ಕೋವಿಡ್ -19: ತೆಲಂಗಾಣದ ಏಳು ಜನರಿಗೆ ಬೈಂದೂರಿನಲ್ಲಿ ಕ್ವಾರಂಟೈನ್‍

ಬೈಂದೂರು, ಉಡುಪಿ, ಏಪ್ರಿಲ್ 23,ತೆಲಂಗಾಣದಿಂದ ಕಾರಿನಲ್ಲಿ ಬಂದಿದ್ದ ಒಟ್ಟು ಏಳು ಮಂದಿಯನ್ನು ಕೊಲ್ಲೂರು ಸಂಪರ್ಕತಡೆಗೆ ಒಳಪಡಿಸಿದ್ದು, ಅವರ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.ಇವರೆಲ್ಲ ತೆಲಂಗಾಣದಲ್ಲಿ ವ್ಯಾಪಾರ ನಡೆಸುತ್ತಿರುವ ಅಲ್ತೂರ್ ಮೂಲದ ವ್ಯಕ್ತಿಯ ಸಂಬಂಧಿಕರು ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಾಪಾರಿ ತಂದೆಯ ಅಂತಿಮ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳಲು ತೆಲಂಗಾಣದಿಂದ ಇವರು ಬಂದಿದ್ದರು ಎನ್ನಲಾಗಿದೆ.ಎಲ್ಲಾ ಏಳು ಮಂದಿಯನ್ನು ಮೇ 18 ರವರೆಗೆ ಚಿತ್ತೂರು ಬಳಿಯ ಮನೆಯೊಂದರಲ್ಲಿ ಕ್ಯಾರೆಂಟೈನ್‌(ಸಂಪರ್ಕತಡೆ)ಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾಕ್‍ಡೌನ್ ನಿಯಮಗಳು ಜಾರಿಯಲ್ಲಿರುವಾಗ ಅದೂ ಅಂತರ ರಾಜ್ಯ ವಾಹನ ಸಂಚಾರಕ್ಕೆ ನಿರ್ಬಂಧ ಇರುವಾಗ ನೂರಾರು ಕಿ.ಮೀ ದೂರದ ತೆಲಂಗಾಣದಿಂದ ಹೇಗೆ ಬಂದರು ಎಂಬ ‍ಪ್ರಶ್ನೆಯೂ ಎದುರಾಗಿದೆ.