ಬೆಂಗಳೂರು,
ಏ.19, ಕೊರೊನಾ ಸೋಂಕು ನಿಯಂತ್ರಿಸಲು ಲಾಕ್ ಡೌನ್ ನಲ್ಲಿ ಕರ್ತವ್ಯ
ನಿರ್ವಹಿಸುವುದಲ್ಲದೇ, ಕೋವಿಡ್-19 ವೈರಸ್ ವಿರುದ್ಧ ವಿನೂತನ ಜಾಗೃತಿಗೂ ಪೊಲೀಸರು
ಮುಂದಾಗಿದ್ದಾರೆ. ಇದೀಗ ನಗರದ ಹೆಬ್ಬಾಳ ಸಂಚಾರ ಪೋಲಿಸ್ ಮುಖ್ಯ ಪೇದೆ ನಂದೀಶ್ ಅವರು
ವಿನೂತನವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.ಹವ್ಯಾಸಿ ಜಾದೂಗಾರ
ಆಗಿರುವ ನಂದೀಶ ಅವರು ಜಾದೂವನ್ನು ಕೇಂದ್ರಿಸಿಕೊಂಡು ಕೊರೊನಾ ಕುರಿತು ಜಾಗೃತಿ ಮೂಡಿಸಲು
ಕೈಜೋಡಿಸಿದ್ದಾರೆ. ಕೊರೊನಾ ಕೋವಿಡ್ -19 ವೈರಸ್ ಹರಡುವ ರೀತಿ ಮಾಸ್ಕ್,
ಸ್ಯಾನೈಟೈಜರ್ ಬಳಸುವ ರೀತಿಯಿಂದ ಹಿಡಿದು ನಂತರ ವಿಲೇವಾರಿ ಕ್ರಮದ ಕುರಿತು ಜಾದೂವಿನ
ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.ಸೋಂಕು ಹರಡದಂತೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳ
ಕುರಿತು ಜಾದು ಮೂಲಕ ಅರಿವು ಮೂಡಿಸುವ ಅವರ ಪ್ರಯತ್ನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ
ವೈರಲ್ ಆಗಿದೆ. ಮುಖ್ಯ ಪೇದೆ ನಂದೀಶ್ ಅವರು ಜಾದೂವಿನ ಮೂಲಕ ಜಾಗೃತಿ ಮೂಡಿಸುವ
ಪ್ರಯತ್ನಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿ ಸಾರ್ವಜನಿಕರಿಂದ ಭಾರಿ ಪ್ರಶಂಸೆಗೆ
ಪಾತ್ರವಾಗಿದೆ.