ಲೋಕದರ್ಶನ ವರದಿ
ಕಂಪ್ಲಿ 09: ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಅವಶ್ಯಕ ಎಂದು ಬಳ್ಳಾರಿಯ ಅಂತರಾಷ್ಟ್ರೀಯ ಕ್ರೀಡಾಪಟು ಮತ್ತು ತರಬೇತುದಾರ ಎಚ್.ಚಂದ್ರಶೇಖರಗೌಡ ಹೇಳಿದರುಇಲ್ಲಿನ ಸ.ನಾಪೇಟೆಯಲ್ಲಿರುವ ಚೇತನ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯು ಬುಧವಾರ ಶಾಲಾವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾ ದಿನೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ಮೇಲೆ ಶೈಕ್ಷಣಿಕ ಒತ್ತಡ ಹೇರಬಾರದು.ಮಕ್ಕಳು ಆಟೋಟಗಳಲ್ಲಿ ಭಾಗವಹಿಸುವಂತೆ ಶಿಕ್ಷಕರು, ಪೋಷಕರು ಪ್ರೇರೇಪಿಸಬೇಕಾಗಿದೆ.
ಚೇತನ ವಿಧ್ಯಾನೀಕೇತನ ಸಂಸ್ಥೆ ಉನ್ನತ ಮಟ್ಟದಲ್ಲಿ ಬೆಳೆಯಲಿಎಂದರು ವಾರ್ಷಿಕ ಕ್ರೀಡಾ ದಿನೋತ್ಸವ ಅಧ್ಯಕ್ಷತೆ ಬೆಂಗಳೂರಿನ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಚ್.ಸಿ.ರಾಘವೇಂದ್ರ ಅಧ್ಯಕ್ಷತೆವಹಿಸಿ ಮಾತನಾಡಿ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಪಾಲಕ ಪೋಷಕರೊಂದಿಗೆ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ಜಾಗೃತಿವಹಿಸಬೇಕು.
ಮಕ್ಕಳು ಮುಕ್ತ ಪರಿಸರದಲ್ಲಿ ಆಡಿ ಬೆಳೆದಾಗ ಮಾತ್ರ ಸರ್ವಾಂಗೀಣ ಬೆಳವಣಿಗೆ ಹೊಂದಲು ಸಾಧ್ಯ ಎಂದರು.ಮಕ್ಕಳಿಂದ ಯೋಗ, ಕಬಡ್ಡಿ, ಥ್ರೋಬಾಲ್, ಗುಂಡು ಎಸೆತ, ವಾಲಿಬಾಲ್, ಓಟ ಸೇರಿ ಜನಪದ ನೃತ್ಯ, ಭರತ ನಾಟ್ಯ ಸೇರಿ ನಾನಾ ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದರು. ಚೇತನ ಟ್ರಸ್ಟ್ನ ಮುಖ್ಯಸ್ಥರಾದ ಜಿ.ಶ್ರೀನಿವಾಸ್, ಚೇತನ ವಿದ್ಯಾನಿಕೇತನ ಶಾಲೆಯ ಪ್ರಾಚಾರ್ಯರು ಜಿ.ಜಯಲಕ್ಷ್ಮಿ, ಪುರಸಭೆ ಅಧ್ಯಕ್ಷ ಎಂ.ಸುಧೀರ್, ಸದಸ್ಯ ಟಿ.ವಿ.ಸುದರ್ಶನರೆಡ್ಡಿ, ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಪ್ರಭಾರೆ ಉಪ ಪ್ರಾಚಾರ್ಯ ಎಸ್.ಜಿ.ಚಿತ್ರಗಾರ್, ಸಿಆರ್ಪಿ ಜೆ.ಕೆ.ಮಂಜುನಾಥ, ದೈಹಿಕ ಶಿಕ್ಷಕ ಬೀರಲಿಂಗೇಶ್ವರ, ಪ್ರಮುಖರಾದ ಕಲ್ಗುಡಿ ನಾಗರತ್ನ, ಕ್ರೀಡಾಪಟು ಗಾಳಿ ಶಿವಕುಮಾರ್ ಚೇತನ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಸಿಬ್ಬಂದಿ ಮತ್ತು ಪಾಲಕರು ಮಕ್ಕಳು ಸೇರಿ ಅನೇಕರಿದ್ದರು