ಸ್ವಯಂಭು ವರದ ಸಿದ್ಧಿವಿನಾಯಕ ವಿಗ್ರಹ ಪ್ರತಿಷ್ಠಾಪನೆ

Installation of Swayambhu Varada Siddhivinayak idol

ಬೆಳಗಾವಿ 06: ಮಾರ್ಕಂಡೇಯನಗರ, ಎಪಿಎಂಸಿ ನಿವಾಸಿ ಮಲಿಕಾರ್ಜುನ ಸತ್ತಿಗಿರಿ ಅವರು 2018ನೇ ಸಾಲಿನಲ್ಲಿ ನಿರ್ಮಿಸಿರುವ ದ್ವಿಭುಜ ಸ್ವಯಂಭು ವರದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 2 ಡಿಸೆಂಬರಿ​‍್ನಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಡಿ. 6 ರಂದು ಶುಕ್ರವಾರ ಮಹಾಲಕ್ಷ್ಮೀ - ಮಹಾಸರಸ್ವತಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ದೇವಸ್ಥಾನದಲ್ಲಿ  ಹಮ್ಮಿಕೊಳ್ಳಲಾಗಿತ್ತು.  

ಡಿಸೆಂಬರ್ 2 ರಂದು ಸಂಗಮೇಶ್ವರನಗರ ಎಪಿಎಂಸಿ ಬಳಿಯ ಸಂಗಮೇಶ್ವರ ದೇವಸ್ಥಾನದಿಂದ ವರದ ಸಿದ್ಧಿವಿನಾಯಕ ದೇವಸ್ಥಾನದವರೆಗೆ ಮಂಗಳವಾದ್ಯದೊಂದಿಗೆ ಕಲಶ ಮೆರವಣಿಗೆಯು ಧೋಲ್ ತಾಶಾ ನಾದ ವಾದ್ಯಗಳೊಂದಿಗೆ ದೇವಸ್ಥಾನವನ್ನು ತಲುಪಿತು. ನಂತರ ಅಲ್ಲಿ ವಿವಿಧ ಕಾರ್ಯಕ್ರಮಗಳನ್ನು  ಮುಕ್ತಾಯಗೊಳಿಸಲಾಯಿತು. ಡಿ. 3 ರಿಂದ 5ರ ವರೆಗೆ ಪ್ರತಿದಿನ ಸಂಜೆ 7.30ಕ್ಕೆ ಮಹಾ ಆರತಿ ಮತ್ತು ದಿನವೀಡೀ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಡಿ. 6ರಂದು ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಸರಸ್ವತಿ, ಮಹಾಲಕ್ಷ್ಮಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸವನ್ನು ಪೂಜ್ಯರೋಹನ್ ಕಾರ್ಯಕ್ರಮ ಪರಮಪೂಜ್ಯ ಮ.  ನಿ. ಪ್ರ. ಗುರುಸಿದ್ಧ ಮಹಾಸ್ವಾಮೀಜಿ ಕಾರಂಜಿಮಠ ಬೆಳಗಾವಿ ಇವರ ಪುಣ್ಯ ಹಸ್ತದಿಂದ ನೆರೆವೇರಿತು ಹಾಗೂ ಮಧ್ಯಾಹ್ನ ಭಕ್ತಾದಿಗಳಿಗೆ ಮಹಾಪ್ರಸಾದ ಆಯೋಜಿಸಲಾಗಿತ್ತು. 

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸತ್ತಿಗಿರಿ ಅವರು ಜನಕಲ್ಯಾಣಕ್ಕಾಗಿ 21 ದಿನಗಳ ಉಪವಾಸ ವೃತವನ್ನು ಆಚರಿಸಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.