ಲೋಕದರ್ಶನ ವರದಿ
ಗದಗ: ಸಮೃದ್ಧ ಕರ್ನಾಟಕ ಹಾಗೂ ಭರತ ಖಂಡದ ಪವಿತ್ರವಾದ ನೆಲ, ಜಲ, ಭಾಷೆ, ಸಂಸ್ಕೃತಿ ಮತ್ತು ಜನ ಜೀವನದಲ್ಲಿ ನಿಸ್ವಾರ್ಥದಿಂದ ಸಲ್ಲಿಸಿದ ಸಾಹಿತ್ಯ ಸೇವೆಯ ಸಾಧನೆಯನ್ನು ಪರಿಗಣಿಸಿ ಗದಗ ತಾಲೂಕಿನ ಚಿಕ್ಕೊಪ್ಪ ಗ್ರಾಮದ ಯುವ ಕವಿ ಮಹೇಶ ಕಲ್ಲಪ್ಪ ವಡ್ಡಿನ ಇವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಪ್ರತಿಷ್ಠಾನ ಟ್ರಸ್ಟ್ ರಾಜ್ಯ ಮಟ್ಟದಲ್ಲಿ ನೀಡುವ 20119ರ ಕರ್ನಾಟಕ ಕವಿಭೂಷಣ ರಾಜ್ಯ ಪ್ರಶಸ್ತಿ ಸಂಧಿಸಿದೆ.
ಕನರ್ಾಟಕ ಬಾಲ ವಿಕಾಸ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಪ್ರತಿಷ್ಠಾನವು ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಖಿಲ ಕನರ್ಾಟಕ 10ನೇ ಮಕ್ಕಳ ಸಾಹಿತ್ಯ ಹಾಗೂ ಕೆಂಪೇಗೌಡ ಕನರ್ಾಟಕ ಸಾಂಸ್ಕೃತಿಕ ಉತ್ಸವದ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಖ್ಯಾತ ನಾಟಕಕಾರ ಬೇಲೂರು ಕೃಷ್ಣಮೂತರ್ಿ, ಖ್ಯಾತ ಚಲನಚಿತ್ರ ನಿದರ್ೇಶಕ, ಚಿತ್ರ ಸಾಹಿತಿ ಸಿ.ವ್ಹಿ.ಶಿವಶಂಕರ, ಉಡುಪಿಯ ಆದಿಶಕ್ತಿ ಪೀಠದ ರಮಾನಂದ ಗುರೂಜಿ, ಚಿಪ್ಪಲಕಟ್ಟಿಯ ಕಲ್ಮೇಶ್ವರ ಮಹಾಸ್ವಾಮಿಗಳು ಹಾಗೂ ಟ್ರಸ್ಟ್ ಅಧ್ಯಕ್ಷ ಪತ್ರಕರ್ತ ರಮೇಶ ಸುರ್ವೆಯವರು ಯುವಕವಿ ಮಹೇಶ ವಡ್ಡಿನವರಿಗೆ ಶಾಲು ಹೊದಿಸಿ ಪ್ರಶಸ್ತಿ ಫಲಕ ನೀಡಿ ಹಾಗೂ ಪ್ರಶಸ್ತಿ ಪತ್ರದೊಂದಿಗೆ ಕರ್ನಾಟಕ ಕವಿಭೂಷಣ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಖ್ಯಾತ ಮಕ್ಕಳ ಸಾಹಿತಿ, ಸಂಶೋಧಕರಾದ ಡಾ. ರಾಜೇಂದ್ರ ಗಡಾದವರು ಮಾತನಾಡಿ ಆಧುನಿಕ ಯುಗದಲ್ಲಿ ಸಾಹಿತ್ಯದ ಕೃಷಿಯನ್ನ ಸದಾ ಹಸಿರಾಗಿಡಲು ಮಹೇಶ ವಡ್ಡಿನರವರಂತಹ ಯುವಕವಿಗಳು ಅವಶ್ಯ. ಸಮಾಜದ ಓರೆ-ಕೋರೆಗಳನ್ನು ಸಾಹಿತ್ಯದ ಮೂಲಕ ತಿದ್ದಲು ಯುವಕರು ಇವರಂತೆ ಮಾದರಿಯಾಗಬೇಕು. ಮಾದರಿಯಾಗಬೇಕು ಎಂದರು. ಸಾಹಿತ್ಯ ಲೋಕದಲ್ಲಿ ಇವರ ಇನ್ನಷ್ಟು ನವ-ನವೀನ ಕವನ ಕಥಾ ಸಂಕಲನಗಳು ಲೋಕಾರ್ಪಣೆಗೊಳ್ಳಲಿ ಎಂದು ಹಾರೈಸಿದರು. ಎ.ಎಲ್.ಅನಂತರಾಮ, ರಾಜ್ಯ ಸಂಪಾಜೆ, ವ್ಹಿ.ಎಂ.ಮೋಹನ, ವಿ.ಎಂ.ಪ್ರಿಯಾಂಕ ಉಪಸ್ಥಿತರಿದ್ದರು.