ಬೆಂಗಳೂರು, ಏ.24,ದೇಶಾದ್ಯಂತ ಲಾಕ್ ಡೌನ್ ಹೇರಿರುವ ಹಿನ್ನೆಲೆಯಲ್ಲಿ ಆಟೋಮೊಬೈಲ್ ಕ್ಷೇತ್ರ ಸೇರಿದಂತೆ ಎಲ್ಲಾ ವ್ಯಾಪಾರ ವಹಿವಾಟಿಗಳು ಆನ್ ಲೈನ್ ವಿಡಿಯೋ ಕಾನ್ಫರೆನ್ಸ್ ಬಳಸಿ ಮೀಟಿಂಗ್ ನಡೆಸುತ್ತಿದ್ದಾರೆ. ಅದರಲ್ಲೂ ಆನ್‌ಲೈನ್ ಮೂಲಕ ವಾಹನಗಳ ವ್ಯಾಪಾರ ನಡೆಸುವ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಆನ್‌ಲೈನ್ ಬಳಸಿ ತಮ್ಮ ಡೀಲರ್ಸ್ ಗಳ ಜೊತೆ ನಿರಂತರ ಸಂಪರ್ಕ ಸಾಧಿಸುತ್ತಿದ್ದಾರೆ.ಆನ್‌ಲೈನ್ ವಾಹನ ವಹಿವಾಟಿಗೆ ಹೆಸರಾದ ಡ್ರೂಮ್ ಸಂಸ್ಥೆಯು ವಿಡಿಯೋ ಕಾನ್ಫರೆನ್ಸ್ ಮೂಲಕ ಡೀಲರ್ಸ್ ಗಳ ಜೊತೆ ಮೀಟಿಂಗ್ ಹಮ್ಮಿಕೊಂಡಿತ್ತು. ಇದರಲ್ಲಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳ ಸುಮಾರು 40 ಕ್ಕೂ ಹೆಚ್ಚಿನ ಡೀಲರ್ಸ್ ಗಳು ಭಾಗವಹಿಸಿದ್ದರು. ಇದೇ ರೀತಿ ಪ್ರತಿಯೊಂದು ಸಂಸ್ಥೆಗಳು ತಮ್ಮ ತಿಂಗಳ ಮೀಟಿಂಗ್ ನಡೆಸಲು ಆನ್‌ಲೈನ್ ವಿಡಿಯೋ ಕಾನ್ಫರೆನ್ಸ್ ಮೊರೆ ಹೋಗುತ್ತಿದ್ದಾರೆ. "ಡ್ರೂಮ್ ಮಾರಾಟಗಾರರಿಗೆ ಸಂಪೂರ್ಣವಾಗಿ ಬದ್ಧವಾಗಿದೆ ಮತ್ತು ನಿಮಗೆ ಉತ್ತಮವಾಗಿ ಸೇವೆ ಸಲ್ಲಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ನಾವು ನಿಮಗಾಗಿ ಕೆಲವು ವಿಶಿಷ್ಟ ಕೊಡುಗೆಗಳು ಮತ್ತು ಸಲಹೆಗಳೊಂದಿಗೆ ಬರುತ್ತಿದ್ದೇವೆ ಮತ್ತು ನಿಮ್ಮ ಒಳಹರಿವು ಅಗತ್ಯವಿರುತ್ತದೆ. ನಿಮ್ಮ ಆಲೋಚನೆಗಳು ಅಥವಾ ಸಲಹೆಗಳನ್ನು ಹಂಚಿಕೊಳ್ಳಲು ಈ ವೇದಿಕೆಯನ್ನು ಬಳಸಿ ಇದು ನಮಗೆ ಬಹಳ ಮುಖ್ಯವಾಗಿದೆ. ಒಟ್ಟಾಗಿ ನಾವು ಇದನ್ನು ಸಹ ಜಯಿಸುತ್ತೇವೆ” ಡ್ರೂಮ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಸಂದೀಪ್ ಅಗರ್‌ವಾಲ್ ಹೇಳಿದರು.