ಲಕ್ಷ್ಮೇಶ್ವರ: ಬಣ್ಣದಲ್ಲಿ ಮಿಂದೆದ್ದು ಸಂಭ್ರಮಾಚರಣೆಯಲ್ಲಿ ತೊಡಗಿದ ಯುವಕರು

Lakshmeshwara: Youths dressed in colors and celebrating

ಲಕ್ಷ್ಮೇಶ್ವರ: ಬಣ್ಣದಲ್ಲಿ ಮಿಂದೆದ್ದು ಸಂಭ್ರಮಾಚರಣೆಯಲ್ಲಿ ತೊಡಗಿದ ಯುವಕರು

ಲಕ್ಷ್ಮೇಶ್ವರ 18: ಪರಸ್ಪರ ಬಣ್ಣ ಎರಚಿ ಕುಣಿದು ಕುಪ್ಪಳಿಸಿದ ಯುವಕರು ಸಾಂಪ್ರದಾಯಿಕ ಹಬ್ಬ ಜನರ ಉಲ್ಲಾಸ ಉತ್ಸಾಹವನ್ನ ಇಮ್ಮಡಿ ಮಾಡಿದ್ದು,ಸಂತಸಕ್ಕೆ ಪಾರವೇ ಇಲ್ಲವೆಂಬಂತೆ ಯುವಕರು ವಿವಿಧ ರೀತಿಯ ಬಣ್ಣದಲ್ಲಿ ಮಿಂದೆದ್ದು ಸಂಭ್ರಮಾಚರಣೆಯಲ್ಲಿ ತೊಡಗಿದ ದೃಶ್ಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶನಿವಾರ  ಕಂಡುಬಂದಿತು.ಈ ವೇಳೆ ಕಾಮರತಿ ಮೇರವಣಿಗೆಗೆ ಬಿಜೆಪಿ ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಚಾಲನೆ ನೀಡಿದರು.           

ಮೇರವಣಿಗೆಯು ಪಟ್ಟಣದ ಹಳ್ಳದಕೇರಿ ಇಂದ ಪ್ರಾರಂಭವಾಗಿ ಹಾವಳಿ ಹನುಮಂತ ದೇವಸ್ಥಾನ, ಬಜಾರ ಮುಖ್ಯ ರಸ್ತೆ ಮಾರ್ಗವಾಗಿ   ಸೋಮೇಶ್ವರ ಪಾದಗಟ್ಟಿ,ಸರಕಾರಿ ಆಸ್ಪತ್ರೆ,  ಸೇರಿದಂತೆ ನಗರದ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಮತ್ತೆ ಮೇರವಣಿಗೆ ಪ್ರಾರಂಭಿಸಿದ ಸ್ಥಳದಲ್ಲಿಯೇ ಅಂತ್ಯವಾಯಿತು. ಬಣ್ಣದ ಆಟ ಪ್ರಿಯರು ಪ್ರಮುಖ ಬೀದಿಗಳಲ್ಲಿ ರಂಗಪಂಚಮಿ ನಿಮಿತ್ಯ  5ನೇಯ ದಿನವಾದ ಇಂದು  ರಂಗಿನ ಆಟವನ್ನು ಬಹಳ ಅದ್ದೂರಿಯಲ್ಲಿ  ತೊಡಗಿದ್ದು ಕಂಡುಬಂದಿತು. ಬೆಳಿಗ್ಗೆಯಿಂದಲೇ ಯುವಕರು ಪರಸ್ಪರ ಬಣ್ಣ ಎರಚಿಕೊಂಡು ರಂಗಿನಾಟದಲ್ಲಿ ತೊಡಗಿದ್ದರು.        ಪಟ್ಟಣದ ಪ್ರಮುಖ ಸ್ಥಳಗಳಾದ ಹಾವಳಿ ಹನುಮಂತ ದೇವಸ್ಥಾನದ ಮುಂದೆ,ಗದಗ ನಾಕಾ,ಹಳ್ಳದಕ್ಕೆಕೇರಿ,ಬಸ್ತಿಬಣ, ಪಂಪ ವೃತ್ತ, ಸರಕಾರಿ ಆಸ್ಪತ್ರೆ ಸರ್ಕಲ್ ಗಳಲ್ಲಿ ಯುವಕರು ಬಣ್ಣ ಹಚ್ಚಿಕೊಂಡು ತಮಟೆ ಬಾರಿಸುತ್ತಾ  ಕುಣಿದು ಕುಪ್ಪಳಿಸಿ ರಂಗಪಂಚಮಿ ಹಬ್ಬವನ್ನು ಆಚರಣೆ ಮಾಡಿದರು.             ಚಾಲನೆ ನೀಡುವ ಸಂದರ್ಭದಲ್ಲಿ ಲಕ್ಷ್ಮೇಶ್ವರ ಬಿಜೆಪಿ ಮಂಡಳ ಪ್ರಧಾನ ಕಾರ್ಯದರ್ಶಿ ಅನಿಲ ಮುಳಗುಂದ, ಲಕ್ಷ್ಮೇಶ್ವರ ಪುರಸಭೆಯ ಮಾಜಿ ಅಧ್ಯಕ್ಷ ಎಂ ಆರ್ ಪಾಟೀಲ,ನಿಂಗಪ್ಪ ಬನ್ನಿ, ಶಿವು ಕಟಗಿ, ಪುರಸಭೆಯ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಶ್ರೀಮತಿ ಜಯಮ್ಮ ಅಂದಲಗಿ, ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿ ಎಸ್ ಐ ನಾಗರಾಜ ಗಡದ ಸೇರಿದಂತೆ ಹಳ್ಳದಕೇರಿ  ಸಮಸ್ತ ಗುರು-ಹಿರಿಯರು ಯುವಕರು ಭಾಗಿಯಾಗಿದ್ದರು.