ಕೊಟ್ಟೂರು: ಸಿಕ್ಕವು ಭಕ್ತರು ಬರೆದ ಚೀಟಿಗಳು: ಕಳೆದ ಆರು ತಿಂಗಳಲ್ಲಿ 39 ಲಕ್ಷ ರೂ. ಸಂಗ್ರಹ

ಲೋಕದರ್ಶನ ವರದಿ

ಕೊಟ್ಟೂರು 20: ಪಟ್ಟಣದ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ಗುರುವಾರ ಹಣ ಎಣಿಕೆ ನಡೆಯಿತು. ಹುಂಡಿಯಲ್ಲಿ ಹಣದೊಂದಿಗೆ ಕಷ್ಟಗಳನ್ನು ದೂರು ಮಾಡುವುದು ಹಾಗೂ ನೌಕರಿ, ಆರೋಗ್ಯ ಕಾಪಾಡುವಂತೆ ಭಕ್ತರು ಬರೆದ ಚೀಟಿಗಳೂ ದೊರೆತಿವೆ. 

ದೇವಸ್ಥಾನ ಪ್ರಧಾನ ಧರ್ಮಕರ್ತ ಗಂಗಾಧರಯ್ಯ, ತಹಸೀಲ್ದಾರ್ ಅನಿಲ್ ಕುಮಾರ್ ಹಾಗೂ ಕಟ್ಟಿಮನಿ ದೈವದವರ ಸಮ್ಮುಖದಲ್ಲಿ ನಡೆದ ಹುಂಡಿ ಎಣಿಕೆ ನಡೆದಿದ್ದು, 39,29,704 ರೂ. ಸಂಗ್ರಹವಾಗಿದೆ. ಕಳೆದ ಆರು ತಿಂಗಳಿನ ಕಾಣಿಕೆ ಇದಾಗಿದ್ದು, ರಥೋತ್ಸವದ ನಂತರ ಹುಂಡಿಯಲ್ಲಿ 34,20 ಲಕ್ಷ ರೂ. ಸಂಗ್ರಹವಾಗಿತ್ತು. ಆರು ತಿಂಗಳಲ್ಲಿ ಆರು ಲಕ್ಷ ರೂ. ಹೆಚ್ಚಳವಾಗಿದೆ ಎಂದು ಧಾಮರ್ಿಕ ದತ್ತಿ ಇಲಾಖೆ ಕಾರ್ಯನಿವರ್ಾಹಕ ಅಧಿಕಾರಿ ಪ್ರಕಾಶ್ ರಾವ್ ತಿಳಿಸಿದ್ದಾರೆ. 

ದೇವಸ್ಥಾನದ ಧರ್ಮಕರ್ತ ಗಂಗಾಧರಯ್ಯ ಮಾತನಾಡಿ, ದೇವಸ್ಥಾನದಲ್ಲಿ 3 ಕೋಟಿ ರೂ.ಠೇವಣಿ ಇದೆ. 1 ಕೋಟಿ ರೂ. ದೇವಸ್ಥಾನದ ಖಾತೆಯಲ್ಲಿವಿದ್ದು, ಈ ಹಣದಿಂದ ಬೆಳ್ಳಿಬಾಗಿಲು ನಿಮರ್ಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಕೆಂಪಳ್ಳಿ ಗುರುಸಿದ್ದನಗೌಡ, ಎಂ.ನಾಗರಾಜ್, ದೇವರ ಮನಿ ಕರಿಯಪ್ಪ ಹಾಗೂ ಕನರ್ಾಟಕ ಗ್ರಾಮೀಣ ಬ್ಯಾಂಕ್ (ಕೆಜಿಬಿ)ಮ್ಯಾನೇಜರ್ ಸಿದ್ದಲಿಂಗನ ಗೌಡ ಇತರರಿದ್ದರು.