“ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ”
ರಾಣೇಬೆನ್ನೂರ 15: ನಗರದ ಚೋಳಮರಡೇಶ್ವರ ನಗರದಲ್ಲಿರುವ ಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಭಾರತ ರತ್ನ ಸಂವಿಧಾನ ಶಿಲ್ಪಿ ಡಾ;ಬಿ.ಆರ್.ಅಂಬೇಡ್ಕರ್‌ರವರ 134 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು ಈ ಸಮಯದಲ್ಲಿ ಮುಖ್ಯೋಪಾಧ್ಯಯರಾದ ಚನ್ನಬಸಪ್ಪ ಗುರುಗಳು ಮಾತನಾಡಿ ಡಾ;ಅಂಬೇಡ್ಕರರು ಅನ್ಯಾಯ,ಅಸ್ಪೃಶ್ಯತೆ,ಶೋಷಣೆ ಮೊದಲಾದ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದ ಮಹಾನ್ ಪುರಷ, ಪ್ರಜಾಪ್ರಭುತ್ವದ ಪಿತಾಮಹ ಮಹಾನ್ ಸಮಾಜ ಸುಧಾರಕರೆಂದರು.ಮನುಷ್ಯ ಚಿರಂಗೀವಿ ಆಗಲಾರ ಆದರೆ ಅವನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ಕರೆಕೊಟ್ಟರು.ಈ ಸಮಯದಲ್ಲಿ ಶಾಲಾ ಸದಸ್ಯರಾದ ಲತಾ ಸಿ.ಎಸ್, ಸಿಬ್ಬಂದಿಗಳಾದ, ನಾಗರಾಜ್ ಎಮ್,ಪುಷ್ಪ ಉಜ್ಜೇರ್, ಆಶಾ ಬಿ.ಎ,ಗೀತಾ ಕಮ್ಮಾರ, ಪ್ರವೀಣಗೌಡ ಪಾಟೀಲ್, , ಮಮತ ಕೆ.ಎಮ್, , ಚೈತ್ರ ಸಿ.ಪಿ, ದೀಪಾ ಕೆ, ಅನೀತಾ ಪಿ.ಎಮ್ , ಐಶ್ವರ್ಯ ಕೆ, ಶಹರಬಾನು, ಉಪಸ್ಥಿತರಿದ್ದರು