ನೆರೆ ಹಾನಿ, ಪರಿಹಾರ ಕಾರ್ಯ ಕುರಿತು ಪರಿಶೀಲನೆ

ಗದಗ : ಇತ್ತೀಚಿಗೆ ಮಲಪ್ರಭಾ ನದಿಯಿಂದ ಉಂಟಾದ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಪ್ರವಾಸೊದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಟಿ.ಕೆ.ಅನೀಲಕುಮಾರ ಅವರಿಂದು ನರಗುಂದ ತಾಲೂಕಿನ ಕೊಣ್ಣೂರು ಸೇರಿದಂತೆ ನೆರೆಪೀಡಿತ ಗ್ರಾಮಗಳಿಗೆ ಭೇಟಿ ನೀಡಿದರು. ಕೊಣ್ಣೂರಿನ ಎ.ಪಿ.ಎಂ.ಸಿ ಆವರಣದಲ್ಲಿ 121 ಶೆಡ್ಗಳಲ್ಲಿ ತಾತ್ಕಾಲಿಕ ಆಶ್ರಯ ಪಡೆದಿರುವ ಕೊಣ್ಣೂರಿನ ನೆರೆ ಸಂತ್ರಸ್ಥರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಸ್ವೀಕರಿಸಿದರು. ನರಗುಂದ ತಹಶೀಲ್ದಾರ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಜಿಲ್ಲೆಯಲ್ಲಿ ನೆರೆ ಪೀಡಿತ ಗ್ರಾಮಗಳ ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ವಿತರಣೆ, ಮನೆ ಹಾನಿ ಸೇರಿದಂತೆ ಸರಕಾರಿ ಆಸ್ತಿಗಳ ಹಾನಿಯ ಸಮೀಕ್ಷೆ ಕುರಿತಂತೆ ಪರಿಶೀಲನೆ ನಡೆಸಿದರು. 

ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಲಪ್ರಭಾ ನದಿಯ ಹಾಗೂ ಬೆಣ್ಣೆಹಳ್ಳ ಪ್ರವಾಹದಿಂದ ನರಗುಂದ ಹಾಗೂ ರೋಣದ ತಲಾ 16 ಗ್ರಾಮಗಳಲ್ಲ ಉಂಟಾಗಿದ್ದ ನೆರೆ ಸಂಕಷ್ಟ ಪರಿಸ್ಥಿತಿಯನ್ನು ಜಿಲ್ಲಾಡಳಿತ ಅದನ್ನು ನಿಭಾಯಿಸಿದ ಕುರಿತು ಹಾಗೂ ಸಂತ್ರಸ್ತರ ಸ್ಥಳಾಂತರ ಹಾಗೂ ಪರಿಹಾರ ವಿತರಣೆ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ  ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರುದ್ರೇಶ ಎಸ್.ಎನ್. ತಹಶೀಲ್ದಾರ ಕೋರಿಶೆಟ್ಟರ, ರೋಣ ತಹಶೀಲ್ದಾರ ಶರಣಮ್ಮ ಕಾರಿ, ಅಲ್ಲದೇ ಪೋಲಿಸ, ಕಂದಾಯ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.