ಹುಬ್ಬಳ್ಳಿ ಷಹರದಲ್ಲಿ ಮನೆಯ ಬಾಗಿಲಿಗೆ ಬರುತ್ತಿದೆ ಗಾಲಿಗಳ ಮೇಲೆ ಮಾಂಸ ..!!

ಹುಬ್ಬಳ್ಳಿ, ಎಪ್ರಿಲ್ 27,ಗಾಲಿಗಳ ಮೇಲೆ ಅರಮನೆಯಾಯಿತು ಈಗ ಗಾಲಿಗಳ ಮೇಲೆ  ಮಾಂಸದ ಅಂಗಡಿ.! ಅರೆ ಇದೇನು ಹುಬ್ಬೇರಬೇಡಿ.!!
ಪವಿತ್ರ ರಂಜಾನ್ ಮಾಸದ ಸಮಯದಲ್ಲಿ ಮಾಂಸಕ್ಕೆ  ರಾಜ್ಯದಲ್ಲಿ  ಹೆಚ್ಚಿನ ಬೇಡಿಕೆಯಿರುವ ಕಾರಣ ಗಾಲಿಗಳ ಮೇಲೆ  ಮಾಂಸ ಮಾರಾಟವಾಗುತ್ತಿದೆ , ಮನೆಯ ಬಾಗಿಲಿಗೆ ಹುಬ್ಬಳ್ಳಿ  ಷಹರದಲ್ಲಿ ಮಾಂಸ ಬರುತ್ತಿದೆ. ಕರೋನ ಹಾವಳಿಯಿಂದ ಮಾಂಸದ  ಅಂಗಡಿಗಳಲ್ಲಿ ಜನರ ನೂಕುನುಗ್ಗಲು ತಡೆಯಲು ಮತ್ತು ಜನರ ಮನೆಯ ಬಾಗಲಿ  ಮಾಂಸ ಪೂರೈಕೆ ಮಾಡಲು  ಅನುಕೂಲವಾಗುವಂತೆ ಮನೆಯ ಮುಂದೆ  ನೀವು ಮಾಂಸ ಖರೀದಿ ಮಾಡಬಹುದು ಮತ್ತು ಇದಕ್ಕಾಗಿ ಮನೆಯಿಂದ ಮೈಲಿಗಟ್ಟಲೆ ದೂರ ಹೋಗಬೇಕಿಲ್ಲ   ಅಲೆಯಬೇಕಿಲ್ಲ ಮಾಂಸದ ಅಂಗಡಿಯೇ ನಿಮ್ಮ  ಮನೆಯ ಬಾಗಲಿಗೆ ಬರಲಿದೆ.
ಹುಬ್ಬಳ್ಳಿಯ ಎಲ್ಲಾ ವಾರ್ಡ್‌ಗಳಲ್ಲಿ ಮಿನಿ-ಗೂಡ್ಸ್ ವಾಹನಗಳು, ಆಟೋರಿಕ್ಷಾಗಳು ಮತ್ತು ಪುಶ್-ಕಾರ್ಟ್‌ಗಳ ಮೂಲಕ ಮಾರಾಟಗಾರರಿಗೆ ಸರಬರಾಜು ಮಾಡಲು ಅವಕಾಶ ನೀಡುವ ಮೂಲಕ ನಾಗರಿಕರ ಮನೆ ಬಾಗಿಲಿಗೆ ತರಕಾರಿಗಳು ಮತ್ತು ಹಣ್ಣುಗಳನ್ನು ವಿತರಿಸಿದ ನಂತರ, ಹುಬ್ಬಳ್ಳಿಯ ನಾಗರಿಕ ಸಂಸ್ಥೆ ಈಗ ಮನೆಯ ಬಾಗಿಲಿಗೆ  'ಮಾಂಸ ವನ್ನೂ ಪೂರೈಕೆ ಮಾಡಲಾಗುತ್ತಿದೆ . ಮಾಂಸದ ಅಂಗಡಿಗಳಲ್ಲಿನ ವಿಪರೀತ ಒತ್ತಡ ಜನರ ಮುಗಿಬೀಳುವ ಕ್ರಮ ತಡೆಯಲು ಈ ಕ್ರಮ ಕೈಗೊಂಡಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್‌ಡಿಎಂಪಿ), ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಮೊಬೈಲ್ ಮಾಂಸದ ಅಂಗಡಿಯೊಂದನ್ನು ಪರಿಚಯಿಸಿದೆ, ಇದು ಕೋಳಿ, ಮಟನ್ ಮತ್ತು ಮೊಟ್ಟೆಯನ್ನು ಮಾರಾಟ ಮಾಡಲು ನಗರದಾದ್ಯಂತ ಸಂಚಾರ  ಮಾಡುತ್ತಿದೆ. ನಾಗರಿಕರು ತಮ್ಮ ಮನೆಗಳಿಂದ ಹೊರಹೋಗದೆ ಮಾಂಸವನ್ನು ಪಡೆಯಲು ಸಹಾಯ ಮಾಡುವ ಉದ್ದೇಶ ಗುರಿ  ಇದಾಗಿದೆ. , ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾಗಿದ್ದರಿಂದ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದೆ. ನಾಗರಿಕರು ಫೋನ್ ಮೂಲಕ ಮುಂಚಿತವಾಗಿ ತಮಗೆ ಬೇಕಾಗುವ ಪ್ರಮಾಣವನ್ನು ಕೋರಿಕೆ ಮೂಲಕ ಸಲ್ಲಿಸಬಹುದಾಗಿದೆ .   ಎಂದು ಹುಬ್ಬಳ್ಳಿ  ಮಹಾನಗರ  ಪಾಲಿಕೆ  ಆಯುಕ್ತ ಸುರೇಶ್ ಇಟ್ನಾಲ್ ಹೇಳಿದ್ದಾರೆ.
'ಮೀಟ್ ಆನ್ ವೀಲ್ಸ್' ಅನ್ನು ನಿರ್ವಹಿಸುತ್ತಿರುವ ಶ್ರೀಧರ್ ಸಾಂಬ್ರಾನಿ ಅವರಿಗೆ ಹೈದರಾಬಾದ್‌ನ ಮಾಂಸ ಸಂಶೋಧನಾ ಸಂಸ್ಥೆ ತರಬೇತಿ ನೀಡಿದೆ. ಕೋಳಿಯ ಬೆಲೆ ಕೆ.ಜಿ.ಗೆ 220 ರೂ. ಮತ್ತು ಮಾಂಸಕ್ಕೆ  ಕೆ.ಜಿ.ಗೆ 700 ರೂ. ನಿಗದಿ ಮಾಡಲಾಗಿದೆ ಮುಂದಿನ ದಿನಗಳಲ್ಲಿ . ಧಾರವಾಡ ನಗರದಲ್ಲೂ  ಇದೇ ರೀತಿಯ ವಾಹನ ಸೌಲಭ್ಯ ಎಂದು ಅವರು ಹೇಳಿದರು. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಸುನಿಲ್ಕುಮಾರ್ ಮಾತನಾಡಿ, ಈ ವಾಹನವು ಮೂಲತಃ ತಯಾರಾದ ಮಾಂಸದ ಆಹಾರವನ್ನು ಮಾರಾಟ ಮಾಡಲು ಉದ್ದೇಶಿಸಲಾಗಿತ್ತು ಮತ್ತು ಈಗ ಅದನ್ನು ಲಾಕ್ ಡೌನ್ ಸಮಯದಲ್ಲಿ ಕೇವಲ ಮಾಂಸ ಮಾರಾಟ ಮಾಡಲು ಬಳಸಲಾಗುತ್ತಿದೆ. ವಾಹನವು ಡೀಪ್ ಫ್ರೀಜರ್ ಮತ್ತು ರೆಫ್ರಿಜರೇಟರ್ ಎರಡನ್ನೂ ಹೊಂದಿದೆ, ಮತ್ತು ಇದು ಒಂದು ಸಮಯದಲ್ಲಿ 45 ಕೆಜಿ ತಾಜಾ ಮಾಂಸ  ಸಾಗಿಬಲ್ಲದು  ಎಂದು ಅವರು ಹೇಳಿದರು.