ನೇಸರಗಿ.ಫೆ. 22. ಟಾಟಾ ಅವರ ಜೀವನ ಶಿಕ್ಷಣ ಸಮಯದಲ್ಲಿ ವಿನೂತನ ಶಿಕ್ಷಣ ಕಲಿತು ಖಾಸಗಿ ಸಂಸ್ಥೆ ಕಟ್ಟಿ ಆ ಒಂದು ಸಂಸ್ಥೆಯನ್ನು ಜಾಗತಿಕ ಉನ್ನತ ಕಂಪನಿ ಆಗಿ ಮಾಡಿ ಅನೇಕ ಯುವಕರಿಗೆ ಉದ್ಯೋಗ ನೀಡಿದ ವ್ಯಕ್ತಿ ತರಹ ಶಿಕ್ಷಣ ಮಾಡಿ ಖಾಸಗಿ ಉದ್ಯಮಗಳಲ್ಲಿ ತಮ್ಮ ವಿನೂತನ ಸಂಶೋಧನೆ ಪ್ರತಿಭೆ ತೋರಿಸಿ ಮುಂದೆ ಬರಬೇಕು ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಹೇಳಿದರು.
ಅವರು ಶನಿವಾರದಂದು ಇಲ್ಲಿನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ದ್ವಿತೀಯ ಪಿ ಯು ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ, ಪ್ರಶಸ್ತಿ ವಿತರಣಾ ಸಮಾರಂಭ, 2024 ನೇ ಸಾಲಿನಲ್ಲಿ ಶಾಲೆಗೆ ಕಲಾ , ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ನಗದು ಬಹುಮಾನ ವಿತರಿಸಿ ಮಾತನಾಡಿ ಈಗಿನ ಪರಿಸ್ಥಿತಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರಿ ನೌಕರಿ ಸಿಗುವದಿಲ್ಲ ಅದಕ್ಕಾಗಿ ಖಾಸಗಿ ಕಂಪನಿಗಳಿಗೆ ಮೊರೆ ಹೋಗುವದು ಉತ್ತಮ ಅಲ್ಲಿ ನಿಮ್ಮ ಪ್ರತಿಭೆಗಾಗಿ ಹಂತ ಹಂತವಾಗಿ ಬೆಳೆಯುವ ಅವಕಾಶ ಇರುತ್ತದೆ. ಶಿಕ್ಷಣದ ಜೊತೆಗೆ ಕಂಪ್ಯೂಟರ್, ಇಂಗ್ಲಿಷ್ ಸ್ಪೀಕಿಂಗ್ , ತರಬೇತಿ ಪಡೆಯಿರಿ, ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನ ಪಡೆಯಿರಿ, ಸರ್ಕಾರಿ ನೌಕರಿ ಉತ್ತಮ, ಉದ್ಯೋಗ ಮಧ್ಯಮ, ಕೃಷಿ ಹಿನ್ನಡೆ ಆಗಿದೆ. ಇಂದು 8 ತರಗತಿ ವಿದ್ಯಾರ್ಥಿನಿಯೊಬ್ಬಳು ಮನೆ ಕೆಲಸಕ್ಕೆ ಒಂದು ಸಂಶೋಧನೆ ಮಾಡಿ ಅವಿಸ್ಕಾರ ಮಾಡಿದ್ದಾಳೆ ಆಕೆಗೆ ಈಗ ಜಪಾನ ದೇಶದಿಂದ ಕೆಲಸಕ್ಕೆ ಅವ್ಹಾಣ ಬಂದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಮ್ಮ ಸ್ವಂತ ಖರ್ಚಿನಿಂದ ನೀಟ್,ಸೀಟ್ ತರಬೇತಿ ನೀಡುತ್ತಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ವಿದ್ಯಾರ್ಥಿಗಳ ಹಾಗೆ ಶಿಕ್ಷಣದಲ್ಲಿ ಮುಂದೆ ಬರಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ ಡಾ. ಎಫ್ ಡಿ ಗದ್ದಿಗೌಡರ, ಪಿ ಯು ಸಿ ಕಾಲೇಜು ಪ್ರಿನ್ಸಿಪಾಲ ಎನ್ ಎಮ್ ಕುದರಿಮೋತಿ,ಪ್ರಾಚಾರ್ಯ ಆರ್ ಕೆ ಪಾಟೀಲ ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಕಠಿಣ ಪರಿಶ್ರಮದಿಂದ ಓದಿ ಹೆಚ್ಚಿನ ಅಂಕ ಪಡೆದು ಉನ್ನತ ವ್ಯಾಸಂಗ ಮಾಡಿ ಸಮಾಜ ಮತ್ತು ಜೀವನದಲ್ಲಿ ಮುಂದೆ ಬನ್ನಿ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕಿ ರೇಣುಕಾ ನಿಂಬಾಳ, ಕಾಲೇಜು ಸುಧಾರಣಾ ಸಮಿತಿ ಉಪಾಧ್ಯಕ್ಷ ಬಸವರಾಜ ಚಿಕ್ಕನಗೌಡ್ರ, ಸುರೇಶ ಅಗಸಿಮನಿ, ಉಪನ್ಯಾಸಕರಾದ ಎಸ್ ಸಿ ದೊಡಮನಿ , ಸಿ ಬಿ. ರೊಟ್ಟಿ, ಎಮ್ ಎಚ್, ಬೆಟಗೇರಿ, ಸಂದ್ಯಾ ಕಟ್ಟಿಮನಿ, ಪ್ರಶಾಂತ ಬೋಳನ್ನವರ, ಕರುಣಾ ಗಾಣಿಗೇರ, ಭೋಧಕ, ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.