ಒಂದೇ ಸೂರಿನಲ್ಲಿ ಆಧುನಿಕ ಚಿಕಿತ್ಸೆ ಲಭ್ಯ: ಡಾ. ಸೋಮಶೇಖರ ಪಾಟೀಲ

Modern treatment available at one place: Dr. Somashekar Patil

ಒಂದೇ ಸೂರಿನಲ್ಲಿ ಆಧುನಿಕ ಚಿಕಿತ್ಸೆ ಲಭ್ಯ: ಡಾ. ಸೋಮಶೇಖರ ಪಾಟೀಲ 


ಕಾಗವಾಡ: ಆರೋಗ್ಯ ಪಂಢರಿಯೆಂದೇ ಹೆಸರುವಾಸಿಯಾಗಿರುವ ಮಿರಜ್ ಪಟ್ಟಣದಲ್ಲಿ ನೂರಾರು ಆಸ್ಪತ್ರೆಗಳು ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ್ರದ ನಾಗರೀಕರಿಗೆ ಆರೋಗ್ಯ ಸೇವೆ ನೀಡುತ್ತಿವೆ. ಈ ನಿಟ್ಟಿನಲ್ಲಿ ಪಟ್ಟಣದ ಹೆಸರಾಂತ ವೈದ್ಯರು ಸೇರಿ, ಒಂದೇ ಸೂರಿನಡಿ, ಎಲ್ಲ ರೀತಿಯ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಯುನಿಕ್ ಇನ್ಟಿಟ್ಯೂಟ್ ಆಫ್ ಕ್ರಿಟಿಕಲ್ ಕೆರ್ ಎಂಬ ನೂತನ ಆಸ್ಪತ್ರೆಯನ್ನು ಗಣ್ಯರ ಉಪಸ್ಥಿತಿಯಲ್ಲಿ ರವಿವಾರ ದಿ. 6ರಂದು ಲೋಕಾರೆ​‍್ಣಗೊಳಿಸಲಿದ್ದೇವೆಂದು ಖ್ಯಾತ ಸ್ತ್ರೀ ರೋಗ ತಜ್ಞ ಡಾ. ಸೋಮಶೇಖರ ಪಾಟೀಲ ತಿಳಿಸಿದ್ದಾರೆ. 


ಅವರು, ಗುರುವಾರ ದಿ. 03 ರಂದು ಸಂಜೆ ಮಿಜರ್ ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಉತ್ತರ ಕರ್ನಾಟಕದ ಮತ್ತು ಪಶ್ಚಿಮ ಮಹಾರಾಷ್ಟ್ರದ ನಾಗರೀಕರ ವಿಶ್ವಾಸದೊಂದಿಗೆ ನಮ್ಮ ನಮ್ಮ ಖಾಸಗಿ ಆಸ್ಪತ್ರೆಗಳ ಹೊರತಾಗಿಯೂ ಈ ಸುಸಜ್ಜಿತ ಆಸ್ಪತ್ರೆ ಕಾರ್ಯ ನಿರ್ವಹಿಸಲಿದೆ ಎಂದರು. 


ನೂತನ ಆಸ್ಪತ್ರೆಯ ಸಿಇಓ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಶೀರಿಷ ಚವ್ಹಾನ ಮಾತನಾಡಿ, ರವಿವಾರ ದಿ. 06 ರಂದು ನೂತನ ಆಸ್ಪತ್ರೆಯನ್ನು ಮಹಾರಾಷ್ಟ್ರದ ಉನ್ನತ ಶಿಕ್ಷಣ ಹಾಗೂ ಸಾಂಗಲಿ ಜಿಲ್ಲಾ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಪ್ರಕಾಶ ಅಬಿಟಕರ ಉದ್ಘಾಟಿಸಲಿದ್ದಾರೆ.  

ಮುಖ್ಯ ಅತಿಥಿಗಳಾಗಿ ಆಯುಷ್ಯಮಾನ ಭಾರತ ಮಿಶನ್‌ನ ಮಹಾರಾಷ್ಟ್ರ ಕಮೀಟಿಯ ಅಧ್ಯಕ್ಷ ಡಾ. ಓಂಪ್ರಕಾಶ ಸೇಠ, ಸಾಂಗಲಿಯ ಸಂಸದ ವಿಶಾಲ ಪಾಟೀಲ ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಶಾಸಕರು, ಮುಖಂಡರು, ಗಣ್ಯರು, ಖ್ಯಾತ ವೈದ್ಯರು ಭಾಗವಹಿಸಲಿದ್ದಾರೆ ಎಂದರು. 


150 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯಲ್ಲಿ 60 ಬೆಡ್‌ನ ಕ್ರಿಟಿಕಲ್ ಕೆರ್ ಸೆಂಟರ್, ಅನುಭವಿ ಮತ್ತು ಅತಿದಕ್ಷತೆ ವಿಭಾಗದ ತಜ್ಞ ವೈದ್ಯರು, ಸುಸಜ್ಜಿತ ಕ್ಯಾಥಲ್ಯಾಬ್ ಟಿಮ್, ಡೈಯಾಲಿಸಿಸ್ ವಿಭಾಗ, ಅತ್ಯಾಧುನಿಕ ತಂತ್ರಜ್ಞಾನದ ಆಪರೇಶನ್ ಥೆಯಿಟರ್, ಸಿಟಿ ಸ್ಕ್ಯಾನ್, ಯುಎಸ್‌ಜಿ ಎಕ್ಸ-ರೇ ಲ್ಯಾಬಾರಾಟರಿಯೊಂದಿಗೆ 24 ಗಂಟೆ ತ್ವರಿತ ಸೇವೆ ನೀಡಲಿದ್ದೇವೆ ಎಂದು ತಿಳಿಸಿದರು. 


ಯುನಿಕ್ ಇನ್ಟಿಟ್ಯೂಟ್ ಆಫ್ ಕ್ರಿಟಿಕಲ್ ಕೆರ್‌ನ ಚೇರಮನ್ ಡಾ. ದೀಲಿಪ ಟಕಲೆ, ಪೆಟ್ರನ್ ಡಾ. ಶಿಶಿರ ಗೋಸಾವಿ, ಡೆಪ್ಯೂಟಿ ಡೈರೆಕ್ಟರ್ ಸಾನಿಕಾ ಪ್ರಾಣಿ, ಡಾ. ಶಬಾನಾ ಮುಜಾವರ, ಡಾ. ಸುರಜ ತಾಂಬೋಳಿ, ಡಾ. ವಿನೋದ ಪರಮಶೆಟ್ಟಿ, ಡಾ. ಅವಿನಾಶ ಪಾಟೀಲ, ಡಾ. ವಿಕ್ರಮಸಿಂಹ ಜಾಧವ, ಡಾ. ಭಾಸ್ಕರ ಪ್ರಾಣಿ, ಡಾ. ಅಮೀತ ಗಾವಡೆ, ಡಾ. ಜಯಧವಲ ಭೊಮಾಜ, ಡಾ. ರಿಯಾಜ ಮುಜಾವರ, ಡಾ. ಯೋಗೇಶ ಜಂಬಗೆ, ಡಾ. ಅಮೀತ ಜೋಶಿ, ಡಾ. ಸುಧೀರ ಕದಂ, ಡಾ. ಸಾರಂಗ ಗೋಸಾವಿ, ಡಾ. ರಾಹುಲ ಗೋಸಾವಿ, ಡಾ. ಅಭಿಮಾನ ಪವಾರ, ಡಾ. ಅಂಕಿತಾ ಗೋಸಾವಿ, ಡಾ. ಆರತಿ ಪವಾರ, ಡಾ. ರಂಜೀತ ಪಾಟೀಲ, ಡಾ. ವಿಶ್ವನಾಥ ಪಾಟೀಲ, ಡಾ. ಅಶ್ವಿನಿ ಪಾಟೀಲ, ಡಾ. ಗೀತಾ ಕದಂ, ಡಾ. ಸಬೇರಾ ತಾಂಬೋಳಿ, ಡಾ. ಗೌರವ ಫಳೆ, ಡಾ. ಅದಿತಿ ಫಳೆ, ಡಾ. ಅನುರಾಗ ಚವ್ಹಾನ, ಡಾ. ಶೃತಿ ಪರಮಶೆಟ್ಟಿ, ಡಾ. ರೋಹಿತ ಕದಂ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.