ಸಾಹಿತ್ಯ ಪರಂಪರೆ ಮುಂದುವರೆಯಲಿ: ಸಾಹಿತಿ ಇಂಚಲ

ಬೆಳಗಾವಿ: ಬೆಳಗಾವಿ ತಿರುಳ್ಗನ್ನಡಿಗರ ನಾಡು ಕವಿ ಸಾಹಿತಿಗಳ ಇಲ್ಲಿನ ಈ ಸಾಹಿತ್ಯ ಪರಂಪರೆ ಮುಂದುವರೆಯಲಿ ಎಂದು ಹಿರಿಯ ಸಾಹಿತಿ ಎಮ್.ಎಸ್ ಇಂಚಲ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರದಂದು  ಹಿರಿಯ ಸಾಹಿತಿ ಜೆ.ಪಿ ವಿಜಯಕುಮಾರ (ಜೀರಗ್ಯಾಳ)ರವರ ``ನೆನಪಿನಂಗಳದಲ್ಲಿ ಕೆಳದು ಹೋಗುವ ಅಸ್ತಿತ್ವ' ಕವನ ಸಂಕಲನ ಉದ್ಘಾಟಿಸಿ ಅವರು ಮಾತನಾಡಿದರು.

ಕವನ ಸಂಕಲನ ಲೋಕಾರ್ಪಣೆಗೊಳಿಸಿ ರಾಜೇಂದ್ರ ಪ್ರಿಂಟಸ್ಸರ್್ ಮತ್ತು ಪಬ್ಲಿಷರ್ಸ್ ಮೈಸೂರು ಡಿ.ಎನ್ ಲೋಕಪ್ಪಾ ಮಾತನಾಡಿ,  ಕವನ ಸಂಕಲನ ಪ್ರಸ್ತುತ ಕಾಲದಲ್ಲಿ ಅಪರೂಪ ಹೀಗಿರುವಾಗ ಸಹ ಪ್ರಯತ್ನದಿಂದ ಕಾಳಜಿ ಪೂರಕವಾಗಿ ಈ ಕವನ ಗುಚ್ಛ ಮೂಡಿ ಬಂದಿದೆ ಇಂತಹುಗಳಿಗೆ ಪ್ರೇರಣೆ ನೀಡುವ ಕಾರ್ಯವಾಗಲಿ ಎಂದರು.

ಎಚ್ ಬಿ.ಕೋಲಕಾರ ಕವನ ಪರಿಚಯಿಸಿ, ಮಾತನಾಡಿ, ನಮ್ಮಲ್ಲಿ ಅಡಗಿದ ಅದಮ್ಯ ಶಕ್ತಿ ಬಳಿಸೋಣ ಯಾವುದು ಧರ್ಮ? ಏನಿದೆ  ವಾಸ್ತವಿಕತೆ? ನಮ್ಮ ಆಗು ಹೋಗುಗಳಿಗೆ ಕೊನೆಯಲ್ಲಿ  ದೇವರ ಬೆಲೆಯಲ್ಲಿದೆ ಆತ್ಮೀಯತೆ ಎಂಬುದನ್ನು ಹೊಂದಿರುವ ಕವನ ಸಂಕಲವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಎಸ್ ಎಸ್.ಅಂಗಡಿ ಮಾತನಾಡಿ, ಗೀತ ರೂಪದ ನಿವೇದನೆ ಚೆನ್ನಾಗಿ ಮೂಡಿ ಬಂದಿದೆ ಎಂದರು.

ಡಾ.ಬಸವರಾಜ ಜಗಜಂಪಿ ಮಾತನಾಡಿ, ಕೃತಿ ಭಾವಗೀತೆ ನೆನಪಿಂಗಳ ಕವನ ಸಂಕಲನದ ಇಡಿಯಾಗಿ ಯಾವ ರೀತಿ ತೆಗೆದುಕೊಳ್ಳಬೇಕು, ನಮ್ಮ ಜೀವನಕ್ಕೆ ಕವನ ಸಂಕಲನ ಎಷ್ಟು ಹತ್ತಿರವಾಗಿದೆ. ನಾವು ಇಂತಹ ಕೃತಿಗಳನ್ನು ನಮ್ಮತನದ ಬದಲಾವಣೆಯಲ್ಲಿ ಹೇಗೆ ಬಳಸುತ್ತೇವೆ ಎಂದರು.ಜೆ ಪಿ.ವಿಜಯಕುಮಾರ ಅನಿಸಿಕೆ ವ್ಯಕ್ತಪಡಿಸಿ, ನನ್ನ ಗಮನಕ್ಕೆ ಕೆಲವು ಘಟನೆಗಳೆ ಕಾವ್ಯ ರೂಪದಲ್ಲಿ ಬಂದಿವೆ, ಇವುಗಳನ್ನು ಸಹ ಎಲ್ಲರೂ ಆತ್ಮೀಯವಾಗಿ ಬರಮಾಡಿಕೊಳ್ಳಬೇಕಾಗಿದೆ ಎಂದು ವಿನಂತಿಸಿದರು.ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ. ಶ್ರೀ. ಮೆಟಗುಡ್ಡ ಕೃತಿಗೆ ಶುಭಹಾರೈಸಿದರು. ಎಲ್ ಎಸ್ ಶಾಸ್ತ್ರೀಯವರು ಇಂದು ಬರೆಯುವ ಅಸಂಖ್ಯಾತ ಕವಿಗಳಿಂದ ಭಿನ್ನವಾದ ರೀತಿಯಲ್ಲಿ ಇವರು ಬರೆಯುತ್ತಿರುವುದು ಗರ್ಮನಾಹ, ಕಾವ್ಯದ ಕಲ್ಪನೆ ಮತ್ತು ಪರಿಪಕ್ವ ಜೀವನಾನುಭಗಳು ಒಂದಾದಾಗ ಮಾತ್ರ ಇಂತಹ ಕಾವ್ಯ ರಚನೆ ಸಾಧ್ಯ ಎಂದರು.

ಬಸವರಾಜ ಸಸಾಲಟ್ಟಿಯ  ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರೀಷ್ಮಾ ವಿನೋದ ಪಾಟೀಲ ಪ್ರಾಥರ್ಿಸಿದರು. ರೇಖಾ ಅಂಗಡಿ ಸಂಗಡಿಗರು ನಾಡಗೀತೆ ಹೇಳಿದರು. ಆಶಾ ಯಮಕನಮರಡಿ ಗಾಯನ ಮಾಡಿದರು. ಎಮ್ ವಾಯ್ ಮೆಣಸಿನಕಾಯಿ ಸ್ವಾಗತಿಸಿದರು. ಪ್ರಕಾಶ ದೇಶಪಾಂಡೆ,  ಯ ರು ಪಾಟೀಲ, ಶಿವಾನಂದ ತಲ್ಲೂರ, ರಾಮಚಂದ್ರ ಡವಳೆ ಹಿರಿಯ ಸಾಹಿತಿಗಳು ಹಾಗೂ ಜೀರಗ್ಯಾಳ ಕಟುಂಬಸ್ಥರಿದ್ದರು ಹಾಗೂ ಇತರರು ಇದ್ದರು. ಹೇಮಾ ಸೊನೋಳಿ ನಿರೂಪಿಸಿದರು. ವೀರಭದ್ರ ಅಂಗಡಿ ವಂದಿಸಿದರು.