ಗದಗ 16: ಸ್ವಚ್ಛ ಭಾರತ ವಿಷನ್ ಯೋಜನೆಯಡಿ ಸ್ವಚ್ಛಮೇವ ಜಯತೆ ಕುರಿತು ಜಿಲ್ಲೆಯ 40 ಗ್ರಾಮ ಪಂಚಾಯತಿಗಳಲ್ಲಿ ಸಂಚರಿಸಿ ಸ್ವಚ್ಛತೆ ಮತ್ತು ಶೌಚಾಲಯ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಕಲಾಜಾಥಾ ವಾಹನಕ್ಕೆ ಜಿಲ್ಲಾ ಪಂಚಾಯತ ಪ್ರಭಾರಿ ಅಧ್ಯಕ್ಷರಾದ ಶಕುಂತಲಾ ಮೂಲಿಮನಿ ಅವರಿಂದು ಗದಗ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿದರು.
ವಾಹನವು ಗದಗ ಜಿಲ್ಲೆಯ ಆಯ್ದ 40 ಗ್ರಾಮಗಳಲ್ಲಿ ಸಂಚರಿಸಲಿದ್ದು ಬೀದಿ ನಾಟಕ ಕಲಾವಿದರ ತಂಡವು ಸಂಚಾರಿ ವಾಹನದಲ್ಲಿ ತೆರಳಿ ಹಸಿ ಕಸ, ಒಣ ಕಸ ವಿಂಗಡಣೆ, ಶೌಚಾಲಯದ ಬಳಕೆ, ವೈಯಕ್ತಿಕ ಶ್ಮಚಿತ್ವ ಇನ್ನಿತರ ವಿಷಯಗಳ ಕುರಿತು ಬೀದಿ ನಾಟಕ ಪ್ರದರ್ಶನಗಳ ಮೂಲಕ ಜಾಗೃತಿ ಮೂಡಿಸಲಿದೆ ಎಚಿದು ಜಿಲ್ಲಾ ಪಂಚಾಯತ ಅಧ್ಯಕ್ಷರು ನುಡಿದರು. ಜಿಲ್ಲಾ ಪಂಚಾಯತ ಸದಸ್ಯರುಗಳಾದ ಎಸ್.ಪಿ.ಬಳಿಗಾರ, ವಾಸಣ್ಣ ಕುರಡಗಿ, ರೂಪಾ ಅಂಗಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಕೆ. ಜಿ.ಪಂ. ಉಪಕಾರ್ಯದಶರ್ಿ ಪ್ರಾಣೇಶರಾವ, ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಮಾಲೋಚಕರು, ಜಿಲ್ಲಾ ಪಂಚಾಯತ ಅಧಿಕಾರಿಗಳು, ಸಿಬ್ಬಂದಿಗಳು ಈ ಸಚಿದರ್ಭದಲ್ಲಿ ಉಪಸ್ಥಿತರಿದ್ದರು. ಕೊಣ್ಣೂರಿನ ಜೈ ಕಿಸಾನ ಸಾಂಸ್ಕೃತಿಕ ಮತ್ತು ಜಾನಪದ ಕಲಾಸಂಘದ ಕಲಾವಿದರು ಬೀದಿ ನಾಟಕ ಕಾರ್ಯಕ್ರಮಗಳನ್ನು ಪ್ರಚುರಪಡಿಸುವರು.