ಕೋವಿಡ್-19: ರಾಜ್ಯದ ಹೊರಗಿನ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭ

ಬೆಂಗಳೂರು, ಏ 28, ಕರ್ನಾಟಕದ ಹೊರಗೆ ನೆಲಸಿರುವ ಕನ್ನಡಿಗರ ನೆರವಿಗಾಗಿ ಆರಂಭಿಸಿರುವ ಸಹಾಯವಾಣಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಚಾಲನೆ ನೀಡಿದರು.
ಮುಂಬೈ ಸೇರಿದಂತೆ ಇತರ ರಾಜ್ಯಗಳು ಮತ್ತು ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗಾಗಿ ಸಹಾಯವಾಣಿ ಆರಂಭಿಸುವಂತೆ ಮುಖ್ಯಮಂತ್ರಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಏ. 24ರಂದು ಪತ್ರ ಬರೆದಿದ್ದರು. ಈ ಸಹಾಯವಾಣಿ ದೇಶಾದ್ಯಂತ ಸಿಲುಕಿರುವ ಕನ್ನಡಿಗರ ನೆರವಿಗೆ ಆಗಮಿಸಲಿದೆ. ಸಂಬಂಧಿಸಿದ ವ್ಯಕ್ತಿಗಳ ಕ್ಷೇತ್ರದ ಜನಪ್ರತಿನಿಧಿಗಳಿಗೆ ಅವರ ಸಮಸ್ಯೆಗಳನ್ನು ತಲುಪಿಸಲಾಗುವುದು. ಈ ಸಹಾಯವಾಣಿ ಬೆಂಗಳೂರಿಂದ ನಿರ್ವಹಿಸಲಾಗಲಾಗುವುದು ಮತ್ತು ಇದರಲ್ಲಿ ಮೂರು ಪಾಳಿಯಲ್ಲಿ 50 ಉದ್ಯೋಗಿಗಳು ಕಾರ್ಯನಿರ್ವಹಿಸಲಿದ್ದಾರೆ.ಸಹಾಯವಾಣಿ ಸಂಖ್ಯೆ-080-22636800.