ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ಅನಿಲ ಬೆನಕೆ

ಲೋಕದರ್ಶನ ವರದಿ

ಬೆಳಗಾವಿ 02: ದಿ.02ರಂದು ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜಿಲ್ಲಾ ಆಡಳಿತ, ಕನರ್ಾಟಕ ರಾಜ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಬೆಳಗಾವಿ-1, ಪ್ರಾದೇಶಿಕ ಕಚೇರಿ ಚಿಕ್ಕೊಡಿ, ಕನರ್ಾಟಕ ರಾಜ್ಯ ವಿಜ್ಞಾಣ ಪರಿಷತ್ತು ಬೆಂಗಳೂರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಹಾಗೂ ಚಿಕ್ಕೊಡಿ ಮತ್ತು ಡಾ. ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರ, ಸ್ಟೆಪ್  ಗೋಕಾಕ ಹಾಗೂ ಪರಿಸರ ಮಿತ್ರ ಸಂಘ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರಧಾನವನ್ನು ಶಾಸಕ ಅನಿಲ ಬೆನಕೆರವರು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪರಿಸರ ಮಿತ್ರ ಶಾಲಾ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡಿದ ಶಾಸಕರು ಶಾಲೆಗಳಲ್ಲಿನ ಪರಿಸರವನ್ನು ಸ್ವಚ್ಚವಾಗಿಡುವುದು ಹಾಗೂ ಇಂತಹ ಕಾರ್ಯಗಳಿಗೆ ಅಭಿನಂದನೆಯನ್ನು ಸಲ್ಲಿಸಿ ಪ್ರಶಸ್ತಿ ವಿತರಣೆ ಮಾಡುವುದು ಸಂತೋಷದ ಸಂಗತಿಯಾಗಿದೆ ಹಾಗೂ ಮಕ್ಕಳಲ್ಲಿ ಸ್ವಚ್ಚತೆಯ ಜ್ಞಾನವನ್ನು ತುಂಬಿ ಪ್ರೋತ್ಸಾಹಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಶಾಲೆಯ ಆವರಣಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವುದು ಹಾಗೂ ಪರಿಸರವನ್ನು ಉಳಿಸಕೊಂಡು ಹೋಗುವುದು ಶಿಕ್ಷಕರ, ವಿದ್ಯಾಥರ್ಿಗಳ ಹಾಗೂ ಸಾರ್ವಜನಿಕರ ಮುಖ್ಯ ಕರ್ತವ್ಯವಾಗಿದೆ ಹಾಗೆಯೇ ಎಲ್ಲ ಶಾಲೆಗಳನ್ನು ಪರಿಸರ ಸ್ನೇಹಿ ಶಾಲೆಗಳನ್ನಾಗಿ ಮಾಡಲು ನಾವು ನಿವೆಲ್ಲರೂ ಕೈಜೊಡಿಸಿ ಶಾಲೆಗಳ ಅಭಿವೃಧ್ದಿಗಾಗಿ ಶ್ರಮಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ಪರಿಸರ ಮಿತ್ರ ಸಂಘದ ಸದಸ್ಯರುಗಳು, ಪ್ರಶಸ್ತಿಯನ್ನು ಪಡೆದ ಆಯಾ ಶಾಲೆಯ ಶಿಕ್ಷಕ ವೃಂದದವರು, ವಿದ್ಯಾಥರ್ಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.