14 ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಿಕೆ,ಇಂದು 11 ಹೊಸ ಪ್ರಕರಣ ಪತ್ತೆ : ಸಚಿವ ಸುರೇಶ್ ಕುಮಾರ್

ಬೆಂಗಳೂರು,ಏ 28, ಇದುವರೆಗೆ ರಾಜ್ಯದಲ್ಲಿ ಒಟ್ಟಾರೆ 523 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇಂದು ಸಂಜೆ 5 ರ ಮಾಹಿತಿಯಂತೆ ಒಟ್ಟಾರೆ 20 ಜನ ಸಾವನ್ನಪ್ಪಿದ್ದು, 207 ಜನ ಗುಣಮುಖರಾಗಿ ಹಿಂತಿರುಗಿದ್ದಾರೆಂದು‌ ಸಚಿವರು ವಿವರಿಸಿದರು. ಉಳಿದ ಪ್ರಕರಣಗಳಲ್ಲಿ 288 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆಯೆಂಬ ಮಾಹಿತಿ ನೀಡಿದ ಸಚಿವರು 07 ಜನರನ್ನು ತೀವ್ರ ನಿಗಾ ಘಟಕ ಗಳಲ್ಲಿರಿಸಲಾಗಿದೆ ಎಂದು ತಿಳಿಸಿದರು.
ನಿನ್ನೆಯ ಸಂಜೆ 5ಕ್ಕೆ ಹೋಲಿಸಿದಲ್ಲಿ ಇಂದು ಒಟ್ಟಾರೆ‌ 11 ಹೊಸ ಪ್ರಕರಣಗಳು ಸೇರ್ಪಡೆಯಾಗಿರುವ ಬಗ್ಗೆ ಸಚಿವರು ಮಾಹಿತಿ‌ ನೀಡಿದರು. ಈ ಪ್ರಕರಣಗಳಲ್ಲಿ, ಬೆಂಗಳೂರಿನಿಂದ 1. ಕಲಬುರಗಿ-6, ಬಾಗಲಕೋಟೆಯಿಂದ 3 ಪ್ರಕರಣಗಳು ವರದಿಯಾಗಿವೆ‌ ಎಂದು ಸಚಿವರು ವಿವರಿಸಿದರು.ಜಿಲ್ಲಾಡಳಿತಗಳು‌ ಪ್ರಕರಣಗಳ‌ ಬಗ್ಗೆ ತೀವ್ರ ನಿಗಾ ವಹಿಸಿ ನಿಯಂತ್ರಣಾ ಕ್ರಮಗಳನ್ನು ಅನುಸರಿಸುತ್ತಿವೆ ಎಂದರು.
ರಾಜ್ಯಾದ್ಯಂತ ಒಟ್ಟು 23943 ವ್ಯಕ್ತಿಗಳನ್ನು ನಿಗಾವಣೆಯಲ್ಲಿಡಲಾಗಿದೆ ಯೆಂದು ಅವರು ಹೇಳಿದರು. ಒಟ್ಟಾರೆ ರಾಜ್ಯದಲ್ಲಿ ಪರೀಕ್ಷಿಸಲಾಗಿ ರುವ 50512 ಮಾದರಿಗಳ ಪೈಕಿ 523 ಮಾದರಿಗಳು ಖಚಿತಗೊಂಡಿ್ದವೆ ಎಂದು ಸಚಿವರು ಹೇಳಿದರು. ಇಂದು 4827 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆಯೆಂದರು. ಆಶಾ ಕಾರ್ಯಕರ್ತೆಯರಿಗೆ ಪ್ರತಿ ಮಾಹೆ 1000 ರೂಗಳ‌ ಹೆಚ್ಚುವರಿ ಗೌರವ ಧನ: ಕೇಂದ್ರ ಸರ್ಕಾರದ‌ ಆದೇಶದಂತೆ ಕೋವಿಡ್ ಕೆಲಸ ದಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರಿಗೆ 1.1.20 ರಿಂದ 20.6.20 ರವರೆಗೆ 1000 ರೂಪಾಯಿಗಳ ಹೆಚ್ಚುವರಿ ಗೌರವ ಧನ‌‌ ಪಾವತಿ ಮಾಡಲಾಗುತ್ತದೆಂದು ಸಚಿವರು ಹೇಳಿದರು.ಹಲವು ಜಿಲ್ಲೆಗಳಲ್ಲಿ ಮೇ 3 ನೇ ತಾರೀಕಿನವರೆಗೆ ಲಾಕ್ ಡೌನ್‌ ಸಡಿಲಿಕೆ: ಲಭ್ಯವಿರುವ ಪರಿಸ್ಥಿತಿಯ ಆಧಾರದಲ್ಲಿ 14 ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಿಸಿ ಸರ್ಕಾರವು ಆದೇಶ ಹೊರಡಿಸಿದೆಯೆಂದ ಸಚಿವರು ಕೆಂಪು ವಲಯಕ್ಕೆ ಸೇರಿದ‌ ಬೆಂಗಳೂರೂ ಸೇರಿದಂತೆ 8 ಜಿಲ್ಲೆಗಳಲ್ಲಿ ಲಾಕ್ ಡೌನ್ ಯಥಾಸ್ಥಿತಿ ಮುಂದುವರೆಯುತ್ತದೆ ಎಂದರು. ಕೇಂದ್ರ ಸರ್ಕಾರ ಕೋವಿಡ್ ಲಕ್ಷಣ ಪೂರ್ವ ವ್ಯಕ್ತಿಗಳನ್ನು‌ ಕ್ವಾರೆಂಟೈನ್ ಮಾಡುವಲ್ಲಿ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ವಿವರಿಸಿದರು. ಅಲ್ಲದೇ ಕರ್ನಾಟಕ‌ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್ ಸ್ಥಿತಿಯಲ್ಲಿ ಲಾಕ್ ಡೌನ್ ಇರುವುದರ ಹಿನ್ನೆಲೆಯಲ್ಲಿ ಗರ್ಭಿಣೆಯರಿಗೆ ವೈದ್ಯಕೀಯ ಸೇವೆಗಳನ್ನ ಒದಗಿಸುವಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂಬ ಮಾಹಿತಿ ನೀಡಿದರು.