ಭಗವಾನ ಮಹಾವೀರ ಜಯಂತಿ
ರಾಣಿಬೆನ್ನೂರ 15: ತಾಲೂಕಿನ ಕೋಡಿಯಾಲ ಗ್ರಾಮದ ಅಮೃತ ವರ್ಷಿಣಿ ವಿದ್ಯಾಲಯದಲ್ಲಿ ಗುರುವಾರ ಭಗವಾನ ಮಹಾವೀರ ಜಯಂತಿಯನ್ನು ಆಚರಿಸಲಾಯಿತು.
ವಿದ್ಯಾಲಯದ ಸಂಸ್ಥಾಪಕರಾದ ಪಿ.ಕೆ. ಪ್ರಕಾಶ್ ರಾವ್ ಅವರು ಭಗವಾನ್ ಮಹಾವೀರರ ಭಾವ ಚಿತ್ತಕ್ಕೆ ಪೂಜೆ ಸಲಿಸಿದರು. ಈ ವೇಳೆ ಅವರು ಮಾತನಾಡಿ, ಭಾರತದಲ್ಲಿ ಮಹಾವೀರ ಜಯಂತಿಗೆ ವಿಶೇಷವಾದ ಸ್ಥಾನವಿದೆ. ಸತ್ಯ, ಶಾಂತಿ ಹಾಗೂ ತಮ್ಮ ಸರಳ ಜೀವನದಿಂದ ಜಗತ್ತಿಗೆ ಮಾದರಿಯಾದಂತಹ ಮಹಾವೀರನು ಜೈನ ಧರ್ಮದ 24ನೇ ತೀರ್ಥಂಕರರಾಗಿ ವಿಶ್ವಕ್ಕೆ ಅಹಿಂಸೆಯ ಸಂದೇಶವನ್ನು ನೀಡಿದ್ದರು. ಇಂತಹ ಮಹಾನ್ ಚೇತನದ ಜನ್ಮ ದಿನಾಚರಣೆಯನ್ನು ಏಪ್ರಿಲ್ 10 ರಂದು ಆಚರಿಸಲಾಗುತ್ತಿದೆ ಎಂದರು
ಭಗವಾನ್ ಮಹಾವೀರರ ಪಂಚಶೀಲ ತತ್ವಗಳಾದ ಅಹಿಂಸೆ, ಸತ್ಯ, ಅಸ್ತೇಯ ಬ್ರಹ್ಮಚಾರ್ಯ ಹಾಗೂ ಅಪರಿಗ್ರಹಗಳ ಬಗ್ಗೆ ಸವಿಸ್ಥಾರವಾಗಿ ವಿವರಿಸಿದವರು.. ಸಾಮಾನ್ಯ ಜೀವನವನ್ನು ತೊರೆದು ಆಧ್ಯಾತ್ಮಿಕತೆಯ ಮಾರ್ಗವನ್ನು ಅಳವಡಿಸಿಕೊಂಡು, ತಮ್ಮ ಜೀವನದುದ್ದಕ್ಕೂ ಮನುಕುಲವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಾರ್ಗವನ್ನು ತೋರಿದರು. ನಾವು ಸಹ ಅವರ ತತ್ವಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರು ಮತ್ತು ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.
ಫೋಟೊ15ಆರ್ಎನ್ಆರ್02ರಾಣಿಬೆನ್ನೂರ: ತಾಲೂಕಿನ ಕೋಡಿಯಾಲ ಗ್ರಾಮದ ಅಮೃತ ವರ್ಷಿಣಿ ವಿದ್ಯಾಲಯದಲ್ಲಿ ಭಗವಾನ ಮಹಾವೀರ ಜಯಂತಿಯನ್ನು ಆಚರಿಸಲಾಯಿತು.