ಚೀನಾದಲ್ಲಿ ಕೊರೊನಾ ವೈರಸ್‌ನಂತೆ ಮತ್ತೊಂದು ವೈರಸ್ ಪತ್ತೆ

Another virus like corona virus has been detected in China

ಬೀಜಿಂಗ್ 22: ಕೋವಿಡ್ ಬಳಿಕ ಮತ್ತೊಂದು ಮಹಾಮಾರಿ ಆತಂಕ ಶುರುವಾಗಿದ್ದು, ಕೋವಿಡ್ ವೈರಸ್ ಪತ್ತೆಯಾಗಿದ್ದ ಅದೇ ಚೀನಾದಲ್ಲಿ ಇದೀಗ ಬಾವಲಿ ಮೂಲಕ ಮನಷ್ಯರಿಗೆ ಹರಡುವ HKU5-CoV-2 ಎಂಬ ವೈರಾಣು ಪತ್ತೆಯಾಗಿದೆ.

ಬಾವಲಿ ಮೂಲಕ ಮಾನವನ ದೇಹ ಹೊಕ್ಕಿರುವ ಈ ಹೊಸ ಬಗೆಯ ವೈರಸ್‌ಗೆ ಚೀನಿ ಸಂಶೋಧಕರು HKU5-CoV-2 ಎಂದು ನಾಮಕರಣ ಮಾಡಿದ್ದಾರೆ.

ಈ ಹೊಸ ಬಗೆಯ ಅಪಾಯಕಾರಿ ವೈರಸ್ ಕೊರೊನಾವೈರಸ್‌ನಂತೆ ಮಾನವನ ಜೀವಕೋಶದ ಪ್ರೋಟಿನ್‌ಗಳನ್ನು ಹಾನಿ ಮಾಡಿ ಒಬ್ಬರಿಂದ ಮತ್ತೊಬ್ಬರಿಗೆ ಗಾಳಿಯ ಮೂಲಕ ರೋಗ ಹರಡಬಹುದು ಎಂದು ಹೇಳಿದ್ದಾರೆ.

HKU5-CoV-2 ಎಂಬ ಹೊಸ ವೈರಸ್ ಅನ್ನು "ಬ್ಯಾಟ್‌ವುಮನ್" ಎಂದು ಕರೆಯಲ್ಪಡುವ ಪ್ರಸಿದ್ಧ ವಿಜ್ಞಾನಿ ಶಿ ಝೆಂಗ್ಲಿ ನೇತೃತ್ವದ ವೈರಾಲಜಿಸ್ಟ್‌ಗಳ ತಂಡವು ಕಂಡುಹಿಡಿದಿದೆ.