ಲೋಕದರ್ಶನ ವರದಿ
ಸಿದ್ದಾಪುರ,01: ಕಥೆ ಹೇಳೋದು ಕೇಳೋದು ಮನುಷ್ಯನಿಗೆ ಪ್ರಕೃತಿ ಸಹಜವಾದದ್ದು, ಕಥೆ ಜೀವನದ ಅವಿಬಾಜ್ಯ ಅಂಗ ಎಂದು ಹಿರಿಯ ವಿಮರ್ಶಕ ಸಾಗರದ ಟಿ.ಪಿ.ಅಶೋಕ ಅಭಿಪ್ರಾಯಪಟ್ಟರು.
ಅವರು ಶೃಂಗೇರಿ ಶಂಕರ ಮಠದಲ್ಲಿ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕನ್ನಡ ಸಣ್ಣ ಕಥೆಗಳ ಸ್ವರೂಪ ಮತ್ತು ಸಾಧ್ಯತೆ ಕುರಿತ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಕಥೆ ಪ್ರಾಚೀನ ಮಾಧ್ಯಮ , ಭಾಷೆಯ ನಿರೂಪಣೆ ಪ್ರಾರಂಭವಾದಾಗ ಕಥೆ ಪ್ರಾರಂಭವಾಗಿದೆ. ಕಥೆ ಮರು ನಿರೂಪಣೆಯಲ್ಲಿ ಬೆಳೆಯುತ್ತಿರುತ್ತದೆ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅರವಿಂದ ಕಕರ್ಿಕೋಡಿ ವಹಿಸಿದ್ದರು. ಮುಖ್ಯ ಅತಿಥಗಳಾಗಿ ಶೃಂಗೇರಿ ಶಂಕರ ಮಠದ ಧಮರ್ಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಸಾಹಿತಿಗಳಾದ ಪ್ರೋ. ಎಂ. ಎಸ್. ನಾಗರಾಜರಾವ್, ಪ್ರೋ. ಡಿ ಎಸ್ ಮಂಜುನಾಥ, ರಂಗ ಕಮರ್ಿ ಶ್ರೀಮತಿ ವಿದ್ಯಾ ಹೆಗಡೆ ಉಪಸ್ಥಿತರಿದ್ದರು.
ಜಿಲ್ಲಾ.ಕ.ಸಾ.ಪ. ಗೌ.ಕೋಶಾರ್ಧಯಕ್ಷರಾದ ಉಮೇಶ ಮುಂಡಳ್ಳಿ ಭಾವಗೀತೆ ಹಾಡಿದರು. ಸಿದ್ದಾಪುರ ತಾಲೂಕು ಕ.ಸಾ.ಪ. ಅಧ್ಯಕ್ಷ ನಾಗರಾಜ ಮಾಲ್ಕೋಡ ಸ್ವಾಗತಿಸಿದರು. ಜಿಲ್ಲಾ.ಕ.ಸಾ.ಪ. ಗೌ. ಕಾರ್ಯದಶರ್ೀ ಗಂಗಾಧರ ಕೊಳಗಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಜಿಲ್ಲಾ.ಕ.ಸಾ.ಪ. ಸಂಚಾಲಕ ಗೋಪಾಲ ನಾಯ್ಕ ಬಾಶಿ ನಿರೂಪಿಸಿದರು.