ಕುರುಗೋಡು: ಶಿಥಿಲಾವಸ್ಥೆ ತಲುಪಿದ ತುಂಗಭದ್ರಾ ನೀರಾವರಿ ಇಲಾಖೆ

ಲೋಕದರ್ಶನ ವರದಿ

ಕುರುಗೋಡು 05: ಪಟ್ಟಣದ ಬಳ್ಳಾರಿ ಮುಖ್ಯ ರಸ್ತೆಯಲ್ಲಿರುವ ನೀರಾವರಿ ಇಲಾಖೆಯ ತುಂಗಭದ್ರಾ ಮೇಲ್ದಂಡೆ ನಂ.2 ಉಪ ಕಾಲುವೆ ವಿತರಣಾ ವಿಭಾಗದ ಕಚೇರಿ ಸುಮಾರು ವರ್ಷಗಳಿಂದ ನಾನಾ ಸೌಲಭ್ಯಗಳು ಕಾಣದೆ ಭೂತ ಬಂಗ್ಲೆಯಂತೆ ಗೋಚರಿಸುತ್ತಿವೆ. 

ಕಚೇರಿಗೆ ಬರುವ ರೈತರಿಗೆ ಶೌಚಾಲಯ, ಕುಡಿಯುವ ನೀರಿಲ್ಲದಂತಾಗಿದೆ. ಶಿಥಿಲಗೊಂಡ ಹಳೇ ಕಟ್ಟಡದಲ್ಲಿಯೇ ಕಚೇರಿ ನಡೆಸುತ್ತಿದ್ದು, ಮಳೆ ಬಂದರೆ ಮೇಲ್ಛಾವಣಿಯಿಂದ ನೀರು ಸೋರುತ್ತಿವೆ. ಕಡತಗಳ ರಕ್ಷಣೆ ಇಲ್ಲದಂತಾಗಿದೆ. ರೈತರಿಗೆ ಅನುಕೂಲವಾಗುವ ರೈತ ಭವನದ ಕಟ್ಟಡ ಶಿಥಿಲಗೊಂಡು ನಿರುಪಯುಕ್ತವಾಗಿದೆ. 

ಶಿಥಿಲಗೊಂಡಿರುವ ವಸತಿ ಗೃಹಗಳಲ್ಲೇ ಸಿಬ್ಬಂದಿಗಳ ವಾಸವಾಗಿದೆ. ದುರಸ್ತಿ ಮಾಡಿಸಲು ಮೇಲಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈ ವಿಭಾಗದ ಆರ್ಬಿಎಚ್ಎಲ್ಸಿ ವ್ಯಾಪ್ತಿಗೆ ಡಿ7, ಡಿ8, ಡಿ9, ಡಿ10, ಡಿ11 ಉಪ ಕಾಲುವೆಗಳಿಗೆ 46 ಹಳ್ಳಿಗಳಲ್ಲಿ ಒಟ್ಟು 53,000 ಎಕರೆ ಇದ್ದು. ಎಲ್.ಎಲ್.ಸಿ ವ್ಯಾಪ್ತಿಗೆ ನಡವಿ ವಿತರಣಾ ಹಾಗೂ ಮುದ್ದಟನೂರು ಉಪ ಕಾಲುವೆಗಳಿಗೆ 10 ಸಾವಿರ ಎಕರೆ ಜಮೀನಿನ ರೈತರು ಬೆಳೆ ಬೆಳೆಯುತ್ತಿದ್ದಾರೆ. 

ಕಟ್ಟಡ ಶಿಥಿಲ: 

ಟಿ.ಬಿ. ಬೋಡರ್್ನ 7 ಎಕರೆ ಪ್ರದೇಶದಲ್ಲಿ 1965ರಲ್ಲಿ ನೀರಾವರಿ ಇಲಾಖೆಯ 1 ಕಟ್ಟಡ ಕಚೇರಿ, 1 ರೈತ ಭವನ ಹಾಗೂ 13 ವಸತಿ ಗೃಹಗಳು ನಿರ್ಮಾಣಗೊಂಡಿದ್ದವು. ನೀರಾವರಿ ಇಲಾಖೆಯ ಮೇಲ್ದಂಡೆ ಉಪ ಕಾಲುವೆಯ ಕಚೇರಿಯ ಕಟ್ಟಡ ಶಿಥಿಲಗೊಂಡು ಮಳೆ ಬಂದರೆ ಸೋರುತ್ತಿದೆ ಎಂದು ಖಾಲಿಯಿರುವ ರೈತ ಭವನದಲ್ಲಿ 2013ರಲ್ಲಿ ವಗರ್ಾವಣೆ ಮಾಡಿ ಕಚೇರಿ ನಡೆಸಿದರು. 

ಮಳೆ ಬಂದರೆ ರಾತ್ರಿಯಿಡೀ ಜಾಗರಣೆಯೇ ಗತಿಯಾಗಿದೆ. ಸೌಲಭ್ಯ ಕೊರತೆ: ಕಚೇರಿಗೆ ಬರುವ ರೈತರಿಗೆ ಶೌಚಾಲಯ, ಕುಡಿಯುವ ನೀರು ಹಾಗೂ ಚರ್ಚಿಸಲು ಸ್ಥಳವಿಲ್ಲದೆ ಅತಂತ್ರ ಸ್ಥಿತಿಯಲ್ಲಿ ರೈತರು ಕಾಲ ಕಳೆಯುವ ಸ್ಥಿತಿ ಒದಗಿದೆ. ಕಚೇರಿಯಲ್ಲಿ ಕಡತಗಳ ಸಂರಕ್ಷಣೆಗೆ ಸುರಕ್ಷಿತವಾದ ಕೊಠಡಿ ಇಲ್ಲ, ಸಿಬ್ಬಂದಿಗೆ ಚೇರ್ ಮತ್ತು ಟೇಬಲ್ಗಳು ಇಲ್ಲ ಹಾಗೂ ಕಂಪ್ಯೂಟರ್ ವ್ಯವಸ್ಥೆ ಇಲ್ಲ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.