ಜೇಟ್ಲಿ ನಿಧನ: ಪೂರ್ವ ನಿಯೋಜಿತ ಕಾರ್ಯ ಬದಿಗೊತ್ತಿ ದೆಹಲಿಗೆ ಹಿಂತಿರುಗಿದ ಅಮಿತ್ ಶಾ

  ಹೈದರಾಬಾದ್, ಆ 24     ಬಿಜೆಪಿ ಹಿರಿಯ ಮುಖಂಡ, ಕೇಂದ್ರದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ನಿಧನದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಹೈದರಾಬಾದ್ ಭೇಟಿಯನ್ನು ಅರ್ಧಕ್ಕೇ ನಿಲ್ಲಿಸಿ ದೆಹಲಿಗೆ ವಾಪಸಾಗಿದ್ದಾರೆ 

  ಪೂರ್ವ ನಿಗದಿಯಂತೆ ಶನಿವಾರ ಹೈದರಾಬಾದ್ ನಲ್ಲಿಯೇ ಹಲವು ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಭಾಗಿಯಾಗಬೇಕಿತ್ತು    

  ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್ ನ್ಯಾಷನಲ್ ಪೋಲಿಸ್ ಅಕಾಡೆಮಿಯಲ್ಲಿ ನಡೆದ ಐಪಿಎಸ್ ಪ್ರೊಬೆಷನರ್ಗಳ ಪಾಸಿಂಗ್ ಪೆರೇಡ್ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಮಿತ್ ಶಾ, ಅರುಣ್ ಜೇಟ್ಲಿ ನಿಧನದ ಸುದ್ದಿ ತಿಳಿದು ತೀವ್ರ ಶೋಕ ವ್ಯಕ್ತಪಡಿಸಿದರು 

  ಅರುಣ್ ಜೇಟ್ಲಿಯವರು ಕೇವಲ ಪಕ್ಷದ ಮುಖಂಡರಾಗಿರಲಿಲ್ಲ   ಬದಲಿಗೆ ನಮ್ಮ ಕುಟುಂಬದ ಸದಸ್ಯರಲ್ಲೊಬ್ಬರಾಗಿದ್ದರು ಎಂದು ಅಮಿತ್ ಶಾ ತಿಳಿಸಿದರು.