ಲಕ್ನೋ 22: ಡಬಲ್ ಇಂಜಿನ್ ಸರಕಾರವು ಉತ್ತರ ಪ್ರದೇಶದಲ್ಲಿ ಆಧ್ಯಾತ್ಮಿಕ ಮತ್ತು ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಗೆ ಚಾಲನೆ ನೀಡುತ್ತದೆ ಮತ್ತು ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಘೋಷಿಸಿದ್ದಾರೆ.
ಅವರು ಗೋಲ ಗೋಕರ್ಣನಾಥ ಶಿವ ದೇವಾಲಯ ಕಾರಿಡಾರ್ ಸೇರಿದಂತೆ ಲಖೀಂಪುರ ಖೇರಿಯ ಗೋಲ ಗೋಕರ್ಣನಾಥ ರಾಜೇಂದ್ರ ಗಿರಿ ಸ್ಮಾರಕ ಕ್ರೀಡಾಂಗಣದಲ್ಲಿ 1,622 ಕೋಟಿ ರೂ.ಗಳ 373 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದರು.
ಲಖಿಂಪುರ ಖೇರಿಯು ಇನ್ನು ಮುಂದೆ ಹಿಂದುಳಿದ ಜಿಲ್ಲೆಯಾಗಿಲ್ಲ. ಇಲ್ಲಿನ ಫಲವತ್ತಾದ ಭೂಮಿ ಬಂಗಾರದಂತಿದೆ ಎಂದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಲಖೀಂಪುರ ಖೇರಿ ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು ಎಂದು, ಜಿಲ್ಲೆಯ ಹಿಂದಿನ ಬದಲಾವಣೆಯನ್ನು ಎತ್ತಿ ತೋರಿಸಿದರು.