ಅಕ್ರಮ ಮರಳುಗಾರಿಕೆ ನಿಲ್ಲಿಸಲು ಸಚಿವರ ಖಡಕ್ ನಿರ್ದೇಶನ

ಗದಗ 11: ಸರ್ಕಾರಕ್ಕೆ ನ್ಯಾಯಯುತ ಆದಾಯವನ್ನು ತರುವ ಇಲಾಖೆಯ ಸಚಿವರಾಗಿ ಅಧಿಕಾರಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗಿಸುವಂತಹ  ಕಾರ್ಯ ನಿರ್ವಹಿಸದಿರಲು  ಹಾಗೂ ಗದಗ ಜಿಲ್ಲೆಯಲ್ಲಿ  ಆಕ್ರಮ ಮರಳುಗಾರಿಕೆಯನ್ನು  ನಿಲ್ಲಿಸಲು  ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಸಿ.ಸಿ.ಪಾಟೀಲ ನಿರ್ದೇಶನ ನೀಡಿದರು.

        ಗದಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜಿಲ್ಲಾ  ಗಣಿಗಾರಿಕೆ ಟಾಸ್ಕ್ ಫೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಜಿಲ್ಲೆಯ ತುಂಗಭದ್ರಾ ನದಿ ಪಾತ್ರದ  ಶಿರಹಟ್ಟಿ, ಮುಂಡರಗಿ ಮತ್ತು ಲಕ್ಷ್ಮೇಶ್ವರ  ಹಾಗೂ ಮಲಪ್ರಭಾ ಪಾತ್ರದ ನರಗುಂದ ತಾಲೂಕುಗಳಲ್ಲಿ ಮರಳುಗಾರಿಕೆ ವ್ಯಾಪ್ತಿ ಯಿದ್ದು  ಇಲ್ಲಿನ ತಹಶೀಲ್ದಾರರುಗಳು  ಲೋಕೋಪಯೋಗಿ ಇಲಾಖೆ  ಅರಣ್ಯ ಇಲಾಖೆ ಅಧಿಕಾರಿಗಳು ಗಣಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ  ಯಾವುದೇ ಕಾರಣಕ್ಕೂ  ಆಕ್ರಮ ಮರಳುಗಾರಿಕೆ ನಡೆಯದಂತೆ ತಡೆಯಬೇಕು.  ಈ ಕಾರ್ಯದಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೇ  ಕಾರ್ಯನಿರ್ವಹಿಸಬೇಕು. ಈ ಹಿಂದೆ ತುಂಗಭದ್ರಾ ನದಿ ಪಾತ್ರದಲ್ಲಿ  15 ರಿಂದ 20 ಟನ್ ಗಾತ್ರದ ಲಾರಿಗಳು ಎದುರುಬದುರಾಗಿ ಹೋಗುವಂತಹ ರಸ್ತೆಗಳನ್ನೇ ನಿರ್ಮಾಣ  ಮಾಡಲಾಗಿತ್ತು.  ಅಂತಹ ಪರಿಸ್ಥಿತಿ ಯಾವ ಕಾಲಕ್ಕೂ ಜಿಲ್ಲೆಯಲ್ಲಿ ಆಗಕೂಡದು ಎಂದು ಸಚಿವರು ಸ್ಪಷ್ಟ ನಿರ್ದೇಶನ ನೀಡಿದರು.  

        ಇತ್ತೀಚಿನ ನೆರೆ ಸಂದರ್ಭದಲ್ಲಿ  ಮಲಪ್ರಭಾ ನದಿ ಪಾತ್ರದ ರಾಮದುರ್ಗ ಹತ್ತಿರ ರೈತರ ಹೊಲಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಮರಳು ಶೇಖರವಾಗಿದ್ದು  ಇದರ ವಿಲೇವಾರಿ ಕುರಿತಂತೆ ಬೆಳಗಾವಿ ಹಾಗೂ ಗದಗ ಜಿಲ್ಲಾಧಿಕಾರಿಗಳು ಚಚರ್ಿಸಬೇಕು.  ಮರಳು ಗಾರಿಕೆ ಸೇರಿದಂತೆ ಗಣಿಗಾರಿಕೆಗೆ ಬರುವ ಅರ್ಜಿಗಳನ್ನು  ವಿಳಂಬಿಸದೇ ವಿಲೇವಾರಿ ಮಾಡಬೇಕು.  ನ್ಯಾಯಯುತವಾಗಿ ಗಣಿಗಾರಿಕೆ ಮಾಡುವವರು ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಸಚಿವರು ನುಡಿದರು.     ಒಟ್ಟಾರೆಯಾಗಿ ಗದಗ ಜಿಲ್ಲೆ ಮರಳು ಗಣಿಗಾರಿಕೆ ಕುರಿತಂತೆ  ರಾಜ್ಯ ಸಕರ್ಾರಕ್ಕೆ ಹೆಚ್ಚಿನ ಆದಾಯ ತರುವ ರೀತಿಯಲ್ಲಿ ಮಾದರಿ ಜಿಲ್ಲೆಯಾಗಿ ಕಾರ್ಯನಿರ್ವಹಿಸಬೇಕೆಂದು ಸಚಿವರು ನುಡಿದರು.  

     ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಮಾತನಾಡಿ  ಗದಗ ಜಿಲ್ಲೆ    ಮರಳು ಗಾರಿಕೆ ಸಂಬಂಧಿಸಿದಂತೆ  ಜಿಲ್ಲಾ ಟಾಸ್ಕ್ ಫೋರ್ಸ ಸಮಿತಿಯ ಎಲ್ಲ ಇಲಾಖಾ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಕಟ್ಟುನಿಟ್ಟಾಗಿ ಕೆಲಸ ಮಾಡಲು ಮುಂದಾಗಬೇಕು.  ಸರ್ಕಾರಕ್ಕೆ ಬರಬೇಕಾದ ರಾಜಧನ ಯಾವುದೇ ಕಾರಣಕ್ಕೂ ತಪ್ಪದಂತೆ ಕ್ರಮ ವಹಿಸಬೇಕು.  ಜಿಲ್ಲೆಯಲ್ಲಿ  ಈ ಹಿಂದೆ 4.25 ಕೋಟಿ ರೂ.ಗಳಿಗೆ ಸೀಮಿತವಾಗಿದ್ದ  ಮರಳುಗಾರಿಕೆ  ರಾಜಧನ, ಕಳೆದ ವರ್ಷ      14 ಕೋಟಿ ರೂ. ಗಳಿಗೆ ತಲುಪಿದೆ.  2019-20 ನೇ ಸಾಲಿನ ಎಪ್ರಿಲ್ ನಿಂದ ಅಗಸ್ಟ ವರೆಗೆ 3.79 ಕೋಟಿ ರೂ. ರಾಜಧನ ಬಂದಿದೆ ಎಂದು ಜಿಲ್ಲಾಧಿಕಾರಿಗಳು  ತಿಳಿಸಿದರು.  

         ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ  ಮರಳು ಹಾಗೂ ಗ್ರಾನೈಟ್ ಸೇರಿದಂತೆ  ಗಣಿಗಾರಿಕೆ ಕುರಿತಂತೆ ಮಾತನಾಡಿ  ಕಲ್ಲುಗಣಿಗಾರಿಕೆಗೆ 66, ಮರಳುಗಾರಿಕೆಗೆ ಸಂಬಂಧಿಸಿದಂತೆ 53 ಹಾಗೂ ಗ್ರಾನೈಟ್ಗೆ ಸಂಬಂಧಿಸಿದಂತೆ 5  ಗುತ್ತಿಗೆಗಳನ್ನು ನೀಡಲಾಗಿದೆ. 2019-20ನೇ ಸಾಲಿಗೆ ಮರಳುಗಾರಿಕೆಗೆ ಸಂಬಂಧಿಸಿದಂತೆ 20 ಪ್ರಕರಣಗಳನ್ನು ದಾಖಲಿಸಲಾಗಿದೆ. ಗದಗ ಜಿಲ್ಲೆಯಲ್ಲಿ  ಒಟ್ಟು 16 ಖನಿಜ ಚೆಕ್ ಪೋಸ್ಟ್ ಗಳು ಕಾರ್ಯನಿರ್ವಹಿಸುತ್ತಿದ್ದು   2018-19 ರಲ್ಲಿ 69 ಲಕ್ಷ 65 ಸಾವಿರ ರೂ  ದಂಡ  ಹಾಗೂ 2010-20 ನೇ ಸಾಲಿನ ಅಗಸ್ಟ ವರೆಗೆ  15.46 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.   

        ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಶ್ರೀನಾಥ ಜೋಶಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ  ಪ್ರಾಣೇಶ ರಾವ್,  ಉಪವಿಭಾಗಾದಿಕಾರಿ ಪಿ.ಎಸ್. ಮಂಜುನಾಥ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸಾವಿತ್ರಿ ಹಾಗೂ ಇಲಾಖೆಯ ಪ್ರೊಬೇಷನರಿ ಅಧಿಕಾರಿಗಳು,   ತಹಶೀಲ್ದಾರರುಗಳು, ಲೋಕೋಪಯೋಗಿ, ಅರಣ್ಯ, ಹಾಗೂ ಕಂದಾಯ  ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.