಬಹಳ ಮುಖ್ಯವಾಗಿದ್ದು ಕೆವಿಕೆಯವರು ಮಾಡಿದ್ದು ಶ್ಲಾಘನೀಯವಾಗಿದೆ ಎಂದರು. ಇದರಿಂದ ಕೃಷಿ ಇಳುವರಿಯಲ್ಲಿಯೂ ಹೆಚ್ಚಳವಾಗಿರುವುದು ವಿಜ್ಞಾನಿಗಳು ವಿವಿಧ ಪ್ರಬಂಧಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಅದೇರೀತಿ ಕೇಂದ್ರದ ವಿಜ್ಞಾನಿ ಡಾ. ಎಸ್. ಎಸ್. ಹಿರೇಮಠ ಇವರು ಅಗ್ನಿ ಹೋತ್ರದಿಂದಾಗುವ ಪ್ರಯೋಗಗಳ ಬಗ್ಗೆ ಮತ್ತು ವೈಜ್ಞಾನಿಕವಾಗಿ ಹೇಗೆ ಸಹಾಯ ಮಾಡುತ್ತದೆಂದು ತಿಳಿಸುತ್ತಾ ಕಾಪರ್ ಪಿರಾಮಿಡ್ ಉಪಯೋಗದಿಂದಾಗುವ ಧನಾತ್ಮಕ ಗುಣಧರ್ಮಗಳು ಹೊರಸುಸೂತ್ತವೆ, ದೇಶಿ ಹಸುವಿನ ಶಗಣಿಯಿಂದ ಎಂಟಿಥರ್ಮಲ್ ಗುಣಧರ್ಮವಿದ್ದು ಅಕ್ಕಿ ಮತ್ತು ದೇಶಿ ಆಕಳ ತುಪ್ಪಕ್ಕೆ ಅಗ್ನಿ ಸ್ಪರ್ಶಿಸಿದಾಗ ಪ್ರೊಪಿಲಿನ್ ಆಕ್ಸೈಡ್, ಇಥಲಿನ್ ಆಕ್ಸೈಡ್ನಂತಹ ಗ್ಯಾಸ್ಗಳನ್ನು ಹೊರಸೂಸಿ ನಮಗೆ ಬೇಡವಾದ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆ ಕುಂಠಿತಗೊಳಿಸುತ್ತದೆ ಅದೇರೀತಿ ಸೂರ್ಯೋದಯ ಹಾಗೂ ಸೂರ್ಯಾಸ್ತ- ಸಮಯಗಳಲ್ಲಿ ಸ್ಪಟಿಸುವ ಮಂತ್ರವನ್ನು ಹೇಳಿದರು ಮತ್ತು ಉದಾಹಣೆಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.
ಶಮ್ಮಿ ಸಿರಿ ಕಾರ್ಯಕ್ರಮದ ಪರಿಚಯ ಮಾಡಿದರು, ರೋಹಣ ಸಿರಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಹಾಲಪ್ಪ ಶಿವಬಸಣ್ಣವರ, ಶಮ್ಮಿ ಸಿರಿ, ರೋಹಣ ಸಿರಿ, ಅಶ್ವಿನಿ ಅಲ್ತಾಗಿ ನಾಯ್ಕ, ಗೀರೀಶ ಮತ್ತಿಕೊಪ್ಪ ಅಗ್ನಿ ಹೋತ್ರ ವಿಧಾನದ ಪ್ರಾತ್ಯಕ್ಷಿಕೆಯನ್ನು ತೋರಿಸಿಕೊಟ್ಟರು. 250 ರೈತ ಮತ್ತು ರೈತಮಹಿಳೆಯರಿಗೆ ಉಚಿತವಾಗಿ ಅಗ್ನಿ ಹೋತ್ರ ಹೋಮದ ಸಾಧನಗಳನ್ನು ನೀಡಿದರು. ದಿನಪ್ರತಿ ಮನೆಯಲ್ಲಿ, ತೋಟಗಳಲ್ಲಿ ಅಗ್ನಿ ಹೋತ್ರವನ್ನು ಮಾಡಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸುವಂತೆ ಮತ್ತು ಕೃಷಿ ಮತ್ತು ತೋಟಗಾರಿಕಾ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಲಹೆ ನೀಡಿದರು. ಕೇಂದ್ರದ ವಿಜ್ಞಾನಿ ಎಸ್. ಎಮ್. ವಾರದ ಕಾರ್ಯಕ್ರವನ್ನು ಆಯೋಜಿಸಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ 250 ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಪ್ರವೀಣ ಯಡಹಳ್ಳಿ, ಜಿ. ಬಿ. ವಿಶ್ವನಾಥ ಹಾಗೂ ಶಂಕರಗೌಡ ಪಾಟೀಲ, ವಿನೋದ ಕೋಚಿ ಮತ್ತು ಬೆಳಗಾವಿಯ ಸಿದ್ಧಗಿರಿ ನೈಸರ್ಗಿಕ ಮತ್ತು ಸಾವಯವ ಕೃಷಿಕರ ಬಳಗದ ಸದಸ್ಯರುಗಳಾದ ರವಿ ಕುರಬೇಟ ಹಾಗೂ ಮಹಾಂತೇಶ ಹಿರೇಮಠ, ಪ್ರಗತಿಪರ ರೈತ ಈರನಗೌಡ ಪಾಟೀಲ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಬೆಳಗಾವಿಯ ಸಿದ್ಧಗಿರಿ ನೈಸರ್ಗಿಕ ಮತ್ತು ಸಾವಯವ ಕೃಷಿಕರ ಬಳಗದ ಅಧ್ಯಕ್ಷ ಮಹಾಂತೇಶ ತೋಟಗಿ ವಂದಿಸಿದರು.