ಬೆಳಗಾವಿ : ರಾಜ್ಯ ಸಾರಿಗೆ ಬಸ್ ಮೇಲೆ ಭಗವಾ ಧ್ವಜವನ್ನು ಕಟ್ಟಿ ಬಸ್ಸಿಗೆ ಕರಿ ಮಸಿ ಬಳಿದ ಮಹಾ ಪುಂಡರು ಕರ್ನಾಟಕ ಸರಕಾರ ಮತ್ತು ಕರವೇ ವಿರುದ್ದ ಘೋಷಣೆ ಹಾಕಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ.
ಶುಕ್ರವಾರ ಬೆಳಗಾವಿಯಿಂದ ಸುಳೆಭಾವಿಗೆ ಹೊರಟಿದ್ದ ನಗರ ಸಂಚಾರಿ ಬಸ್ ದಲ್ಲಿ ಮರಾಠಿ ಮಾತನಾಡದ ಬಸ್ ಕಂಡಕ್ಟರ್ ಮೇಲೆ ಕೆಲ ಪುಂಡರು ಹಲ್ಲೆ ನಡೆಸಿದ್ದರು. ಇದರ ವಿರುದ್ದವಾಗಿ ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕರ್ನಾಟಕ ಬಸ್ ತಡೆದು ಪುಂಡಾಟ ನಡೆಸಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರ ನಗರದಲ್ಲಿ ಶಿವಸೇನೆ (ಠಾಕರೆ ಬಣ) ಪ್ರತಿಭಟನೆ ನಡೆಸಿದೆ.
ರಾಜ್ಯ ಸರಕಾರ ಮತ್ತು ಕರವೇ ಕಾರ್ಯಕರ್ತ ವಿರೋಧ ಘೋಷಣೆ ಹಾಕಿ ಕೂಗಿ ಪ್ರತಿಭಟನೆ ನಡೆಸಿದ್ದಾರೆ.ಕೊಲ್ಹಾಪುರದಿಂದ ಕರ್ನಾಟಕಕ್ಕೆ ಆಗಮಿಸುವ ಬಸ್ ಗಳ ಸಂಚಾರ ಸ್ಥಗಿತ ಮಾಡಲಾಗಿದೆ.