ಲೋಕದರ್ಶನ ವರದಿ
ಬಳ್ಳಾರಿ 16: ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲರೂ ಕನ್ನಡದ ಬಗ್ಗೆ ಅಬಿಮಾನವನ್ನು ಹೊಂದಿದ್ದು, ಎಲ್ಲರೂ ಕನ್ನಡ ತೇರನ್ನು ಎಳೆಯಲು ಮುಂದೆಬರಬೇಕು. ಬಂಡಿಹಟ್ಟಿ ಪ್ರದೇಶದಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯಾಸಕ್ತರು ಹೆಚ್ಚಾಗಿದ್ದಾರೆ. ಎಲ್ಲರಿಗೂ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ತಿಳಿಸಿದರು.
ಅವರು ಸ್ಥಳೀಯ ಕೌಲ್ಬಜಾರ್ ಪ್ರದೇಶದ ಬಂಡಿಹಟ್ಟಿ ಗ್ರಾಮದ ಶ್ರೀರಾಮಲಾದೇವಿ ದೇವಸ್ಥಾನದ ಹತ್ತಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಸಾಪ ಬಂಡಿಹಟ್ಟಿ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಂಡಿಹಟ್ಟಿಯಲ್ಲಿ ಬಯಲಾಟ ಕಲೆ ಪ್ರಸಿದ್ಧವಾಗಿದೆ. ಇಲ್ಲಿ ಹೆಸರಾಂತ ಕಲಾವಿದರಿದ್ದಾರೆ. ಅವರೆಲ್ಲರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಇಲ್ಲಿ ಕೋಲಾಟ, ಸೋಬಾನೆ ಪದಗಳ ಗಾಯಕರು, ಜನಪದ ಗಾಯಕರು, ಭಜನ ಪದ ಗಾಯಕರು, ಡೊಳ್ಳು ಕುಣಿತ, ನಾಟಕಕಾರರು, ಸಾಹಿತಿಗಳು, ಕಲಾವಿದರಿಗೆ ವೇದಿಕೆಗಳನ್ನು ಒದಗಿಸಿ ಅವರ ಕಲಾಪ್ರತಿಭೆಗೆ ಮನ್ನಣೆ ನೀಡಲಾಗುತ್ತದೆ ಎಂದು ಹೇಳಿದರು.
ನವಕನರ್ಾಟಕ ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ ಅವರು ಮಾತನಾಡಿ ಬಳ್ಳಾರಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಫೆ.1 ಮತ್ತು 2ರಂದು ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸರಳಾದೇವಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಕೆ.ಬಸಪ್ಪ ಅವರು ಮಾತನಾಡಿ ಬಂಡಿಹಟ್ಟಿ ಪ್ರದೇಶದ ಹಿರಿಯ ತಲೆಮಾರಿನವರಾದ ಸಾಂಬಪ್ಪ, ರಾಮಚಂದ್ರಪ್ಪ, ಹೊಳೆಪ್ಪನವರ ಮಲ್ಲೇಶಪ್ಪ, ಹೊನ್ನಾಳಪ್ಪ, ಪರಶಪ್ಪ ಮುಂತಾದವರು ಕನರ್ಾಟಕ ಏಕೀಕರಣದ ಸಂದರ್ಭದಲ್ಲಿ ಕನ್ನಡದ ಪರವಾಗಿ ಚುನಾವಣೆಗೆ ಸ್ಪರ್ಧೆಸಿದ್ದ ಹರಗಿನಡೋಣಿ ಸಣ್ಣ ಬಸವನಗೌಡರಿಗೆ ಬೆಂಬಲಿಸಿದ್ದರು. ಬಂಡಿಹಟ್ಟಿ ಕಸಾಪ ಘಟಕವನ್ನು ಅಸ್ತಿತ್ವಕ್ಕೆ ತಂದಿರುವುದು ಅಭಿನಂದನೀಯ ಎಂದು ಹೇಳಿದರು.
ಸಂತಜಾನ್ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಆರ್.ಲೋಹಿತ್ಕುಮಾರ್ ಅವರು ಮಾತನಾಡಿ ಬಂಡಿಹಟ್ಟಿಯು ಐತಿಹಾಸಿಕವಾಗಿ ಮಹತ್ವವನ್ನು ಪಡೆದ ಸ್ಥಳ. ಇಲ್ಲಿ ಹಂಡೆ ಪಾಳೆಯಗಾರರಿಗೆ ಸಂಬಂಧಿಸಿದ ಅವ್ವಮ್ಮನ ಸಮಾಧಿ ಇದೆ. ಸುತ್ತಮುತ್ತಲು ಬ್ರಿಟಿಷ್ ಸೈನಿಕರು ನಡೆದಾಡಿದ ಸ್ಥಳಗಳಿವೆ. ಹಾಗಾಗಿ ಇಂತಹ ಸ್ಥಳದಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಬಳ್ಳಾರಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸುಂಕಪ್ಪ ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ ಒಂದು ಶತಮಾನ ಕಳೆದಿದೆ. ಕನರ್ಾಟಕ ಏಕೀಕರಣದಿಂದ ಕನ್ನಡಿಗರೆಲ್ಲಾ ಒಟ್ಟಾಗಿ ಸೇರಿದ್ದೇವೆ. ಆದರೆ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ. ಅವರ ಕಲೆಗೆ ಪ್ರೋತ್ಸಾಹ ಅಗತ್ಯ ಎಂದು ಹೇಳಿದರು.
ವೇದಿಕೆಯ ಮೇಲೆ ಬಂಡಿಹಟ್ಟಿ ಪ್ರದೇಶದ ಮುಖಂಡರಾದ ಗುಲ್ದಡ್ಡಿ ದೊಡ್ಡ ಈರಪ್ಪ, ನಿವೃತ್ತ ಎಎಸ್ಐ ಕೆ.ಪಾಂಡುರಂಗ, ತರ್ಲೆಸಿದ್ದಪ್ಪ , ಹಾರ್ಮೋನಿಯಂ ಮಾಸ್ತರ್ ಟಿ.ಕೆ.ಶಿವಶಂಕ್ರಪ್ಪ, ನಿವೃತ್ತ ನೌಕರರಾದ ಕಟ್ಲೇರು ದೊಡ್ಡ ಈರಣ್ಣ, ಭೀಮನಗೌಡ, ಶೇಠ್ ಹನುಮಂತಪ್ಪ, ಎನ್.ಎಂ.ಡಿ.ಸಿ. ನಿವೃತ್ತ ನೌಕರರಾದ ಕೆ.ರುದ್ರಣ್ಣ ಕೆ.ಟಿ.ತಿಮ್ಮಪ್ಪ, ದೊಡ್ಡಗಾಳೆಪ್ಪ, ಓಬಳಾಪುರ ನಿಂಗಪ್ಪ, ಕೊಂಡಿ ಮಲ್ಲಿಕಾಜರ್ುನ, ಬಿ.ಎಂ.ಬಸಪ್ಪ, ಯುವ ಮುಖಂಡ ಎ.ಡಿ.ಸೆಲಸ್ಟಿನ್ ಹಾಜರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಬಳ್ಳಾರಿಯ ಚಿಗುರು ಕಲಾತಂಡದ ಹುಲುಗಪ್ಪ ಇವರು ಜಾನಪದ ಗಾಯನ ಮಾಡಿದರು. ಬಳ್ಳಾರಿಯ ಶ್ರೀಲಕ್ಷ್ಮೀ ಕಲಾ ಟ್ರಸ್ಟ್ನ ಜಿಲಾನಿಬಾಷ ತಂಡದಿಂದ ಸಮೂಹ ನೃತ್ಯ ಪ್ರದರ್ಶನ ನೀಡಲಾಯಿತು. ಸತ್ಯಂ ಕಾಲೇಜಿನ ಉಪನ್ಯಾಸಕ ಆಲಂಬಾಷ ಅವರು ಕಾರ್ಯಕ್ರಮ ನಿರೂಪಿಸಿದರು. ಹೆಚ್.ಈಶ್ವರ ಪ್ರಾಥರ್ಿಸಿದರು. ಹನುಮಯ್ಯ ಮತ್ತು ತಂಡದಿಂದ ನಾಡಗೀತೆ ಪ್ರಸ್ತುತ ಪಡಿಸಲಾಯಿತು. ಕೆ.ಗೋಡ್ಲಪ್ಪ ಸ್ವಾಗತಿಸಿದರು.