ಲೋಕದರ್ಶನ ವರದಿ
ಗದಗ 22: ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ ಪ್ರಾಯೋಜಕತ್ವ ಹಾಗೂ ವಾಣಿಜ್ಯ ಸಂಯುಕ್ತಾಶ್ರಯದಲ್ಲಿ 'ಮಾರುಕಟ್ಟೆಯ ಉತ್ಸವ'ವನ್ನು ದಿ. 21ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಗದುಗಿನ ಜೀವವಿಮಾ ನಿಗಮ ಬೆಟಗೇರಿ ಶಾಖೆ-2 ರ ಮುಖ್ಯ ಕಾರ್ಯನಿರ್ವಾಹಕರಾದ ಎಫ್.ಎಸ್.ಸಿಂದಗಿ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಇಂದಿನ ಸ್ಪಧರ್ಾತ್ಮಕ ವ್ಯವಹಾರಿಕ ಜಗತ್ತನ್ನು ಎದುರಿಸಲು ಪದವಿ ಹಂತದಲ್ಲಿಯೇ
ಪುಸ್ತಕೀಯ ಜ್ಞಾನದ ಜೊತೆಗೆ ಪ್ರಾಯೋಗಿಕ ಅನುಭವವನ್ನು ನೀಡುವ ಇಂತಹ ಕಾರ್ಯಕ್ರಮಗಳ ಆಯೋಜನೆ ಅರ್ಥಪೂರ್ಣವಾದುದು. ಎಲ್ಲರೂ ಸರಕಾರಿ ನೌಕರಿಯನ್ನು ಮಾಡಲು ಸಾಧ್ಯವಿಲ್ಲ ಕೇವಲ ತಾಯಿ-ತಂದೆಗಳು ಗಳಿಸಿದ ಜಮೀನಿನಲ್ಲಿ ಉಳುಮೆ ಮಾಡುತ್ತೇವೆಂದರೂ ಆಗದು. ಭವಿಷ್ಯದಲ್ಲಿ ಯಾವುದೇ ಒಂದು ಸ್ವಂತ ಉದ್ಯೋಗ ವ್ಯವಹಾರವನ್ನು ಪ್ರಾರಂಭಿಸಲು ಬೇಕಾಗುವ ಉದ್ಯಮಶೀಲತಾ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಮಾರುಕಟ್ಟೆ ಉತ್ಸವಗಳ ಆಯೋಜನೆಯ ಲಾಭವನ್ನು ಪಡೆಯುವಂತೆ ಕರೆಯಿತ್ತರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಂ.ಬಿ.ಕೊಳವಿ ಅವರು ಮಾತನಾಡಿ ಇಂತಹ ಉತ್ಸವಗಳ ಆಯೋಜನೆ ಇಂದಿನ ಸ್ಪಧರ್ಾತ್ಮಕ ಜಗತ್ತಿನಲ್ಲಿ ಅಗತ್ಯವಾಗಿದ್ದು ವಿದ್ಯಾಥರ್ಿಗಳಲ್ಲಿ ಉದ್ಯಮಶೀಲತೆಯ ಪ್ರಾಯೋಗಿಕ ಜ್ಞಾನ ಕೌಶಲ್ಯ ಅಭಿವೃದ್ಧಿಗೆ ವೇದಿಕೆ ಆಗುತ್ತದೆ ಎಂದು ಹೇಳಿದರು. ಈ ಮಾರುಕಟ್ಟೆ ಉತ್ಸವದಲ್ಲಿ ವಿದ್ಯಾಥರ್ಿಗಳು ಸ್ವಂತ ಮಾರಾಟ ಮಳಿಗೆಗಳನ್ನು ಹಾಕುವ ಮೂಲಕ ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿದರು. ಗೃಹ ವಿಜ್ಞಾನ ವಿಭಾಗದ ವಿದ್ಯಾಥರ್ಿನಿಯರು ಆಹಾರ ಕಲಬೆರಿಕೆಯ ಮಾಹಿತಿ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ತಿಳುವಳಿಕೆ ನಿಡಿದುದು ಈ ಉತ್ಸವದಲ್ಲಿ ವಿಶೇಷವಾಗಿತ್ತು.
ರಾಜಶೇಖರ ಕೊಪ್ಪಳ ಪ್ರಾಥರ್ಿಸಿದರು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಶ್ವೇತಾ ರಾಜಯ್ಯನವರ ಕಾರ್ಯಕ್ರಮವನ್ನು ಆಯೋಜಿಸುವ ಉದ್ದೇಶ ವಸ್ತುಗಳ ಉತ್ಪಾದನೆ, ಮಾರಾಟ ಮಾಡುವ ಕೌಶಲ್ಯ ಮಹತ್ವದ ಕುರಿತು ಮಾತನಾಡಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ. ಎ.ಕೆ.ಮಠ ಅವರು ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮ ಸಂಘಟಕರಾದ ಪ್ರೊ. ಐಶ್ವರ್ಯ ಸಿಂಧೆ ವಂದಿಸಿದರು ಕಾರ್ಯದಶರ್ಿ ಸವಿತಾ, ಸಿಬ್ಬಂದಿ ವರ್ಗ ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ನಿಣರ್ಾಯಕರಾಗಿ ಜೆ.ಟಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಸತ್ಯನಾರಾಯಣ ಕನಕೆ ಹಾಗೂ ಸರಕಾರಿ ಪ್ರಥಮ ದಜರ್ೆ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಸಂತೋಷ್ ಮೂರಶಿಳ್ಳಿ ಕಾರ್ಯನಿರ್ವಹಿಸಿದರು.
ವಿದ್ಯಾರ್ಥಿಗಳು ತಮ್ಮ ಉತ್ಪನ್ನಗಳಾದ ಬೇಕರಿ ವಸ್ತುಗಳು, ಸೌಂದರ್ಯವರ್ಧಕ ಸಾಧನಗಳು, ಆಭರಣಗಳು, ಅಲಂಕಾರಿಕ ವಸ್ತುಗಳು, ಗಿಮರ್ಿಟ್, ಪಾಪಡಿ ಚಟ್ನಿ, ಪಾನಿಪುರಿ, ಗೋಬಿ ವಿವಿಧ ಬಗೆಯ ಕುರುಕಲು ತಿಂಡಿಗಳು ಐಸ್ಕ್ರೀಮ್ ವಿವಿಧ ಬಗೆಯ ರೈಸ್ ಮುಂತಾದ ವಸ್ತುಗಳ ಮಾರಾಟದಲ್ಲಿ ಅತ್ಯುತ್ಸಾಹ ಮತ್ತು ಆರೋಗ್ಯಕರ ಸ್ಪಧರ್ಾ ಮನೋಭಾವದಿಂದ ತೊಡಗಿ ಹಬ್ಬದ ವಾತಾವರಣ ನಿಮರ್ಿಸಿದರು. ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ವಿದ್ಯಾಥರ್ಿಗಳು, ಪಾಲಕರು ಸಾರ್ವಜನಿಕರು ಮಾರುಕಟ್ಟೆ ಉತ್ಸವದಲ್ಲಿ ಪಾಲ್ಗೊಂಡು ಪದಾರ್ಥಗಳ ರುಚಿಯನ್ನು ಸವೆದು ಆನಂದಿಸಿದರು.